ಭಾರತೀಯ ಸೇನಾ ಯುದ್ಧ ವಿಮಾನ ಪೈಲಟ್ ಆಗಿ ಆಯ್ಕೆಯಾದ ಕೊಡಗಿನ ಯುವತಿ ಪುಣ್ಯ ನಂಜಪ್ಪ
ಮಡಿಕೇರಿಯ ಯುವತಿ ಪುಣ್ಯ ನಂಜಪ್ಪ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ಕೊಡಗಿನ ಮೊದಲ ಯುವತಿ ಎನಿಸಿಕೊಂಡಿದ್ದಾರೆ.
ಮಡಿಕೇರಿ: ಮಡಿಕೇರಿಯ ಯುವತಿ ಪುಣ್ಯ ನಂಜಪ್ಪ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ಕೊಡಗಿನ ಮೊದಲ ಯುವತಿ ಎನಿಸಿಕೊಂಡಿದ್ದಾರೆ.
ಮಡಿಕೇರಿಯ ನಂಜಪ್ಪ ಹಾಗೂ ಅನು ದಂಪತಿಗಳ ಒಬ್ಬಳೇ ಮಗಳಾಗಿದ್ದ ಪುಣ್ಯ ನಂಜಪ್ಪ ಬಾಲ್ಯದಿಂದಲೇ ಪೈಲಟ್ ಆಗುವ ಕನಸು ಕಂಡಿದ್ದರು. ಮೈಸೂರು ದಸರಾ ವೇಳೆ ನಡೆದ ಏರ್ ಶೋ ನೋಡಿದ್ದ ಪುಣ್ಯ ತಾವೂ ವಿಮಾನ ಪೈಲಟ್ ಆಗಬೇಕೆಂದು ನಿಶ್ಚಯಿಸಿದ್ದರು.
ಹೈದರಾಬಾದ್ ನಲ್ಲಿ ಒಂದು ವರ್ಷದ ಸೇನಾ ತರಬೇತಿ ಮುಗಿಸಿದ್ದ ಪುಣ್ಯ ಕಳೆದ ವರ್ಷ ೨೦೧೯ರಲ್ಲಿ ಟ್ರೈನಿ ಪೈಲಟ್ ಆಗಿ ಭಾರತೀಯ ಸೇನೆ ಸೇರಿದ್ದರು.
ಇಂಜಿನಿಯರಿಂಗ್ ಪದವೀಧರೆಯೂ ಆಗಿರುವ ಪುಣ್ಯ ನಂಜಪ್ಪ ಅವರೀಗ ಪೂರ್ಣ ಪ್ರಮಾಣದ ಯುದ್ಧ ವಿಮಾನ ಪೈಲಟ್ ಆಗಿ ಹೊರಹೊಮ್ಮಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.