ವಿಶೇಷ

ಮಹಾರಾಷ್ಟ್ರದ ಪ್ರಾಥಮಿಕ ಶಾಲಾ ಶಿಕ್ಷಕನಿಗೆ 2020ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿ ಗರಿ!

Nagaraja AB

ಮುಂಬೈ: ಮಹಾರಾಷ್ಟ್ರದ ಪ್ರಾಥಮಿಕ ಶಾಲೆಯೊಂದರ ಶಿಕ್ಷಕರೊಬ್ಬರು 2020ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾಲಕಿಯರ ಶಿಕ್ಷಣಕ್ಕೆ ಉತ್ತೇಜಿಸುವ ಅವರ ಪ್ರಯತ್ನಕ್ಕೆ 2020ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿ ಬಂದಿದೆ.

ಪ್ರಶಸ್ತಿಯಾಗಿ ಬಂದ 1 ಮಿಲಿಯನ್ ಅಮೆರಿಕನ್ ಡಾಲರ್ ಹಣದಲ್ಲಿ ಅರ್ಧ ಭಾಗವನ್ನು ಫೈನಲ್ ನಲ್ಲಿದ್ದ ಇತರ 9 ಶಿಕ್ಷಕರಿಗೆ ಹಂಚುವ ಮೂಲಕ 31 ವರ್ಷದ ರಂಜಿತ್ ಸಿಂಗ್ ಡಿಸಾಲೆ ಉದಾರತೆ ಮೆರೆದಿದ್ದಾರೆ. ಒಂಬತ್ತು ಶಿಕ್ಷಕರಿಗೆ ಪ್ರಶಸ್ತಿ ಹಣವನ್ನು ಹಂಚುವುದರಿಂದ ಅವರ ಕಾರ್ಯ ಮತ್ತಷ್ಟು ಹೆಚ್ಚಾಗಬಹುದು ಎಂಬುದರಲ್ಲಿ ನಂಬಿಕೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ಫೈನಲ್ ನಲ್ಲಿದ್ದ ಶಿಕ್ಷಕರು ತಮ್ಮ ಕೆಲಸವನ್ನು ಮುಂದುವರೆಸಲಿ ಎಂದು ಬಯಸುವುದಾಗಿ ಹೇಳಿದ ಡಿಸಾಲೆ, ನಾವು ಅನೇಕ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸಬಹುದು ಎಂದಿದ್ದಾರೆ.

2020ನೇ ಸಾಲಿನ ವಾರ್ಷಿಕ ಜಾಗತಿಕ ಶಿಕ್ಷಕರ ಪ್ರಶಸ್ತಿಯ ಅಂತಿಮ 10 ಮಂದಿಯಲ್ಲಿ ರಂಜಿತ್ ಸಿಂಗ್ ಹೆಸರು ಇದ್ದರಿಂದ ಮಹಾರಾಷ್ಟ್ರದಲ್ಲಿ ಪ್ರಮುಖ ಸುದ್ದಿಯಾಗಿದ್ದರು. ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಭಾರತದಲ್ಲಿ ತ್ವರಿತ-ಪ್ರತಿಕ್ರಿಯೆ (ಕ್ಯೂಆರ್) ಕೋಡೆಡ್ ಪಠ್ಯಪುಸ್ತಕ ಕ್ರಾಂತಿಯನ್ನು ಪ್ರಚೋದಿಸುವ ಅವರ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿ ಬಂದಿದೆ.

2009 ರಲ್ಲಿ ಸೋಲಾಪುರ ಜಿಲ್ಲೆಯ ಪರಿತೇವಾಡಿ ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಗೆ ಡಿಸಾಲೆ ಆಗಮಿಸಿದಾಗ ಅದು ಶಿಥಿಲಗೊಂಡ ಕಟ್ಟಡವಾಗಿತ್ತು. ಇದನ್ನು ಬದಲಾಯಿಸುವ,  ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವ ಕೆಲಸವನ್ನು ಕೈಗೆತ್ತಿಕೊಂಡರು.

ಡಿಸಾಲೆ ಪಠ್ಯಪುಸ್ತಕಗಳನ್ನು ಮಾತೃಭಾಷೆಗೆ ಭಾಷಾಂತರಿಸುವುದಲ್ಲದೆ, ಆಡಿಯೋ ಕವನಗಳು, ವಿಡಿಯೋ ಉಪನ್ಯಾಸ, ಕಥೆಗಳು, ಮತ್ತು ಅಸೈನ್ ಮೆಂಟ್ ಗಳ ಮೂಲಕ ಶೇ. 100 ರಷ್ಟು ಬಾಲಕಿರ ಹಾಜರಾತಿ ಶಾಲೆಯಲ್ಲಿ ಇರುವಂತೆ ಮಾಡಿದ್ದಾರೆ.

SCROLL FOR NEXT