ಸತೀಶ್ ಪೆರುಮಾಳ್ 
ವಿಶೇಷ

ನಿಜಜೀವನದ ಅನುಭವವನ್ನೇ ಹಾಸ್ಯ ಆಗಿಸುವುದು ನನಗಿಷ್ಟ: ಸತೀಶ್ ಪೆರುಮಾಳ್

ಸತೀಶ್ ಪೆರುಮಾಳ್, ಖ್ಯಾತ ಕಾಮಿಕ್ ಚಿತ್ರ ತಯಾರಕರು. ಆದರೆ ಮುಂಬೈ, ದೆಹಲಿಯ ಕಾಮಿಕ್ ಚಿತ್ರ ತಯಾರಕರಂತೆ ತಾವೆಂದೂ ಪ್ರಸಿದ್ದಿ ಹೊಂದಿರಲಿಲ್ಲ

ಬೆಂಗಳೂರು: ಸತೀಶ್ ಪೆರುಮಾಳ್, ಖ್ಯಾತ ಕಾಮಿಕ್ ಚಿತ್ರ ತಯಾರಕರು. ಆದರೆ ಮುಂಬೈ, ದೆಹಲಿಯ ಕಾಮಿಕ್ ಚಿತ್ರ ತಯಾರಕರಂತೆ ತಾವೆಂದೂ ಪ್ರಸಿದ್ದಿ ಹೊಂದಿರಲಿಲ್ಲ. ಆದರೆ ಕೆಲವು ಬಾರಿ ಇವರ ಕಾಮಿಕ್ಸ್ ಗಳೂ ವೈರಲ್ ಆಗಿದೆ ಎನ್ನುವುದು ಮಾತ್ರ ಸತ್ಯ.
ಬೆಂಗಳೂರು ಕಾಮಿಕ್ಸ್ ಗಳು ಸಹ ವೈರಲ್ ಆಗಬೇಕೆನ್ನುವ ಉದ್ದೇಶದಿಂದ ಇವರು  ಹಾಸ್ಯನಟ ಅಹ್ಮದ್ ಶರೀಫ್ ಅವರೊಡನೆ ಸೇರಿ ಪ್ರದರ್ಶ್ನ ನಿಡುತ್ತಿದ್ದಾರೆ. ಇವರ ’ಮುಂದಿನ  ಲಾಫ್ ಇಟ್ ಆಫ್’ ಪ್ರದರ್ಶನವು ಲೈವ್ ರೆಕಾರ್ಡ್ ಆಗಲಿದೆ. 
ಈ ಸಂದರ್ಭ ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ ಕಲಾವಿದ ನಗರದ ಕಾಮಿಕ್ ಜಗತ್ತು ವರ್ಷ ವರ್ಷಗಳಲ್ಲಿ ಹೇಗೆಲ್ಲಾ ಬದಲಾವಣೆ ಹೊಂದಿದೆ, ಕಾಮಿಕ್ಸ್ ನೊಡನೆ ತನ್ನ ಬದುಕಿನ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ.
ನಿಮ್ಮ ಮುಂಬರುವ ಕಾರ್ಯಕ್ರಮದ ಬಗ್ಗೆ ಹೇಳಿ
ನನ್ನ ಹುಟ್ಟಿನಿಂದ ಇಲ್ಲಿಯವರೆಗೆ ನನ್ನ ಬದುಕಿನಲ್ಲಿ ನಾ ಕಂಡ ಅನುಭವವಏ ಕಾಮಿಕ್ಸ್ ಆಗಿದೆ.ನನ್ನ ಪೋಷಕರಿಗೆ ಇದರ ಸುಳಿವಿಲ್ಲ.
ನಗರದ ಕಾಮಿಕ್ಸ್ ಜಗತ್ತು ವರ್ಷಗಳಲ್ಲಿ ಹೇಗೆಲ್ಲಾ ಬದಲಾಗಿದೆ?
ಇದು ನಾಟಕೀಯವಾಗಿ ಬದಲಾಗಿದೆ. ಮೊದಲೆಲ್ಲಾ ನಮಗೆ 11 ರಿಂದ 12 ಕಾಮಿಕ್ಸ್ ದೊರಕುತ್ತಿತ್ತು ಆದರೆ ಈಗ ನಾವು 100 ಕ್ಕಿಂತಲೂ ಹೆಚ್ಚು ಹಾಸ್ಯ ಸನ್ನಿವೇಶಗಳನ್ನು ಹೊಂದಿದ್ದೇವೆ.ಇತರ ನಗರಗಳಿಗೆ ಹೋಲಿಸಿದರೆ, ಪ್ರೇಕ್ಷಕರ ಪರಿಪಕ್ವತೆ ಮತ್ತು ತಿಳುವಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿಗರು ಉನ್ನತ ದರ್ಜೆಯಲ್ಲಿದ್ದಾರೆ. ಹಾಸ್ಯ ಕಲಾವಿದರ ನಡುವೆ ಹೋಲಿಕೆ ಸರಿಯಲ್ಲ, ಹಾಸ್ಯವು ಎಂದಿಗೂ ವ್ಯಕ್ತಿನಿಷ್ಠವಾಗಿರುತ್ತದೆ.
ನಿಮ್ಮ ಸ್ಟಾಂಡ್ ಅಪ್ ಕಾಮಿಡಿ ಸಬ್ಜೆಕ್ಟ್ ಗಳನ್ನು ಅಭಿವೃದ್ಧಿಪಡಿಸಲು ನೀವು ಯಾವ ಪ್ರಕ್ರಿಯೆಯನ್ನು ಬಳಸುತ್ತೀರಿ?
ನಾನು ನನ್ನ ಬಳಿ ಇರುವ ವಸ್ತುಗಳನ್ನೇ ಆಯ್ಕ್ಕೆ ಮಾಡಿಕೊಳ್ಳುವೆನು. ಹೆಚ್ಚಾಗಿ ನನ್ನ ನನ್ನ ಜೀವನದಲ್ಲಿ ಸಂಭವಿಸಿದ ಏನನ್ನಾದರೂ, ಆ ಘಟನೆಯ ಎಲ್ಲ ಸಂಭಾವ್ಯ ಸನ್ನಿವೇಶಗಳನ್ನು ಬಿಡಿಸಿ, ಹಾಸ್ಯ ಘಟನೆಯನ್ನಾಗಿ ಹೇಳುವ ಪ್ರಯತ್ನ ನಡೆಸುತ್ತೇನೆ. ನಾನು ಇದರಲ್ಲಿ ಹೆಚ್ಚು ಸಂತಸ ತಾಳುತ್ತೇನೆ. ಪ್ರೇಕ್ಷಕರು ನನ್ನನ್ನು ಒಬ್ಬ ವ್ಯಕ್ತಿಯಂತೆ  ಕಾಣುವುದು ಮುಖ್ಯ
ನಗರದಲ್ಲಿ ಯಾವುದಾದರೂ ಸ್ಟಾಂಡ್ ಅಪ್ ಕಾಮಿಡಿ ಬರವಣಿಗೆಯ ಗುಂಪುಗಳಿವೆಯೇ?
ಹೌದು,  ಕೃಷ್ಣ ಶ್ರೀನಿವಾಸನ್, ವಂಶೀಧರ್ ಭೋಗರಾಜು ಮತ್ತು ನಾನು ನಿಯಮಿತವಾಗಿ ಭೇಟಿ ನೀಡುವಂತಹ ದಿ ಪಂಚರ್ ಶಾಪ್ ಇಂತಹಾ ಒಂದು ಗುಂಪು. ನಾವುಗಳು ಸೇರಿ ಪರಸ್ಪರ ಆಲೋಚನೆಗಳನ್ನು ಹಂಚಿಕೊಳ್ಳುತ್ತಾ ಹಾಸ್ಯ ಸನ್ನಿವೇಶಗಳನ್ನು ಬರೆಯುತ್ತೇವೆ. ಇದರ ನಡುವೆ ವಂಶಿ ಚಿತ್ರರಂಗದಲ್ಲಿ ತೊಡಗಿಸಿಕೊಂಡರೆ ಕೃಷ್ಣ  ವಿದೇಶಗಳಿಗೆ ತೆರಳಿದ್ದಾರೆ.
ನಿಮ್ಮ ಹಾಸ್ಯ ಜನರಿಗೆ ತಮಾಷೆಯಾಗದೆ ಹೋದ ಸನ್ನಿವೇಶಗಳಿದೆಯೆ?
ಅನೇಕ ಬಾರಿ ಹಾಗಾಗಿದೆ. ನಾವು ದೊಡ್ಡದೇನನ್ನೋ ಬರೆದಿರುತ್ತೇವೆ. ಆದರೆ ಪ್ರೇಕ್ಷಕರೆದುರು ಅದನ್ನು ಅಭಿನಯಿಸಲು ತೊಡಗಿದಾಗ ಅವರು ನಮ್ಮನ್ನು ಅಪಹಾಸ್ಯದ ನೋಟದಿಂದ ಕಾಣುತ್ತಾರೆ. ಆಗ ನಾವು ತಕ್ಷಣ ಬೇರೆ ಸನ್ನಿವೇಶವನ್ನು ಎತ್ತಿಕೊಂಡು ಪ್ರದರ್ಶನ ಮುಂದುವರಿಸಬೇಕು.. ಅದೂ ಸಾಧ್ಯವಾಗದಿದ್ದಲ್ಲಿ ಅಂದಿನ ಪ್ರದರ್ಶನ ರದ್ದು ಮಾಡಿ ಮನೆಗೆ ತೆರಳುವುದೇ ಮಾರ್ಗ.
ಸ್ಟಾಂಡ್ ಅಪ್ ಕಮಿಡಿಯನ್ ಆಗಿರುವುದರ ಅತ್ಯುತ್ತಮ ಲಾಭವೇನು?
ನಾವು ನಗರದ ಟ್ರಾಫಿಕ್ ಗಳಲ್ಲಿ ಹೆಚ್ಚಾಗಿ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಕಾರ್ಯಕ್ರಮದ ವಿವರ
’ಲಾಫ್ ಇಟ್ ಆಫ್ - ಸ್ಟಾಂಡ್ ಅಪ್ ಕಮಿಡಿ ಶೋ
ಎಲ್ಲ್: ದಿ ಹಮ್ಮಿಂಗ್ ಟ್ರೀ
ಯಾವಾಗ: ಏ.27

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT