ವಿಶೇಷ

ಮಹಾತ್ಮ ಗಾಂಧಿ ಉದ್ಘಾಟಿಸಿದ ಈ ದೇವಾಲಯದಲ್ಲಿ ಅಖಂಡ ಭಾರತದ ನಕಾಶೆಯೇ ದೇವರು!

Raghavendra Adiga
ವಾರಣಾಸಿ: ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳ ವಾರಣಾಸಿಯಲ್ಲಿರುವ "ಭಾರತ್ ಮಾತಾ ಮಂದಿರ" ದಲ್ಲಿ 1947ರ ಸ್ವಾತಂತ್ರ ಪೂರ್ವದ ಅವಿಭಜಿತ ಭಾರತದ ನಕಾಶೆಯನ್ನು ಪೂಜಿಸಲಾಗುತ್ತಿದೆ!
ಬ್ರಿಟೀಷರ ವಿರುದ್ಧ ಹೋರಾಡಿದ್ದ ಸ್ವಾತಂತ್ರ ಹೋರಾಟಗಾರ ಶಿವ ಪ್ರಸಾದ್ ಗುಪ್ತಾ ಈ ಮಂದಿರವನ್ನು 1918-1924ರ ನಡುವೆ ನಿರ್ಮಿಸಿದ್ದಾರೆ. ಈ ಮಂದಿರದಲ್ಲಿ ಉಳಿದೆಡೆಗಳಂತೆ ದೇವತೆಯ ವಿಗ್ರಹವಿರುವ ಬದಲಿಗೆ ಅಖಂಡ ಭಾರತದ ನಕಾಶೆಯನ್ನೇ ಇರಿಸಲಾಗಿದೆ.
ಇನ್ನೊಂದು ಮುಖ್ಯ ಸಂಗತಿ ಏನೆಂದರೆ 1924ರಲ್ಲಿ ಮಂದಿರ ನಿರ್ಮಾಣವಾದರೂ ಇದನ್ನು 1936ರಲ್ಲಿ ಮಹಾತ್ಮಾ ಗಾಂಧಿ ಲೋಕಾರ್ಪಣೆಗೊಳಿಸಿದ್ದರು.
"ಎಲ್ಲಾ ದೇವಾಲಯಗಳಲ್ಲಿನ ಗರ್ಭ ಗೃಹದಲ್ಲಿ ದೇವತಾ ವಿಗ್ರಹಗಳಿದ್ದರೆ ಭಾರತ್ ಮಾತಾ ಮಂದಿರದಲ್ಲಿ ಮಾತ್ರವೇ ಅವಿಭಜಿತ ಅಖಂಡ ಭಾರತದ ನಕಾಶೆ ಇದೆ. ಈ ಮಂದಿರವೌ 1924 ರಲ್ಲಿ ಪೂರ್ಣಗೊಂಡಿದ್ದು  ಇದನ್ನು 1936 ರಲ್ಲಿ ಮಹಾತ್ಮಾ ಗಾಂಧಿಯವರು ಉದ್ಘಾಟಿಸಿದರು," ದೇವಾಲಯದ ಉಸ್ತುವಾರಿ ರಾಜು ಸಿಂಗ್ ಎ.ಎನ್.ಐ ಗೆತಿಳಿಸಿದ್ದಾರೆ.
ಪ್ರಾಚೀನ ಕಾಲದಲ್ಲಿ ಭಾರತ ಎಷ್ಟು ದೊಡ್ಡ ದೇಶವಾಗಿತ್ತು ಎನ್ನುವುದನ್ನು ಕಾಣಲಿಕ್ಕೆ ಇಲ್ಲಿ ಅವಕಾಶವಿದೆ. ಪ್ರತಿನಿತ್ಯವೂ ಇಲ್ಲಿಗೆ ನೂರಾರು ಯಾತ್ರಿಕರು ಬರುತ್ತಾರೆ.ವಾರಣಾಸಿಗೆ ಭೇಟಿ ಕೊಡುವ ವಿದೇಶಿ ಪ್ರವಾಸಿಗರು ತಪ್ಪದೆ ಈ ಮಂದಿರಕ್ಕೆ ಆಗಮಿಸುತ್ತಾರೆ." ಅವರು ಹೇಳಿದರು.
ಈ ನಕಾಶೆಯನ್ನು 762 ಬ್ಲಾಕ್ಗಳ ಮಕ್ರನಾ ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಮಯನ್ಮಾರ್,ಬಾಂಗ್ಲಾದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ನಕಾಶೆಯಲ್ಲಿ ಗುರುತಿಸಲಾಗಿದೆ.
SCROLL FOR NEXT