ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಅವರೊಂದಿಗೆ ಉದ್ಯಮಿ ಕಾರ್ತಿಕ್ ನಾರಾಯಣ್ 
ವಿಶೇಷ

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗ್ರಾಮೀಣ ಭಾಗದ ವಾರಿಯರ್ಸ್ ಗೆ ನೆರವಾದ 'ಭರವಸೆ' ಯೋಜನೆ! 

ಓರ್ವ ಉದ್ಯಮಿ, ಪೊಲೀಸ್ , ಎರಡು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ನೂರಾರು ಸಮಾನ ಮನಸ್ಸಿನ ಜನರ ತಂಡವೊಂದು ಜುಲೈ ತಿಂಗಳಲ್ಲಿ ಭರವಸೆ ಯೋಜನೆ ಆರಂಭಿಸುವ ಮೂಲಕ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನೆರವು ನೀಡಿದ್ದಾರೆ.

ಬೆಂಗಳೂರು: ಓರ್ವ ಉದ್ಯಮಿ, ಪೊಲೀಸ್ , ಎರಡು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ನೂರಾರು ಸಮಾನ ಮನಸ್ಸಿನ ಜನರ ತಂಡವೊಂದು ಜುಲೈ ತಿಂಗಳಲ್ಲಿ ಭರವಸೆ ಯೋಜನೆ ಆರಂಭಿಸುವ ಮೂಲಕ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನೆರವು ನೀಡಿದ್ದಾರೆ.

ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂವಹನ ಮತ್ತು ಕೌಶಲ್ಯದ ಕೊರತೆಯಿಂದಾಗಿ ಯುವ ಪದವೀಧರರು ಕೆಲಸ ಹುಡುಕುವುದು ಕಷ್ಟವಾಗಿತ್ತು. ಇವರಿಗೆ ನೆರವು ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಭರವಸೆ ಯೋಜನೆಯನ್ನು ಆರಂಭಿಸಿದ್ದಾಗಿ ದಿವಂಗತ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ವಿಷನ್ 2020 ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ ಡಾ. ಕಾರ್ತಿಕ್ ನಾರಾಯಣ್ ಹೇಳುತ್ತಾರೆ.

ಹೆಚ್ಚಿನ ಸಾಮರ್ಥ್ಯ ಮತ್ತು ಅಂಕಗಳೊಂದಿಗೆ ಪದವೀಧರರಾದ ಅನೇಕ ಯುವಕರಿಗೆ ಸಂವಹನ ಕೌಶಲ್ಯ ಮತ್ತು ಇಂಗ್ಲಿಷ್ ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳದ ಕಾರಣ ಅವರಿಗೆ ಯಾವುದೇ ಉದ್ಯೋಗವಿಲ್ಲದಂತಾಗಿತ್ತು. ಅಂತಹ ಸಂದರ್ಭದಲ್ಲಿ  ಸುಗರಧಾನ ಎಂಬ ಸಂಸ್ಥೆ ಇಂತಹ ಕೌಶಲ್ಯಗಳನ್ನು ನೀಡಲು ಪ್ರಾರಂಭಿಸಿತು ಎಂದು ಅವರು ತಿಳಿಸಿದರು.

ಸಾಂಕ್ರಾಮಿಕ ಬಂದಾಗ ತಕ್ಷಣದ ಅಗತ್ಯತೆಗಳ ಕಡೆಗೆ ಹೆಚ್ಚಿನ  ಗಮನ ಹರಿಸಿದ ಡಾ. ನಾರಾಯಣ್, ಆರ್ ಡಿಸಿ ಫೌಂಡೇಷನ್, ಸಮನ್ವಯ ಟ್ರಸ್ಟ್ ಮತ್ತು ಐಪಿಎಸ್ ಅಧಿಕಾರಿ ರವಿಚೆನ್ನಣ್ಣನವರ್ ಅವರೊಂದಿಗೆ ತಂಡವನ್ನು ಕಟ್ಟಿಕೊಂಡು ಭರವಸೆ ಯೋಜನೆಯನ್ನು ಪ್ರಾರಂಭಿಸುತ್ತಾರೆ.  ತಮ್ಮ ನೆಟ್ ವರ್ಕ್ ಮೂಲಕ ಬಡವರು ಹಾಗೂ ವಸತಿ ರಹಿತರಿಗೆ ಆಹಾರ ಧಾನ್ಯಗಳನ್ನು ಪೂರೈಸುತ್ತಾರೆ. 

