ಧಾರವಾಡ: ತಾನು ಶಾಲೆಯಲ್ಲಿ ಕೇಳಿದ್ದ ಪಾಠವನ್ನೇ ತನ್ನ ಕುಟುಂಬಕ್ಕೆ ಅನ್ವಯಿಸಿಕೊಂಡು ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಗೆ ನ್ಯಾಯ ದೊರಕಿಸಿ ಕೊಟ್ಟ ಅಪೂರ್ವ ಘಟನೆ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.
ಧಾರವಾಡ ಜೆಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನಿಂದ ಕಾನೂನ್ ಉ ಅರಿವು ಕುರಿತಂತೆ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಈ ತರಗತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ತರಗತಿಯಾದ ನಾಲ್ಕು ದಿನದಲ್ಲಿಯೇ ತನ್ನ ತಾಯಿಗೆ ನ್ಯಾಯಾಲಯದಿಂದ ನ್ಯಾಯ ದೊರಕಿಸಿದ್ದಾಳೆ.
ಧಾರವಾಡದ ಪ್ರೆಸೆಂಟೇಷನ್ ಬಾಲಕಿಯರ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ರೇಖಾ ಮೈಸೂರು ಈ ಸಾಧನೆ ಮೆರೆದವಳು. ಸಾವಕ್ಕ ಎನ್ನುವವರ ಮಗಳಾದ ರೇಖಾ ತಾಯಿ ಮತ್ತು ಸಹೋದರಿಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ನೀಡಿದ್ದ ದೂರಿಗೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಹುದ್ದಾರ ಸ್ಪಂದಿಸಿ ಸ್ಥಳೀಯ ಪೋಲೀಸರಿಗೆ ತನಿಖೆಗಾಗಿ ಆದೇಶಿಅಸಿದ್ದರು. ಆದೇಶ ಸಿಕ್ಕಿದೊಡನೆ ಕಾರ್ಯಪ್ರವೃತ್ತರಾದ ಪೋಲೀಸರು ಪ್ರಕರಣವನ್ನು ಇತ್ಯರ್ಥಗೊಳಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡೀದ್ದಾರೆ.
ಘಟನೆ ವಿವರ: ರೇಖಾ ತಾಯಿ ಸಾವಕ್ಕ ಹಾಗೂ ಆಕೆಯ ಪತಿ ಮಲ್ಲಿಕಾರ್ಜುನ ಮೈಸೂರ ಆರು ವರ್ಷಗಳಿಂದ ಬೇರೆ ಬೇರೆ ಆಗಿದ್ದರು. ಸಾವಕ್ಕ ನವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಅವರಲ್ಲಿ ರೇಖಾ ಕಿರಿಯವಳಾಗಿದ್ದಾಳೆ. ಸಾವಕ್ಕ ತನ್ನ ಪತಿಯಿಂದ ಬೇರಾದ ಬಳಿಕ ಅವನ ಬಳಿಯಿದ್ದ 2.20ಎಕರೆ ಜಮೀನಿನಲ್ಲಿ 1.10ಎಕರೆಯನ್ನು ತಾನು ಪಡೆದುಕೊಂಡಿದ್ದರು. ಆದರೆ ಗ್ರಾಮದಲ್ಲಿದ್ದ ಅಬ್ದುಲ್ ಅಜೀಜ ಸಾಬ್ ದೊಡ್ಡಮನಿ ಹಾಗೂ ಇತರರು ಜಮೀನನ್ನು ತಮ್ಮ ವಶಕ್ಕೆ ನಿಡುವಂತೆ ಒತ್ತಡ ಹೇರುತ್ತಿದ್ದರು.
ನೀವಾಗಿ ನೀದದಿದ್ದರೆ ಬಲವಂತವಾಗಿ ಜಮೀನನ್ನು ಬರೆಸಿಕೊಳ್ಳುತ್ತೇವೆ, ನಮಗೆ ಪೋಲೀಸರು, ಮೇಲಾಧಿಕಾರಿಗಳ ಬೆಂಬಲವಿದೆ ಎಂದು ಅಜೀಜ ಬೆದರಿಕೆಯೊಡ್ಡಿದ್ದನು. ಇಷ್ಟು ಸಾಲದೆನ್ನುವಂತೆ ಜಮೀನಿನ ಹೆಸರಿನಲ್ಲಿ ಸುಳ್ಳು ಕಾಗದ ಪತ್ರ ತಯಾರಿಸಿ ನಕಲಿ ಸಹಿ ಮಾಡಿದ್ದಾರೆ. 'ನಾನು ಹಾಗೂ ನನ್ನ ಅಕ್ಕ ಅಪ್ರಾಪ್ತ ವಯಸ್ಕರಾಗಿದ್ದು ಜಮೀನು ಮಾರಾಟಕ್ಕೆ ನಾವುಗಳು ಒಪ್ಪಿದ್ದೇವೆಂದು ಪತ್ರದಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ. ನಮ್ಮ ಮನೆಗೆಲಸ ಮಾಡಿ ನಮ್ಮನ್ನು ಓದಿಸುತ್ತಿದ್ದು ನಿತ್ಯದ ಜೀವನವೇ ಕಷ್ಟಕರವಾಗಿದೆ. ನಮ್ಮ ಕುಟುಂಬಕ್ಕೆ ಯಾವುದೇ ಅಪಾಯ ಒದಗಿದರೆ ಅದಕ್ಕೆ ಅಜೀಜ್ ಸಾಬ್ ಹಾಗೂ ಅವರ ನಿಕಟವರ್ತಿಗಳು ಕಾರಣ. ನಮಗೆ ನ್ಯಾಯ ದೊರಕಿಸಿ.'
ಹೀಗೆಂದು ರೇಖಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಳು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ತಕ್ಷಣವೇ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಅವರಿಗೆ ಪತ್ರ ಬರೆದು ಪ್ರಕರಣ ಇತ್ಯರ್ಥಪಡಿಸುವಂತೆ ಸೂಚಿಸಿದ್ದಾರೆ.
ಪ್ರಕರಣ ಸುಖಾಂತಗೊಂಡ ಸಂತಸದಲ್ಲಿರುವ ರೇಖಾ "ಶಾಲೆಯಲ್ಲಿ ಮಾಡಿದ ಪಾಠ ನನಗೆ ಇಂಥದ್ದೊಂದು ಧೈರ್ಯ ನೀಡಿತ್ತು. ನನ್ನ ಮನವಿಗೆ ಸ್ಪಂದಿಸಿದ್ದ ನ್ಯಾಯಾಧೀಶರಿಗೆ ನಾನು ಋಣಿ’ ಎಂದಿದ್ದಾಳೆ. ಒಟ್ಟಾರೆಯಾಗಿ ಶಿಕ್ಷಣವೇ ಶಕ್ತಿ ಎನ್ನುವ ಮಾತಿಗೆ ಈಘಟನೆ ಸಾಕ್ಷಿಯಾಗಿದೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos