ವಿಶೇಷ

ಗಲಭೆಯಲ್ಲಿ ಸುಟ್ಟುಹೋದ ತನ್ನ ಯೋಧನನ ಮನೆ ಮರುನಿರ್ಮಾಣ ಮಾಡಿ 'ವಿವಾಹ ಉಡುಗೊರೆ' ಕೊಡಲಿರುವ ಬಿಎಸ್ಎಫ್!

Raghavendra Adiga

ನವದೆಹಲಿ:  ಈಶಾನ್ಯ ದೆಹಲಿಯಲ್ಲಿನ ಗಲಭೆಯಲ್ಲಿ ಭಸ್ಮವಾಗಿದ್ದ ಗಡಿ ಭದ್ರತಾ ಪಡೆ ಕಾನ್‌ಸ್ಟೆಬಲ್ ಮೊಹಮ್ಮದ್ ಅನೀಸ್ ಅವರ ಮನೆಯನ್ನು ಬಿಎಸ್‌ಎಫ್ ಪುನರ್ನಿರ್ಮಿಸಿ ಕೊಟ್ಟಿದ್ದು ಇದನ್ನು ಆತನ "ವಿವಾಹದ ಉಡುಗೊರೆ" ಎಂದು ಹೇಳಿದೆ. ಈ ಮೂಲಕ ಯೋಧರು, ಸೇನೆಯಲ್ಲಿನ ಸೌಹಾರ್ದತೆಯನ್ನು ಇನ್ನೊಮ್ಮೆ ಸಾಬೀತು ಮಾಡಿದೆ.

ಪಶ್ಚಿಮ ಬಂಗಾಳದ ಸಿಲಿಗುರಿ ಬಳಿಯ ರಾಧಬರಿಯಲ್ಲಿನ ಬಿಎಸ್ಎಫ್ ಶಿಬಿರದಲ್ಲಿ ನೇಮಕವಾಗಿದ್ದ 29 ವರ್ಷದ ಕಾನ್‌ಸ್ಟೆಬಲ್ ಮೊಹಮ್ಮದ್ ಅನೀಸ್ ಎನ್ನುವವರಿಗೆ ಸೇರಿದ ಮನೆ ಇದಾಗಿದೆ. ಅವರನ್ನು "ಶೀಘ್ರದಲ್ಲೇ" ದೆಹಲಿಗೆ ವರ್ಗಾಯಿಸಲಾಗುವುದು, ಇದರಿಂದಾಗಿ ಅವರು ತಮ್ಮ ಕುಟುಂಬದೊಂದಿಗೆ ಇರಬಹುದು ಮತ್ತು ಅವರ ಮದುವೆಗೆ ಸಿದ್ಧಆಗಬಹುದುಎಂದು ಎ ಹಿರಿಯ ಬಿಎಸ್ಎಫ್ ಅಧಿಕಾರಿ.ಯೊಬ್ಬರು ಹೇಳಿದ್ದಾರೆ.

ಈಶಾನ್ಯ ದೆಹಲಿಯ ಜಾಫ್ರಾಬಾದ್, ಮೌಜ್‌ಪುರ, ಗೋಕಲ್‌ಪುರಿ, ಖಜುರಿ ಖಾಸ್ ಮತ್ತು ಭಜನ್‌ಪುರದಲ್ಲಿ ನಡೆದ ಗಲಭೆಯಲ್ಲಿ 42 ಜನರು ಸಾವನ್ನಪ್ಪಿ 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ

ಗಡಿ ಭದ್ರತಾ ಪಡೆಯ ಅಧಿಕಾರಿಗಳು ಖಜುರಿ ಖಾಸ್‌ನಲ್ಲಿರುವ ಕಾನ್‌ಸ್ಟೆಬಲ್‌ ಮೊಹಮ್ಮದ್ ಅನೀಸ್ ಅವರ ಮನೆಗೆ ಹಾನಿಯಾಗಿರುವ ಬಗೆಗೆ ಮಾದ್ಯಮಗಳ ವರದಿಯಿಂದ ತಿಳಿದುಕೊಂಡಿದ್ದಾರೆ. "ಈಶಾನ್ಯ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಯ ಸಂದರ್ಭದಲ್ಲಿ ದಂಗೆಕೋರರು ಕಾನ್‌ಸ್ಟೆಬಲ್‌ ಪೋಷಕರಿದ್ದ ಮನೆಯನ್ನು ಸುಟ್ಟ ಕಾರಣ ವ್ಯಾಪಕ ಹಾನಿಗೊಳಲಾಗಿತ್ತು. ಅವರ ಕುಟುಂಬ ಸದಸ್ಯರು ಸುರಕ್ಷಿತವಾಗಿದ್ದರೂ, ಮನೆ ಮರುನಿರ್ಮಾಣವಾಗದೆ ಆ ಮನೆಯಲ್ಲಿ ಅವರು ವಾಸಿಸುವಂತಿರಲಿಲ್ಲ. ನವೀಕರಣ ಕಾರ್ಯ ನಡೆಯುವುದು ಅನಿವಾರ್ಯವಾಗಿತ್ತು" ಅಧಿಕಾರಿ ಹೇಳಿದರು.

ಬಿಎಸ್ಎಫ್ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಪುಷ್ಪೇಂದ್ರ ರಾಥೋಡ್ ಅವರು ಶನಿವಾರ ಅನೀಸ್ ಅವರ ಪೋಷಕರು ಮತ್ತುಇತರ ಕುಟುಂಬ ಸದಸ್ಯರನ್ನು ಅವರ ಮನೆಯಲ್ಲಿ ಭೇಟಿಯಾದರು ಮತ್ತು ಅವರಿಗೆ ಅರೆಸೈನಿಕ ಪಡೆಗಳ ಎಲ್ಲ ಸಹಾಯದ ಭರವಸೆ ನೀಡಿದರು. "ನಮ್ಮ ಕಲ್ಯಾಣ ನಿಧಿಯಿಂದ ಅನೀಸ್ ಅವರಿಗೆ  10 ಲಕ್ಷ ರೂ.ಗಳ ನೆರವು ನೀಡಲು ನಿರ್ಧರಿಸಿದ್ದೇವೆ. ಅಲ್ಲದೆ,ನಮ್ಮ ಎಂಜಿನಿಯರಿಂಗ್ ವಿಭಾಗದಿನೈದು ದಿನಗಳಲ್ಲಿ ಮನೆಯನ್ನು ಪುನರ್ನಿರ್ಮಿಸುತ್ತದೆ" ಎಂದು ಅವರು ಹೇಳಿದರು.ಕಾನ್‌ಸ್ಟೆಬಲ್ ಕುಟುಂಬಕ್ಕೆ ಎಲ್ಲಾ ಸಹಾಯವನ್ನು ಒದಗಿಸಬೇಕೆಂದು ಬಿಎಸ್‌ಎಫ್ ಮುಖ್ಯಸ್ಥ ಮತ್ತು ಮಹಾನಿರ್ದೇಶಕ ವಿ.ಕೆ.ಜೋಹ್ರಿ ನಿರ್ದೇಶನ ನೀಡಿದ್ದಾರೆ ಎಂದು ಬಿಎಸ್‌ಎಫ್‌ನ ಪ್ರಧಾನ ಕಚೇರಿಯಲ್ಲಿ ನೇಮಕಗೊಂಡಿರುವ ರಾಥೋಡ್ ಪಿಟಿಐಗೆ ತಿಳಿಸಿದ್ದಾರೆ

"ಕಾನ್‌ಸ್ಟೆಬಲ್ ಮದುವೆಯಾಗಲು ನಿರ್ಧರಿಸಿದ್ದು ಏಪ್ರಿಲ್ ಮೊದಲು ನಾವು ಮನೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಮೂಲಕ ನಾವು ಇದನ್ನು ಅವರ ಮದುವೆಗೆ ಉಡುಗೊರೆಯಾಗಿ ಕೊಡಲಿದ್ದೇವೆ."

