ವಿಶೇಷ

ಬೆಂಗಳೂರು:ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ ಅನಾವರಣ

Raghavendra Adiga

ಬೆಂಗಳೂರು: ದೇಶದ ಅತಿದೊಡ್ಡ ಕ್ರಿಸ್ಮಸ್ ಟ್ರೀಯನ್ನು ಬೆಂಗಳೂರು ವೈಟ್ ಫೀಲ್ಡ್ ನ ಫೀನಿಕ್ಸ್ ಮಾರ್ಕೆಟ್ ಸಿಟಿ ಶಾಪಿಂಗ್ ಮಾಲ್ ನಲ್ಲಿ ಅನಾವರಣಗೊಳಿಸಲಾಗಿದೆ.

ದೇಶದಲ್ಲೇ ಅತಿ ದೊಡ್ಡದಾಗಿರುವ ಎಪ್ಪತ್ತೈದು ಅಡಿಗಳ ಎತ್ತರದ ಕ್ರಿಸ್ಮಸ್ ಟ್ರೀಯನ್ನು ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ "ದಿ ವರ್ಲ್ಡ್ ಆಫ್ ಕ್ರಿಸ್ಮಸ್ ಸೀಸನ್ ೨" ಕಾರ್ಯಕ್ರಮದ ಅಂಗವಾಗಿ ಸ್ಥಾಪಿಸಲಾಗಿದೆ.

ವಿಶೇಷವೆಂದರೆ ಈ ಅತ್ಯಂತ ದೊಡ್ಡ ಗಾತ್ರದ ಕ್ರಿಸ್ಮಸ್ ಟ್ರೀಯನ್ನು ಯಾವ ಯಂತ್ರಗಳ ಸಹಾಯವಿಲ್ಲದೆ ಕೈನಿಂದಲೇ ರೂಪಿಸಲಾಗಿದೆ. ಇದಕ್ಕೆ ಐವತ್ತು ಸಾವಿರ ಪ್ಲಿಂಕುಂಗ್ ದೀಪಗಳನ್ನು ಅಳವಡಿಸಲಾಗಿದೆ.

ಬೆಂಗಳೂರಲ್ಲಿ ಕ್ರಿಸ್ಮಸ್ ಕೇವಲ ಕ್ರೈಸ್ತ ಬಾಂಧವರಿಗಷ್ಟೇ ಅಲ್ಲದೆ ಎಲ್ಲಾ ಸಮುದಾಯದವರೂ ಸಂಭ್ರದ ಸಡಗರದಲ್ಲಿ ತೊಡಗುವ ಹಬ್ಬವಾಗಿದೆ. ಅದರಲ್ಲಿಯೂ ಶಾಪಿಂಗ್ ಮಾಲ್ ಗಳಿಗೆ ತೆರಳಿ ವಾರಾಂತ್ಯ, ರಜಾ ದಿನಗಳನ್ನು ಕಳೆಯ ಬಯಸುವವರಿಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹೇಳಿ ಮಾಡಿಸಿದ ಸಮಯವಾಗಿದೆ. ಇಂತಹಾ ಸಮಯದಲ್ಲಿ ವೈಟ್ ಪೀಲ್ಡ್ ನ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಈ ವಿಶೇಷ ಕ್ರಿಸ್ಮಸ್ ಟ್ರೀ ಅನಾವರಣವಾಗಿದ್ದು ನಗರದ ಶಾಪಿಂಗ್ ಪ್ರಿಯರನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸುತ್ತಿದೆ.

SCROLL FOR NEXT