ವಿಶೇಷ

ತಾಯಿಯ ಕ್ಯಾನ್ಸರ್ ಔಷಧಿಗಾಗಿ ಬೀದಿ ಬೀದಿ ಸುತ್ತಿದ್ದ ಬಾಲಕ ಜಸ್​​​ರಾಜ್! ಸಂಗೀತ ಮಾಂತ್ರಿಕನ ಸಂಘರ್ಷಮಯ ಬದುಕಿನ ಕಥೆ

Raghavendra Adiga

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಸೂರ್ಯನಂತೆ  ಹೊಳೆದು ಕಣ್ಮರೆಯಾಗಿರುವ ಗಾಯಯ, ಸಂಗೀತ ಮಾಂತ್ರಿಕ ಪಂಡಿತ್ ಜಸ್​​​ರಾಜ್ ಅವರ ಈ ಯಶಸ್ಸಿನ ಹಿಂದೆ ಸಾಕಷ್ಟು ನೋವಿದೆ, ಹೋರಾಟಗಳಿದೆ,

ಬಾಲಕನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದ ಜಸ್​​​ರಾಜ್ ತಾಯಿಯ ಔಷಧಿಗಾಗಿ ಅದೊಮ್ಮೆ ಕೋಲ್ಕತ್ತಾದ ಬೀದಿ ಬೀದಿ ಸುತ್ತಿದ್ದರು ಎಂದರೆ ನಂಬಲೇ ಬೇಕು, ಅಂತಹಾ ಒಂದು ಘಟನೆ ವಿವರ ಈ ಮುಂದಿನಂತಿದೆ, 

ಲತಾ ಮಂಗೇಷ್ಕರ್ ಅವರೊಡನೆ ಪಂಡಿತ್  ಜಸ್​​​ರಾಜ್

ಕ್ಯಾನ್ಸರ್ ಔಷಧಿಗಾಗಿ ಬೀದಿ ಬೀದಿ ಅಲೆದಾಟ

ಅದು ಐವತ್ತರ ದಶಕ. ಕ್ಯಾನ್ಸರ್ ಪೀಡಿತರಾಗಿದ್ದ ತಾಯಿಗೆ ವೈದ್ಯರು ನೀಡಿದ್ದ ಔಷಧಿಗಾಗಿ ದಕ್ಷಿಣ ಕೊಲ್ಕತ್ತಾದಿಂದ ಕೇಂದ್ರ ಕೊಲ್ಕತ್ತಾದವರೆಗೆ ಸುತ್ತಾಡಿದ್ದ ಬಾಲಕ  ಜಸ್​​​ರಾಜ್ ಅನೇಕ ಅಂಗಡಿಗಳಲ್ಲಿ ವಿಚಾರಿಸಿದರೂ ಆ ಔಷಧಿ ಇರಲಿಲ್ಲ. ಆದರೆ ಕಡೆಗೊಮ್ಮೆ ಔಷಧಿ ಸಿಕ್ಕಿತ್ತು. ಆದರೆ ಅದಕ್ಕೆ ಸಾಕಾಗುವಷ್ಟು ಹಣ ಅವರ ಬಳಿ ಇರಲಿಲ್ಲ. "ಇದ್ದಷ್ಟು ಹಣ ನೀಡುವೆ, ಆ ಔಷಧಿ ಬೇಕು ಕೊಡಿ"ರೆಂದು ಕೇಳಲಾಗಿ ಆ ಅಂಗಡಿಯ ನೌಕರ ಒಪ್ಪಿರಲಿಲ್ಲ. ಆ ಸಮಯಕ್ಕೆ ಬಾಲಕನ ಹೆಗಲ ಮೇಲೆ ಕೈಯಿಟ್ಟ ವ್ಯಕ್ತಿಯೊಬ್ಬ "ಹುಡುಗನ ಬಳಿ ಎಷ್ಟು ಹಣವಿದೆ ಅಷ್ಟು ತೆಗೆದುಕೊಂಡು ಔಷಧಿ ನೀಡು, ಉಳಿದ ಹಣವನ್ನು ನನ್ನ ಖಾತೆಗೆ ಬರೆದಿಡು" ಎಂದಿದ್ದರು. 

ಅಷ್ಟಕ್ಕೂ ಆ ವ್ಯಕ್ತಿ ಬೇರಾತಾರೂ ಅಲ್ಲದೆ ಆ ಔಷಧಿ ಅಂಗಡಿ ಮಾಲೀಕರಾಗಿದ್ದರು, ಅಂದು ಅವರಿಗೆ ಬಾಲಕ ಜಸ್​​​ರಾಜ್ ಪರಿಚಯ ಹೇಗಿತ್ತೆಂದು ಸ್ವತಃ ಜಸ್​​​ರಾಜ್  ಅವರಿಗೂ ಗೊತ್ತಿರಲಿಲ್ಲವಂತೆ. 

