ಜೆರುಸಲೇಂ: ಇಸ್ರೇಲಿನ ಪ್ರತಿಷ್ಠಿತ ಜೆನಿಸಿಸ್ ಬಹುಮಾನವನ್ನು ಪ್ರಖ್ಯಾತ ಭಾರತೀಯ ಮೂಲದ ಬ್ರಿಟಿಷ್ ಶಿಲ್ಪಿ ಹಾಗೂ ಸಿರಿಯಾ ನಿರಾಶ್ರಿತರ ಹಕ್ಕುಗಳ ಪ್ರತಿಪಾದಕ ಅನೀಶ್ ಕಪೂರ್ ಗೆದ್ದುಕೊಂಡಿದ್ದಾರೆ.
62 ವರ್ಷದ ಅನೀಶ್ ಕಪೂರ್ ಸರಿಯಾ ನಿರಾಶ್ರಿತರ ವಿರುದ್ಧದ ಸರ್ಕಾರಿ ನೀತಿಗಳನ್ನು ತೀವ್ರವಾಗಿ ಖಂಡಿಸಿದ್ದರು. ಇನ್ನು ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿರುವ ನತನ್ ಶರಾನ್ಸ್ಕಿ ಕಪೂರ್ ಅವರ ಕಲೆಗಾರಿಕೆಯನ್ನು ಹಾಡಿ ಹೊಗಳಿದ್ದಾರೆ.
ವಿಶ್ವದಲ್ಲಿ ಇದೀಗ ಆರು ಕೋಟಿ ನಿರಾಶ್ರಿತರಿದ್ದಾರೆ. ಭೌಗೋಳಿಕವಾಗಿ ಅವರ ಈ ಸ್ಥಿತಿಗೆ ಕಾರಣಗಳೇನೇ ಇರಲಿ, ನಿರಾಶ್ರಿತರ ಸಮಸ್ಯೆಯಂತೂ ನಮ್ಮ ಮನೆಗ ಬಾಗಿಲವರೆಗೂ ಬಂದು ನಿತಂದೆ ಎಂದು ಅನೀಶ್ ಕಪೂರ್ ಹೇಳಿದ್ದಾರೆ.