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಮುಂಚೂಣಿ ಕಾರ್ಯಕರ್ತರಿಗೆ ತಯಾರಿಸಿದ ಆಹಾರ, ಮಾಸ್ಕ್ ಮತ್ತು ಸ್ಯಾನಿಟೈಸರ್ಸ್ ತಲುಪಿಸುತ್ತಾರೆ. ಸರ್ಕಾರದ ಪರಿಹಾರ ಕೇಂದ್ರ, ಶಿಬಿರಗಳು, ಕೊಳಚೆ ಪ್ರದೇಶಗಳು ಮತ್ತು ವಸತಿ ರಹಿತರಿಗೆ ಆಹಾರ ಧಾನ್ಯ ಮತ್ತು ಬೇಯಿಸಿದ ಆಹಾರವನ್ನು ಕೂಡಾ ಪೂರೈಸುತ್ತಾರೆ. ಅಲ್ಲದೇ ಬೀದಿ ನಾಯಿ ಮತ್ತು ಬೆಕ್ಕುಗಳಿಗೆ ಆಹಾರ ಒದಗಿಸುತ್ತಾರೆ.

ಗ್ರಾಮೀಣ ಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಸೆಮಿನಾರ್ ಗಳು, ರೈತರಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು, ಕೋವಿಡ್  ನಿಂದಾಗಿ ಆಸ್ಪತ್ರೆ ವೆಚ್ಚವನ್ನು ಭರಿಸಲು ಮೂಲ ವಿಮೆ ವಿಮೆ ಹೊಂದಿಲ್ಲದಂತವರಿಗೆ ವೈದ್ಯಕೀಯ ನೆರವನ್ನು ಒದಗಿಸಲಾಯಿತು. ಸಾಂಕ್ರಾಮಿಕ ಸಂದರ್ಭದಲ್ಲಿ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು ಎಂದು ಡಾ. ನಾರಾಯಣ್ ತಿಳಿಸಿದರು.

ಬೆಂಗಳೂರಿನಾದ್ಯಂತ ಜೈವಿಕ ಕಿಣ್ವ  ಸಿಂಪಡಣೆ ಅವರ ಮುಂದಿನ ಕಾರ್ಯಸೂಚಿಯಾಗಿದೆ. ಜೈವಿಕ ಕಿಣ್ವಗಳು ನೈಸರ್ಗಿಕ ಕೀಟಗಳು ಮತ್ತು ತರಕಾರಿ ಅಥವಾ ಹಣ್ಣಿನ ಸಿಪ್ಪೆಗಳು ಅಥವಾ ತ್ಯಾಜ್ಯದಿಂದ ತಯಾರಿಸಿದ ಜೀವಾಣು ನಿವಾರಕಗಳಾಗಿವೆ ಮತ್ತು ಇವು ಸೂಕ್ಷ್ಮಜೀವಿಗಳಿಂದ ರಕ್ಷಿಸುತ್ತವೆ ಎಂದು ಹೇಳಲಾಗುತ್ತದೆ.

ರವಿ ಚೆನ್ನಣ್ಣನವರ್ ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು, ಮಹಿಳೆಯರ ಸುರಕ್ಷತೆ ಮತ್ತು ಔಷಧ ಅರಿವು ಪ್ರಚಾರ ಕಾರ್ಯಕ್ರಮ ಮೂಲಕ ಅಪಾರ ನೆರವು ನೀಡಿದ್ದಾರೆ. ಇದಕ್ಕಾಗಿ ಪೊಲೀಸ್, ಎನ್ ಜಿಒಗಳು ಮತ್ತು ಸರ್ಕಾರದ ಸಂಸ್ಥೆಗಳ ತಂಡ ಮಾಡಿಕೊಂಡಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಬೆಂಗಳೂರಿನ ಆರ್ ಎಸ್ ಎಫ್ ಪ್ರತಿಭೆಯನ್ನು ಗುರಿತಿಸಿ ಬೆಂಬಲಿಸುವ ಕೆಲಸ ಮಾಡುತ್ತಿರುವುದಾಗಿ ಡಾ. ನಾರಾಯಣ್ ತಿಳಿಸಿದರು.

ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ನಮ್ಮ ತಂಡ ಸ್ಥಳೀಯ ಸರ್ಕಾರಿ ಅಧಿಕಾರಿಗಳೊಂದಿಗೆ ಕೈ ಜೋಡಿಸಿದೆ. ಮುಂದಿನ ವರ್ಷದ ಅಕ್ಟೋಬರ್ ಒಳಗಾಗಿ ಭರವಸೆ ಯೋಜನೆ ರಾಜ್ಯಾದ್ಯಂತ 1 ಸಾವಿರ ಹಳ್ಳಿಗಳನ್ನು ತಲುಪಸಿಲಿದ್ದು, ಮುಖ್ಯ ಸಂಯೋಜಕರಾಗಿ ಪ್ರತಿಯೊಬ್ಬರೂ ರೋಲ್ ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಂಡದ ಇನ್ನೊಬ್ಬ ಸದಸ್ಯರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT