ಸಂಚಾರಿ ಪರೀಕ್ಷಾ ವ್ಯಾನ್ ನಲ್ಲಿ ಮಾದರಿಗಳನ್ನು ಸಂಗ್ರಹಿಸುತ್ತಿರುವ ಚಿತ್ರ 
ವಿಶೇಷ

ಇಂದೋರ್: ಕೊರೋನಾವೈರಸ್ ವಿರುದ್ಧ ಗೆದ್ದು ಬಂದ 85 ವರ್ಷದ ಕ್ಯಾನ್ಸರ್ ರೋಗಿ!

85 ವರ್ಷದ ಕ್ಯಾನ್ಸರ್ ಪೀಡಿತ ವೈದ್ಯರೊಬ್ಬರು ಮಾರಕ ಕೊರೋನಾವೈರಸ್ ನಿಂದ ಗುಣಮುಖರಾಗಿರುವ ಘಟನೆ ಮಹಾರಾಷ್ಟ್ರದ ಭೋಪಾಲ್ ನಡೆದಿದೆ

ಭೋಪಾಲ್: 85 ವರ್ಷದ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರು ಮಾರಕ ಕೊರೋನಾವೈರಸ್ ನಿಂದ ಗುಣಮುಖರಾಗಿರುವ ಘಟನೆ ಮಹಾರಾಷ್ಟ್ರದ ಭೋಪಾಲ್ ನಡೆದಿದೆ. ರಕ್ತ ಹೀನತೆ ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರು  ಅಪಧಮನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಇದೀಗ  ತಮ್ಮ ಆತ್ಮಬಲದಿಂದ ಮಾರಕ ಕೊರೋನಾ- ಸೋಂಕಿನಿಂದ ಬಚಾವ್ ಆಗಿದ್ದಾರೆ.

20 ದಿನಗಳ ಹಿಂದೆ ವೈದ್ಯರು ಆಗಿರುವ ಈ ರೋಗಿ ಹಠಾತ್ತನೆ ಮನೆಯಲ್ಲಿ ಕುಸಿದು ಬಿದಿದ್ದು,ಉಜೈನ್ ನಲ್ಲಿ ವೈದ್ಯರಾಗಿರುವ ಅವರ ಸಹೋದರ ಏಪ್ರಿಲ್ ಎರಡನೇ ವಾರದಲ್ಲಿ ಆರ್ ಡಿ ಗಾರ್ಡಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಬಳಿಕ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. 

ಪಾರ್ಶ್ವವಾಯು ನಂತರ ಆರು ತಿಂಗಳ ಹಿಂದೆ ಅವರು ಅಪಧಮನಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಕ್ಯಾನ್ಸರ್  ಔಷಧಿಗಳನ್ನು ಪಡೆಯುತ್ತಿದ್ದರು. ರಕ್ತ ಹೀನತೆ ಹಾಗೂ ಎಡಗಡೆಯ ಶ್ವಾಸಕೋಶ ದೌರ್ಬಲ್ಯತೆಯಿಂದ ಅವರ ಆರೋಗ್ಯ ಪರಿಸ್ಥಿತಿ ಕ್ಷೀಣಿಸಿತ್ತು . ಅವರು ಬದುಕುಳಿಯುವ ಬಗ್ಗೆ ಭರವಸೆ ಇರಲಿಲ್ಲ. ಆದರೆ,  ಐಸಿಎಂಆರ್ ನಿಂದ ಅನುಮೋದನೆಗೊಂಡ ಚಿಕಿತ್ಸೆಯನ್ನು ನೀಡಲಾಯಿತು, ಅಂಟಿಬಯೋಟಿಕ್ಸ್ ಅಲ್ಲದೇ, ವಿಟಮಿನ್, ನ್ಯೂಟ್ರಿಷಿಯನ್ ಹಾಗೂ ಆಮ್ಲಜನಕದ ನೆರವಿನಿಂದ ಅವರು ಗುಣಮುಖರಾಗಿದ್ದಾರೆ ಎಂದು ಆರ್ ಡಿ ಗಾರ್ಡಿ ವೈದ್ಯಕೀಯ ಕಾಲೇಜಿನ ಡಾ.ಸುಧೀರ್ ಗವಾರಿಕರ್  ಹೇಳಿದ್ದಾರೆ.

ರೋಗಿಯು ಚೇತರಿಕೆಯಾಗುತ್ತಿದ್ದಂತೆ  ವೈದ್ಯರು ಆಶ್ಚರ್ಯಗೊಂಡರು. ಆರೇಳು ದಿನಗಳ ಹಿಂದೆ ಆಕ್ಸಿಜನ್ ವ್ಯವಸ್ಥೆಯನ್ನು ತೆಗೆದುಹಾಕಲಾಯಿತು. ತರುವಾಯ ಕೋವಿಡ್-19 ಪರೀಕ್ಷಾ ವರದಿಗಳು ನೆಗಟಿವ್ ಆಗಿ ಬಂದಿದ್ದು, ಮತ್ತೆ ಅವರನ್ನು ಇಂದೋರ್ ಗೆ ಸ್ಥಳಾಂತರಿಸುವುದಾಗಿ ಡಾ. ಸುಧೀರ್ ಗವಾರಿಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT