ವಿಶೇಷ

ಸೋಷಿಯಲ್ ಮೀಡಿಯಾದಲ್ಲಿ ಹೊಸ ಚಾಲೆಂಜ್: ತಲೆ ಚಚ್ಕೊಳ್ತಿದ್ದಾರೆ ಪೋಷಕರು!

Srinivas Rao BV

ಸಾಮಾಜಿಕ ಜಾಲತಾಣಗಳಲ್ಲಿ ಜೀವಕ್ಕೇ ಕುತ್ತು ತರುವ ವಿದ್ಯಾರ್ಥಿಗಳನ್ನು ಸೆಳೆಯುವ ಚಾಲೆಂಜ್ ಗಳು ಹೊಸತು ಅಲ್ಲ, ಅದಕ್ಕೆ ಬರವೂ ಇಲ್ಲ. ಅಂಥಹದ್ದೇ ಒಂದು ಹೊಸ ಚಾಲೆಂಜ್ ಈಗ ಪೋಷಕರನ್ನು ತಲೆಕೆಡಿಸಿಕೊಳ್ಳುವಂತೆ, ಅಲ್ಲಲ್ಲ ತಲೆ ಚಚ್ಚಿಕೊಳ್ಳುವಂತೆ ಮಾಡಿದೆ. 

ಈ ಚಾಲೆಂಜ್ ಗೆ ತಲೆ ಚಚ್ಜಿಕೊಳ್ಳುವುದು ಅಂತ (ಸ್ಕಲ್ ಬ್ರೇಕರ್) ಹೆಸರು. ಟಿಕ್ ಟಾಕ್ ನಲ್ಲಿ ಭಾರಿ ಸದ್ದು ಮಾಡಿತ್ತಿರುವ ಈ ಚಾಲೆಂಜ್ ನಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 

ಇದನ್ನು ಟ್ರಿಪ್ಪಿಂಗ್ ಜಂಪ್ ಚಾಲೆಂಜ್ ಎಂದೂ ಕರೆಯಲಾಗುತ್ತಿದ್ದು, ಪೋಷಕರಲ್ಲಿ ಆತಂಕ ಉಂಟುಮಾಡಿದೆ. ಮೊದಲು ಸ್ಪೇನ್ ನಲ್ಲಿ ತಮಾಷೆಯೆಂದು ವಿದ್ಯಾರ್ಥಿಗಳ ನಡುವೆ ಪ್ರಾರಂಭವಾದ ಈ ಚಾಲೆಂಜ್ ಗೆ ಅಗತ್ಯ ಇರೋದು 3 ಜನ. ಈ ಚಾಲೆಂಜ್ ಯುವ ಜನತೆಯ ನಡುವೆ ಜನಪ್ರಿಯವಾಗುತ್ತಿದೆ.

ಮೂವರು ಯುವಕರು ಪಕ್ಕಪಕ್ಕದಲ್ಲೇ ನಿಂತಿರುತ್ತಾರೆ. ಮೂವರೂ ಒಂದೇ ಬಾರಿಗೆ ಮೇಲೆ ನೆಗೆಯಬೇಕು ಮಧ್ಯದಲ್ಲಿರುವ ವ್ಯಕ್ತಿಯನ್ನು ಇನ್ನಿಬ್ಬರು ಬೀಳಿಸುತ್ತಾರೆ. ಹೀಗೆ ಬಿದ್ದ ವ್ಯಕ್ತಿಯ ತಲೆಗೆ ಪೆಟ್ಟಾಗಲಿದ್ದು, ಮೂಳೆ ಮುರಿಯುವುದು, ತಲೆಗೆ ಬಲವಾದ ಪೆಟ್ಟು ಬೀಳುವ ಸಾಧ್ಯತೆಗಳೂ ಇರಲಿವೆ. ಹಲವಾರು ದೇಶಗಳಲ್ಲಿ ಈ ರೀತಿಯ ಅವಘಡಗಳು ಸಂಭವಿಸಿದೆ. ಅದೃಷ್ಟವಶಾತ್ ಭಾರತದಲ್ಲಿ ಈ ವರೆಗೂ ಇಂಥಹ ಯಾವುದೇ ಘಟನೆಗಳು ವರದಿಯಾಗಿಲ್ಲ. 

SCROLL FOR NEXT