ಹಾಡು ಕೇಳಿದ ವೈದ್ಯ 2 ರು.ಗೆ ಇಂಜೆಕ್ಷನ್ ಕೊಟ್ರು

ಗಂಗೂಬಾಯಿ ಹಾನಗಲ್ ಅವರ ಜತೆ ಪಂಡಿತ್  ಜಸ್​​​ರಾಜ್

ಕಡೆಗೂ ತಾಯಿಗೆ ಔಷಧಿ ವ್ಯವಸ್ಥೆ ಆಗಿತ್ತು,  ದಿನಕ್ಕೆ ಎರಡು ಬಾರಿ ಇಂಜೆಕ್ಷನ್ ನೀಡಬೇಕಾಗಿತ್ತು ಇದಕ್ಕಾಗಿ ಪ್ರತಿ ಬಾರಿ 15 ರು. ಬೇಕಿತ್ತು. ಆ ಒಂದು ದಿನ  ಜಸ್​​​ರಾಜ್ ವೈದ್ಯರಲ್ಲಿ "ಈ ದಿನ ಸಂಜೆ ಆಲ್ ಇಂಡಿಯಾ ರೆಡಿಯೋದಲ್ಲಿನನ್ನ ಹಾಡಿನ ಕಾರ್ಯಕ್ರಮವಿದೆ ಕೇಳಿ" ಎಂದು ವಿನಂತಿಸಿಕೊಂಡರು. ಆದರೆ ವೈದ್ಯರು ತಾವು ಸೊಸೆ ಮನೆಗೆ ತೆರಳುವಿದಾಗಿಯೂ ನನಗೆ ಹಾಡು ಕೇಳಲು ಸಮಯವಿಲ್ಲ ಎಂದಿದ್ದರು.

ಆದರೆ ಮರುದಿನ ತಾಯಿಗೆ ಇಂಜೆಕ್ಷನ್ ನೀಡಲು ಬಂದಾಗ ಅವರ ರೀತಿ ಬೇರೆಯದೇ ಆಗಿತ್ತು. ಅವರು ಆ ಸಂಜೆ ಸೊಸೆ ಮನೆಯಲ್ಲಿದ್ದೇ ಹಾಡು ಕೇಳಿದ್ದರು. ಮತ್ತು  ಜಸ್​​​ರಾಜ್ ಅವರ ಹಾಡು ಅವರಿಗೆ ಮೆಚ್ಚುಗೆಯಾಗಿತ್ತು. "ನಾನು ಹಾಡನ್ನು ಕೇಳಿದೆ  ಸಂಗೀತಗಾರನ ಬಳಿ ಹಣವಿರಲ್ಲ ಎಂದು ನನ್ನ ಸೊಸೆ ಹೇಳಿದಳು" ಎಂದದ್ದಲ್ಲದೆ ಅಂದಿನಿಂದ  ಜಸ್​​​ರಾಜ್  ಬಳಿ ಆ ವೈದ್ಯರು 15 ರು.ಇಂಜಕ್ಷನ್ ಗೆ 2 ರೂ. ಮಾತ್ರ ಪಡೆಯುತ್ತಿದ್ದರು. 

ಇನ್ನು ಆ ವೈದ್ಯರ "ಸಂಗೀತಪ್ರೇಮಿ" ಸೊಸೆಯಾದರೂ ಯಾರೆಂದರೆ ಅವರು ಗೀತಾ ದತ್ ಎಂದು ಪ್ರಸಿದ್ದರಾಗಿದ್ದ ಗೀತಾ ರಾಯ್ ಅವರಾಗಿದ್ದರು.

ಡಾ. ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಪಂಡಿತ್  ಜಸ್​​​ರಾಜ್

ಶಾಲೆ ಬಿಡಿಸಿದ್ದ ಗಝಲ್!

ಪಂಡಿತ್ ಜಸ್​​​ರಾಜ್ ಹೈದರಾಬಾದಿನಲ್ಲಿ ತಮ್ಮ ಬಾಲ್ಯ ಜೀವನ ಕಳೆದಿದ್ದರು, ಅವರು ಪ್ರಾಥಮಿಕ ಶಾಲೆ ಕಲಿತದ್ದೂ ಹೈದರಾಬಾದ್ ನಲ್ಲಿ.  ಅವರಾಗ ಶಾಲೆ ಮುಂದಿನ ರಸ್ತೆಯಲ್ಲಿ ನಿಂತು `ದಿವಾನಾ ಬನಾನಾ ಹೇ ತೋ ದಿವಾನಾ ಬನಾದೆ, ವರ್ನಾ ಕಹಿ ತಕದೀರ್ ತಮಾಷಾ ನ ಬನಾದೆ’ ಎಂಬ ಗಝಲ್ ಹಾಡುತ್ತಿದ್ದರು,ಬೇಗಂ ಅಖ್ತರ್ ಅವರ ಈ ಗಝಲ್ ಅವರನ್ನು ಶಾಲೆಯಿಂದ ದೂರ ಹೋಗುವಂತೆ ಮಾಡಿತ್ತು. ಆ ನಂತರ ಅವರು ತಬಲಾ, ಗಾಯನ ಅಭ್ಯಾಸದಲ್ಲಿ ತೊಡಗಿ ಪ್ರಸಿದ್ದ ಗಾಯಕರೆನಿಸಿಕೊಂಡರು. 

-ರಾಘವೇಂದ್ರ ಅಡಿಗ ಎಚ್ಚೆನ್.

SCROLL FOR NEXT