ಬಿಎಸ್ಎಫ್ ಒಂದು ಕುಟುಂಬವಾಗಿದ್ದು, ಸದಸ್ಯರಿಗೆ ಸಹಾಯ ಬೇಕಾದಾಗ, ಎಲ್ಲಾ ಸಂಪನ್ಮೂಲಗಳನ್ನು  ಒಟ್ಟುಗೂಡಿಸಲಾಗುತ್ತದೆ. ಕಾನ್‌ಸ್ಟೆಬಲ್‌ನ ಕುಟುಂಬಕ್ಕೆ ಯಾವುದೇ ಸಹಾಯ ಬೇಕಾದಲ್ಲಿ ತಮಗೆ ಳಿಸುವಂತೆ ಕೋರಿದ್ದೇವೆ ಎಂದು ಅಧಿಕಾರಿ ಹೇಳಿದರು. "ನಾವು ಶೀಘ್ರದಲ್ಲೇ ಕಾನ್ಸ್ಟೇಬಲ್ ಅನೀಸ್ ಅವರನ್ನು ದೆಹಲಿಗೆ ಪೋಸ್ಟ್ ಮಾಡುತ್ತಿದ್ದೇವೆ, ಇದರಿಂದ ಅವರು ತಮ್ಮ ಕುಟುಂಬದೊಂದಿಗೆ ಇರಲು ಮತ್ತು ಅವರ ಮದುವೆಗೆ ಸಹ ಸಿದ್ಧವಾಗಲು ಸಹಾಯವಾಗಲಿದೆ"

ಕಾನ್‌ಸ್ಟೆಬಲ್‌ ಮೊಹಮ್ಮದ್ ಅನೀಸ್ 2013ರಲ್ಲಿ ಬಿಎಸ್‌ಎಫ್‌ಗೆ ಸೇರ್ಪಡೆಯಾಗಿದ್ದು, ಗಲಭೆಯಲ್ಲಿ ಅವರ ಮನೆಗೆ ಹಾನಿಯಾಗಿದೆ ಎಂಬ ಬಗ್ಗೆ ಅವರು ತಮ್ಮ ಹಿರಿಯ ಅಧಿಕಾರಿಗಳಿಗೆ ಒಂದು ಮಾತನ್ನೂ ತಿಳಿಸಿರಲಿಲ್ಲ.  ಒಡಿಶಾದ ನಕ್ಸಲ್ ವಿರೋಧಿ ಕಾರ್ಯಾಚರಣೆ ಗ್ರಿಡ್ಡಿನಲ್ಲಿ ನೇಮಕಗೊಂಡ ಬಳಿಕ ಅನೀಸ್ ಅವರನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಯಿತು. ಅವರ ಕುಟುಂಬ ಕೂಡ ತುಂಬಾ ಧೈರ್ಯಶಾಲಿಯಾಗಿದ್ದು ರಿಗೆ ಬಿಎಸ್ಎಫ್ ನೀಡಿದ ಸಹಾಯಕ್ಕಾಗಿ ಅವರು ಕೃತಜ್ಞರಾಗಿದ್ದಾರೆ. ಶಾಂತಿ, ಸಹೋದರತ್ವ ಮತ್ತು ಸಾಮಾನ್ಯ ಜೀವನ  ಪುನಃಸ್ಥಾಪನೆಯಷ್ಟೇ ಅವರಿಗೆ ಮುಖ್ಯವಾಗಿದೆ. ಎಂದು ಇನ್ನೋರ್ವ ಅಧಿಕಾರಿ ಹೇಳಿದರು.

SCROLL FOR NEXT