ಕೃತಕ ಬುದ್ಧಿಮತ್ತೆ ನ್ಯೂಸ್ ಆ್ಯಂಕರ್‌ 
ವಿಶೇಷ

ಇವನೇ ಜಗತ್ತಿನ ಮೊದಲ ಕೃತಕ ಬುದ್ಧಿಮತ್ತೆ ನ್ಯೂಸ್ ಆ್ಯಂಕರ್‌!

ಜಗತ್ತಿನ ಪ್ರಪ್ರಥಮ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ನ್ಯೂಸ್‌ ಆ್ಯಂಕರ್‌ ಚೀನಾದಲ್ಲಿ ಸೃಷ್ಟಿಯಾಗಿದ್ದಾನೆ.

ಬೀಜಿಂಗ್: ಜಗತ್ತಿನ ಪ್ರಪ್ರಥಮ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ನ್ಯೂಸ್‌ ಆ್ಯಂಕರ್‌ ಚೀನಾದಲ್ಲಿ ಸೃಷ್ಟಿಯಾಗಿದ್ದಾನೆ.
ಬುಧವಾರ (ನವೆಂಬರ್7) ವೂಝೆನ್‌ ನಲ್ಲಿ ನಡೆದಿದ್ದ ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾದ  ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಈ ಕೃತಕ ಬುದ್ದಿಮತ್ತೆ ನ್ಯೂಸ್ ಆ್ಯಂಕರ್‌ ನನ್ನು ಜಗತ್ತಿಗೆ ಪರಿಚಯಿಸಿತು.
ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ ಈ ಆ್ಯಂಕರ್‌ ತಾನು ಬರವಣಿಗೆಯಲ್ಲಿ ನೀಡಿದ್ದನ್ನು ತೆರೆಯ ಮೇಲೆ ಓದಲು ಸಮರ್ಥನಾಗಿರುವುದಾಗಿ ಹೇಳಿದ್ದಾನೆ.
ಚೀನದ ಕ್ಸಿನ್‌ಹುವಾ ಮತ್ತು ಸರ್ಚ್‌ ಇಂಜಿನ್‌ ಕಂಪೆನಿ ಸೊಗೋವ್‌ ಸಂಸ್ಥೆ ಜತೆಗೂಡಿ ಸೃಷ್ಟಿಸಿದ್ದ ಈ ನ್ಯೂಸ್ ಆ್ಯಂಕರ್‌ ಚೀನಾದ  ಝಿನುವಾದ ಜಾಂಗ್ ಜಾಹೋ ಎಂಬ ಆ್ಯಂಕರ್‌ ನ ಪ್ರತಿರೂಪವಾಗಿದೆ.
ನ್ಯೂಸ್ ಚಾನಲ್ ನಲ್ಲಿ ತನ್ನನ್ನು ತಾನು ಪರಿಚಯಿಸಿಕೊಂಡ ಈ ಕೃತಕ ಬುದ್ದಿಮತ್ತೆ ನ್ಯೂಸ್ ಆ್ಯಂಕರ್‌ "ಎಲ್ಲರಿಗೂ ನಮಸ್ಕಾರ, ನಾನು ಕೃತಕ ಬುದ್ಧಿಮತ್ತೆಯುಳ್ಳ ಆ್ಯಂಕರ್‌ ಚಾನಲ್ ನಲ್ಲಿ ಇದು ನನ್ನ ಮೊದಲ ದಿನ. ನನ್ನ ದನಿ ಜಾಂಗ್ ಜಾಹೋ ಅವರ ಕಂಠದ ಪ್ರತಿರೂಪ. ಝಿನುವಾದಲ್ಲಿ ನಿಜ ಆ್ಯಂಕರ್‌ ಆಗಿರುವ ಅವರ ಪ್ರತಿರೂಪವೇ ನಾನಾಗಿದ್ದೇನೆ.
"ಮಾದ್ಯಮ ಕ್ಷೇತ್ರವು ನಿರಂತರ ಹೊಸತನವನ್ನು ಅಪೇಕ್ಷಿಸುತ್ತದೆ. ನನ್ನ ಸಿಸ್ಟಂನಲ್ಲಿ ಟೈಪ್ ಮಾಡಿದ ಎಲ್ಲಾ ಮಾಹಿತಿಯನ್ನು ನಾನು ಸದಾ ತಿಳಿಸಲಿದ್ದೇನೆ.ನಾನು ಹೊಸ ಹೊಸ ಅನುಭವವನ್ನು ನಿಮ್ಮಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ." ಎಂದಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!