'ಬಲಭೀಮ'ನಿಗೆ ಜನ್ಮ ನೀಡಿದ ಮೈಸೂರು ಮಹಿಳೆ!
ಮೈಸೂರು: ಇದು ನಿಜಕ್ಕೂ ಅದ್ಭುತವೇ ಎನ್ನದೆ ವಿಧಿ ಇಲ್ಲ. ಸಾಮಾನ್ಯವಾಗಿ ಹುಟ್ಟುವ ಮಗುವಿನ ತೂಕ ಎರಡೂವರೆ, ಮೂರು ಕ್ಕೆಜಿ ತೂಗುವುದು ಸಾಮಾನ್ಯ ಆದರೆ ಮೈಸೂರಿನಲ್ಲಿ ಜನಿಸಿದ ಮಗುವೊಂದು ಹುಟ್ಟುವಾಗಲೇ ಐದು ಕೆಜಿ ತೂಗುತ್ತಿದೆ.
ಮೈಸೂರು ನಗರದ ಅಗ್ರಹಾರ ನಿವಾಸಿಯಾದ ಸಿದ್ದರಾಜು ಹಾಗೂ ರಾಜೇಶ್ವರಿ ದಂಪತಿಗೆ ಜನಿಸಿದ ಈ "ಬಲಭೀಮ"ನಂತಹಾ ಗಂಡು ಮಗು ಜನಿಸಿದ್ದು ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಅಪರೂಪದ ಮಗುವಿನ ಜನನವಾಗಿದೆ.
ಶುಕ್ರವಾರ ರಾತ್ರಿ ರಾಜೇಶ್ವರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಮಧ್ಯರಾತ್ರಿ ವೇಳೆಗೆ ಈ ವಿಶೇಷ ಭಾರದ ಮಗು ಜನ್ಮಿಸಿದೆ. ಮಗುವಿನ ತೂಕ ಹೆಚ್ಚಿದ್ದ ಕಾರಣ ವೈದ್ಯರು ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆದಿದ್ದಾರೆ.
ಸಧ್ಯ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics