ವಿಶೇಷ

ವಿಶೇಷ ಡೂಡಲ್ ಮೂಲಕ ಗೂಗಲ್ ವಿಶ್ವ ಭೂ ದಿನ ಆಚರಣೆ

Nagaraja AB

ಬೆಂಗಳೂರು: ಇಂದು ವಿಶ್ವ ಭೂ ದಿನ. ಜಗತ್ತಿನಾದ್ಯಂತ ಏಪ್ರಿಲ್ 22 ರಂದು ಭೂಮಿಯ ದಿನ ಆಚರಿಸಲಾಗುತ್ತಿದೆ. ಪರಿಸರ ರಕ್ಷಣೆಯ ಜಾಗೃತಿ ಮೂಡಿಸುವ ವಿಶೇಷ ಡೂಡಲ್ ಗೂಗಲ್ ಅರ್ಥ್ ಡೇ 2019 ಆಚರಿಸುತ್ತಿದೆ.

ಡೂಡಲ್ ನಲ್ಲಿ ಅಲೆಮಾರಿ ಕಡಲುಕೋಳಿ, ಕೋಸ್ಟರ್ ರೆಡ್ ವುಡ್, ಪೆಡೋಫ್ರೈನ್ ಅಮಾವೆನ್ಸಿಸ್, ಅಮೆಜಾನ್ ವಾಟರ್ ಲಿಲ್ಲಿ, ಕೋಲಾಕಂತ್ ಮತ್ತು ಡೀಪ್ ಕೇವ್ ಸ್ಟ್ರಿಂಗ್ ಟೇಲ್ ಹೆಸರಿನ ಅಪರೂಪದ ಜೀವಿಗಳನ್ನು ಚಿತ್ರಿಸಿದೆ. ಈ ಜೀವಿಗಳ ಬಗ್ಗೆ ಸಂಕ್ಷೀಪ್ತ ವಿವರಣೆಯನ್ನೂ ಡೂಡಲ್ ನಲ್ಲಿ ನೀಡಲಾಗಿದೆ.

2019 ರ ಅರ್ಥ್ ಡೇ ಡೂಡಲ್ ರಚಿಸಿದ ಕೆವಿನ್ ಲಾಫ್ ಲಿನ್ ಈ ಜೀವಿಗಳನ್ನು ಡೂಡಲ್ ಗೆ ಯಾಕೆ ಆಯ್ದುಕೊಳ್ಳಲಾಗಿದೆ ಎಂಬುದನ್ನು ವಿವರಿಸಿದ್ದಾರೆ.

SCROLL FOR NEXT