ವಿಶೇಷ

ಭಾರತೀಯ ಲೇಖಕಿ ಕೃತಿಕಾ ಪಾಂಡೆ ಮುಡಿಗೆ ಕಾಮನ್‌‌ವೆಲ್ತ್ ಸಣ್ಣ ಕಥೆ ಪ್ರಶಸ್ತಿ ಗರಿ

Lingaraj Badiger

ನ್ಯೂಯಾರ್ಕ್: ಭಾರತೀಯ ಲೇಖಕಿ, 29 ವರ್ಷದ ಕೃತಿಕಾ ಪಾಂಡೆ ಅವರು 2020ನೇ ಸಾಲಿನ ಕಾಮನ್‌‌ವೆಲ್ತ್ ಸಣ್ಣಕಥೆ ವಿಭಾಗದಲ್ಲಿ ಏಷ್ಯಾದ ಪ್ರಾದೇಶಿಕ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಪಾಂಡೆ ಅವರ ‘ದಿ ಗ್ರೇಟ್ ಇಂಡಿಯನ್ ಟೀ ಮತ್ತು ಹಾವುಗಳು’ ಎಂಬ ಕಥೆಗಾಗಿ ಪ್ರಶಸ್ತಿ ಸಂದಿದೆ ಎಂದು ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ದಿ ಗ್ರೇಟ್ ಇಂಡಿಯನ್ ಟೀ ಮತ್ತು ಹಾವುಗಳು’ ಕತೆಯು ಪ್ರೀತಿ ಮತ್ತು ದ್ವೇಷದ ಕಲ್ಪನೆಯನ್ನು ನ್ಯಾವಿಗೇಟ್ ಮಾಡಲು ಪ್ರಯತ್ನಿಸುತ್ತಿರುವ ಇಬ್ಬರು ಯುವಜನರ ಕುರಿತಾಗಿದೆ. 

ಮೂಲತಃ ಜಾರ್ಖಂಡ್‌ನ ರಾಂಚಿ ಮೂಲದ ಯುವ ಲೇಖಕಿ ಕೃತಿಕಾ ಪಾಂಡೆ ಅವರ ಸಾಧನೆಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

SCROLL FOR NEXT