ವಿಶೇಷ

ಭಾರತದಲ್ಲಿ ಮೊದಲು! ದೆಹಲಿ ವೈದ್ಯರಿಂದ ನಾಯಿಗೆ ಪೇಸ್‌ಮೇಕರ್ ಶಸ್ತ್ರಚಿಕಿತ್ಸೆ

Raghavendra Adiga

ನವದೆಹಲಿ: ದೇಶದ ಪಶುವೈದ್ಯಕೀಯಲೋಕದಲ್ಲಿ ಹೊಸದೊಂದು ಅಧ್ಯಾಯ ಸೃಷ್ಟಿಯಾಗಿದೆ. ಏಳೂವರೆ ವರ್ಷದ ಕಾಕರ್ ಸ್ಪೈನಿಯಲ್ ಗಾಗಿ ಪೇಸ್‌ಮೇಕರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಇದು ಭಾರತದಲ್ಲಿ ಇಂತಹದೊಂದು ಶಸ್ತ್ರಚಿಕಿತ್ಸೆ ನಡೆದಿರುವುದು ಇದು ಮೊದಲು ಎನ್ನಲಾಗಿದೆ.

ಇಂಪೋರ್ಟ್ ಮಾಡಿಕೊಂಡಿದ್ದ ಪೀಡಿಯಾಟ್ರಿಕ್ ಪೇಸ್‌ಮೇಕರ್ ಅನ್ನು ಹೆಣ್ಣು ನಾಯಿ ’ಖುಷ” ಗೆ ಅಳವಡಿಸಲಾಗಿದೆ.ಈ ಮೂಲಕ ನಾಯಿಯ ಹೃದ್ಯ ಬಡಿತವನ್ನು ಆಮಾನ್ಯವಾದ 60-120 ಬಾರಿಗೆ ಬದಲು ನಿಮಿಷಕ್ಕೆ 20 ಬಡಿತಗಳಿಗೆ ಇಳಿಸಲಾಗಿದೆ.

"ಸಾಮಾನ್ಯ ಹೃದಯದ ಕಾರ್ಯಚಟುವಟಿಕೆಗೆ ಅಗತ್ಯವಾದ ಪ್ರಚೋದನೆಗಳನ್ನು ನಡೆಸಲು ನಾಯಿಗೆ ಸಾಧ್ಯವಾಗಿರಲಿಲ್ಲ. ಹೃದಯದಿಂದ ಹರಿಯುವ ರಕ್ತದ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು ನಾಯಿ ಆಗಾಗ್ಗೆ ಸಿಂಕೋಪ್ ಗೆ ಒಅಳಗಾಗುತ್ತಿತ್ತು.”ಎಂದು ಗ್ರೇಟರ್ ಕೈಲಾಶ್ ನ  ಮ್ಯಾಕ್ಸ್ ವೆಟ್ಸ್ ಆಸ್ಪತ್ರೆಯ ಇಂಟರ್ ವೆನ್ಷನಲ್ ಕಾರ್ಡಿಯಾಲಜಿಸ್ಟ್ ಫಾರ್ ಸ್ಮಾಲ್ ಎನಿಮಲ್ಸ್ ಡಾ. ಬಾನುದೇವ್ ಶರ್ಮಾ ಹೇಳಿದ್ದಾರೆ.

ಖುಷಿ ಮಾಲೀಕರ ಪ್ರಕಾರ ಈ ನಾಯಿ ಬಹು ಸೋಮಾರಿಯಾಗಿತ್ತು. "ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ತುರ್ತುಆಪರೇಷನ್ ಸಮಯದಲ್ಲಿ ತೀವ್ರವಾಗಿ ಕುಸಿದು ಹೋಗಿತ್ತು. ಆದರೆ ಶಸ್ತ್ರಚಿಕಿತ್ಸಕರುನಾಯಿಯನ್ನು ಮತ್ತೆ ಚೇತನಗೊಳ್ಳುವಂತೆ ಮಾಡಲು ಯಶಸ್ವಿಯಾಗಿದ್ದರು.ಖುಷಿ ತನ್ನ ಕಿವಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ, ವೈದ್ಯರು ಆ ನಾಯಿಯನ್ನು ಇವ್ಯಾಲ್ಯುವೇಟ್ ಮಾಡಿದ್ದಾರೆ.ಇಸಿಜಿಯಲ್ಲಿ ಸಂಪೂರ್ಣ ಹೃದಯ ನಿರ್ಬಂಧವೌ ಕಂಡುಬಂದಿದೆ. . ಡಿಸೆಂಬರ್ 15 ರಂದು ಖುಷಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಮತ್ತು ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ನಂತರ ಪೇಸ್‌ಮೇಕರ್ ಅನ್ನು ಅಳವಡಿಸಲಾಯಿತು.

SCROLL FOR NEXT