ವಿಶೇಷ

ನಿಮ್ಮ ತಾಯಿಗೆ ಹೇಗೆಲ್ಲಾ ಕೃತಜ್ಞತೆ ಹೇಳಬಹುದು, ಇಲ್ಲಿದೆ ಕೆಲವು ಸಲಹೆಗಳು

Raghavendra Adiga
ನವದೆಹಲಿ: ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುವ ಸಂಸ್ಕೃತಿ ನಮ್ಮದು. ತಾಯಿಯಾದವಳು ಮಕ್ಕಳನ್ನು ಪ್ರೀತಿಸುವಷ್ಟು ಇನ್ನಾರೂ ಪ್ರೀತಿಸುವುದಿಲ್ಲ, ಕಾಳಜಿವಹಿಸುವುದಿಲ್ಲ. 
ಅಂತರಾಷ್ಟ್ರೀಯ ತಾಯಂದಿರ ದಿನ ಹತ್ತಿರವಾಗುತ್ತಿದ್ದಂತೆ ತಾಯಂದಿರನ್ನು ಹೇಗೆಲ್ಲಾ ಸಂತೋಷಪಡಿಸಬಹುದು ಎನ್ನುವ ಕುರಿತಂತೆ ನಾವು ಯೋಚಿಸುತ್ತೇವೆ. ಈ ನಿಟ್ಟಿನಲ್ಲಿ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.
ಡಾಕ್ಸ್ ಅಪ್ಲಿಕೇಷನ್, ಸಹ ಸಂಥಾಪಕ, ಸಿಇಓ ಆದ ಸತೀಶ್ ಕಣ್ಣನ್, ಹಾಗೂ ಅಂಕಿತ್ ಗಾರ್ಗ್, ವಾಕ್ ಫಿಟ್ ಕೋ. ಸಹ ಸಂಸ್ಥಾಪಕ ಸಿಇಓ ಅವರುಗಳು ಈ ಸಲಹೆಗಳನ್ನು ನೀಡಿದ್ದಾರೆ.
ಆರೋಗ್ಯಕರ ಜೀವನ ನೀಡಿ: ನಿಮ್ಮ ತಾಯಿಗೆ ಅಗತ್ಯವಾದ ಆರೋಗ್ಯಕರ ಜೀವನ ನೀಡಿ. ಆಕೆಗೆ ಅಗತ್ಯವಾದ ವೈದ್ಯಕೀಯ ನೆರವು, ಗುಣಮಟ್ಟದ ಪರೀಕ್ಷೆಗಳನ್ನು ಮಾಡಿಸಿ ಉತ್ತಮ ರೀತಿಯಲ್ಲಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಿ. 
ಸುಖನಿದ್ರೆಗೆ ಸಹಕರಿಸಿ: ಹಗಲೆಲ್ಲಾ ದುಡಿಯುವ ತಾಯಿ ಮನೆಗೆಲಸ, ನಿಮ್ಮ ಕಾಳಜಿಯ ಕೆಲಸ ಮಾಡಿ ದಣಿದಿರುತ್ತಾರೆ. ಅವರಿಗೆ ರಾತ್ರಿ ಸುಖನಿದ್ದೆಯ ಅಗತ್ಯವಿದೆ. ಅವರು ಸುಖವಾಗಿ ನಿದ್ರೆ ಮಾಡುವಂತೆ ಆಕೆಯ ಕೋಣೆಯನ್ನು ಸ್ವಚ್ಚವಾಗಿರಿಸಿ. ಅಲ್ಲದೆ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಮಾಡಿ. ತಾಯಿ ಮಲಗುವ ಕೋಣೆಯಲ್ಲಿ ಅವರಿಗಾಗಿ ಉತ್ತಮ ಹಾಸಿಗೆ, ಮಂಚ ಸೇರಿ ಎಸಿ, ಫ್ಯಾನ್ ಗಳ ವ್ಯವಸ್ಥೆ ಇರಲಿ. ಹೀಗೆ ಮಾಡಿದಲ್ಲಿ ಆಕೆ ಉತ್ತಮ ವಿಶ್ರಾಂತಿ ಪಡೆದು ಮರು ದಿನ ಏಳುವಾಗ ಉತ್ತಮ ಆರೋಗ್ಯ ಹೊಂದಿರಲಿದ್ದಾರೆ.
ಕೆಲಸ ಮುಂದುವರಿಸಲು ಪ್ರೋತ್ಸಾಹಿಸಿ: ನಿಮ್ಮ ತಾಯಿ ನಿಮ್ಮನ್ನು ಬೆಳಸಲಿಕ್ಕಾಗಿ ತನ್ನ ವೃತ್ತಿಯನ್ನು ತೊರೆದಿದ್ದಾಳೆ ಎಂದರೆ, ಇದೀಗ ನೀವು ಬೆಳೆದು ಸ್ವಂತ ಬಲದಿಂದ ಜೀವನ ನಡೆಸುವ ಅವಧಿಯಲ್ಲಿ ಆಕೆ ತನ್ನ ವೃತ್ತಿಯನ್ನು ಮುಂದುವರಿಸಲು ಪ್ರೋತ್ಸಾಹ ನೀಡಿ. ಆಕೆಗೆ ತಾನು ಹಿಂದೆ ಮಾಡುತ್ತಿದ್ದ ಕೆಲಸವನ್ನು ಪುನಃ ಪ್ರಾರಂಭಿಸುವುದರಿಂದ ಆಕೆಯಲ್ಲಿನ ಜೀವನೋತ್ಸಾಹ ಸಹ ಇಮ್ಮಡಿಗೊಳ್ಳಬಹುದು.
ತಾಯಿಯ ಆಸೆ ನೆರವೇರಿಸಿ: ತಾಯಿ ನೀವು ಚಿಕ್ಕವರಿದ್ದಾಗ ನೀವು ಆಸೆಪಟ್ಟದ್ದನ್ನೆಲ್ಲಾ ನಿಡಿರುತ್ತಾಳೆ. ಈ ತಾಯಂದಿರ ದಿನ ಆಕೆಯ ಆಸೆಯನ್ನು ನೀವು ನೆರವೇರಿಸಿ. ಆಕೆ ಬೇಕೆಂದರೆ ಸೀರೆ, ಚಿನ್ನಾಭರಣಗಳಂತಹಾ ಉಡುಗೊರೆ ಕೊಡಿಸಿ. ಅವರು ಕಾಣಬೇಕೆಂದು ಬಯಸಿದ ಚಲನಚಿತ್ರ, ನಾಟಕಗಳನ್ನು ತೋರಿಸಿ. ಹೋಗಬೇಕೆಂದು ಆಸೆಪಟ್ಟ ಸ್ಥಳಗಳಿಗೆ ಕರೆದೊಯ್ಯಿರಿ. ಇದರಿಂದ ಆಕೆಯ ಮನಸ್ಸು ಉಲ್ಲಾಸಗೊಳ್ಳುವುದಲ್ಲದೆ ನಿಮ್ಮ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ.
SCROLL FOR NEXT