ವಿಶೇಷ

83 ವರ್ಷದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ ಗಳಿಸಿದ ಪಂಜಾಬ್ ನ ಹಿರಿಯಜ್ಜ!

Sumana Upadhyaya

ಹೊಶಿಯಾರ್ಪುರ್: ಕಲಿಯುವ ಆಸಕ್ತಿಯಿದ್ದರೆ ವಯಸ್ಸು ಅಡ್ಡಿಬರುವುದಿಲ್ಲ ಎಂಬುದಕ್ಕೆ 83 ವರ್ಷದ ಈ ಹಿರಿಯಜ್ಜನೇ ಉದಾಹರಣೆ. 


ಪಂಜಾಬ್ ನ ಹೊಶಿಯಾರ್ಪುರ್ ಜಿಲ್ಲೆಯ ಮಹಿಲ್ ಪುರದ ಸೊಹನ್ ಸಿಂಗ್ ಗಿಲ್ ದಶಕಗಳ ಹಿಂದೆಯೇ ಪದವಿ ಗಳಿಸಿದ್ದರು. ಜಲಂದರ್ ನ ವಿಶ್ವವಿದ್ಯಾಲಯದ ಉಪ ಪ್ರಾಂಶುಪಾಲರು ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸುವಂತೆ ಸಲಹೆ ನೀಡಿದ್ದರು. ಆದರೆ 1958ರಲ್ಲಿ ಮದುವೆಯಾಗಿ ಪತ್ನಿ ಜೊತೆಗೆ ಕೇನ್ಯಾಗೆ ಹೋದರು.


ಕೇನ್ಯಾದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ನಂತರ 1991ರಲ್ಲಿ ಭಾರತಕ್ಕೆ ವಾಪಸ್ಸಾದರು. ಓದಬೇಕೆಂಬ ಅದಮ್ಯ ಬಯಕೆಯಿಂದ ಕಳೆದ ವರ್ಷ ಎಂ ಎ ಇಂಗ್ಲಿಷ್ ಗೆ ಸೇರಿಕೊಂಡರು. ಒಂದೇ ವರ್ಷದಲ್ಲಿ ಎಂ ಎ ಮುಗಿಸಿದ್ದಾರೆ. ಜಲಂದರ್ ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಗಳಿಸಿದರು. 


ಭಾರತದಲ್ಲಿಯೇ ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಹೀಗಾಗಿ ಉದ್ಯೋಗ ಅರಸಿ ದೇಶಬಿಟ್ಟು ತೊರೆಯುವ ಅಗತ್ಯವಿಲ್ಲ ಎನ್ನುತ್ತಾರೆ. 

SCROLL FOR NEXT