ನವದೆಹಲಿ: ಭಾರತದಲ್ಲಿ ಮಾನ್ಯತೆ ಸಿಗದ ನೋಂದಣಿಯಾಗಿರುವ ರಾಜಕೀಯ ಪಕ್ಷಗಳು 164 ಉಚಿತ ಚಿಹ್ನೆಗಳನ್ನು ಬಳಸಬಹುದು. ಇಲ್ಲಿ ಆಸಕ್ತಿ ವಿಷಯವೆಂದರೆ, ಕೆಲವೊಂದು ಚಿಹ್ನೆಗಳು ನೆಕ್ಲೇಸ್, ಬೆಂಚು, ಬೆಲ್ಟ್, ಬಲೂನ್ ಮತ್ತು ಬೇಬಿ ವಾಕರ್ ಗಳನ್ನು ಒಳಗೊಂಡಿವೆ.
ಚುನಾವಣಾ ಗುರುತು(ಮೀಸಲಾತಿ ಮತ್ತು ಹಂಚಿಕೆ) ಆದೇಶ 1968ರ ಪ್ರಕಾರ, ಚಿಹ್ನೆಗಳನ್ನು ಕಾಯ್ದಿರಿಸಬಹುದು ಅಥವಾ ಉಚಿತವಾಗಿಯೂ ನೀಡಲಾಗುತ್ತದೆ. ಕಾಯ್ದಿರಿಸಿದ ಚಿಹ್ನೆಗಳು ಗುರುತು ಪಡೆದಿರುವ ರಾಜಕೀಯ ಪಕ್ಷಗಳಿಗೆ ಮೀಸಲಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳಿಗೆ ವಿಶೇಷವಾಗಿ ನೀಡಲಾಗುತ್ತದೆ. ಇದರ ಬದಲಾಗಿ ಉಚಿತ ಗುರುತು ಮಾನ್ಯತೆ ಪಡೆಯದಿರುವ ಪಕ್ಷಗಳಿಗೆ ಮೀಸಲಾಗಿರುತ್ತದೆ.
ಚುನಾವಣಾ ಆಯೋಗ ಹೊರಡಿಸುವ ಇತರ ಚಿಹ್ನೆಗಳಲ್ಲಿ ಕೆಲವು ಆಸಕ್ತಿಕರ ಹೆಸರುಗಳಾದ ಅಲ್ಮಿರಾ, ಕಪ್ಪು ಹಲಗೆ, ಗ್ಯಾಸ್ ಸ್ಟೌವ್, ಗ್ಯಾಸ್ ಸಿಲಿಂಡರ್, ಗ್ರಾಮಾಫೋನ್, ದ್ರಾಕ್ಷಿ, ಕುತ್ತಿಗೆ ಪಟ್ಟಿ, ನೈಲ್ ಕಟ್ಟರ್, ಪೀನಟ್ಸ್, 7 ಕಿರಣಗಳ ಪೆನ್ ನಿಬ್, ಬೆಂಕಿ ಪೊಟ್ಟಣ, ನೂಡಲ್ ಬೌಲ್, ಪ್ರೆಸ್ಸರ್ ಕುಕ್ಕರ್ ಮತ್ತು ರೋಡ್ ರೋಲರ್ ನ್ನು ಒಳಗೊಂಡಿವೆ.
ಇಂದು ನಮ್ಮ ದೇಶದಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಎಸ್ಪಿ, ಬಿಜೆಪಿ, ಸಿಪಿಐ(ಎಂ), ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ, ತೃಣಮೂಲ ಕಾಂಗ್ರೆಸ್ ಹೀಗೆ ಏಳು ಪಕ್ಷಗಳು ಅಧಿಕೃತ ಪಕ್ಷಗಳಾಗಿವೆ. ರಾಜ್ಯ ಮಟ್ಟದಲ್ಲಿ 46 ರಾಜಕೀಯ ಪಕ್ಷಗಳು ಗುರುತು ಪಡೆದಿವೆ. ಈ ಪಕ್ಷಗಳು ದೇಶ ಮತ್ತು ರಾಜ್ಯ ಮಟ್ಟದಲ್ಲಿ ಕಾಯ್ದಿರಿಸಿದ ಗುರುತು ಹೊಂದಿವೆ.
ಚುನಾವಣಾ ಆಯೋಗ ಪ್ರತಿನಿತ್ಯ ಉಚಿತ ಗುರುತುಗಳನ್ನು ನೀಡುತ್ತಿದ್ದು ಚುನಾವಣೆ ಸ್ಪರ್ಧಿಸಲು ಪಕ್ಷಗಳು ಬಳಸಿಕೊಳ್ಳ ಬಹುದು. ಈ ಅಧಿಸೂಚನೆ ಪ್ರಕಾರ, ಭಾರತ ದೇಶದಲ್ಲಿ ನೋಂದಣಿಯಾಗಿರುವ ಆದರೆ ಗುರುತಿಸಲಾಗದ 1837 ರಾಜಕೀಯ ಪಕ್ಷಗಳಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos