ವಿಶೇಷ

ಮಹಾತ್ಮಾ ಗಾಂಧೀಜಿ ತಂಗುವಿಕೆ ಪ್ರಭಾವ: ಬೆಳಗಾವಿಯ ಹುಡ್ಲಿ ಗ್ರಾಮದಲ್ಲಿ ಈಗಲೂ ಗಾಂಧಿ ತತ್ವ ಪಾಲನೆ!

Sumana Upadhyaya

ಹುಡ್ಲಿ: 1937ರಲ್ಲಿ ಬೆಳಗಾವಿ ಜಿಲ್ಲೆಯ ಹೂಡ್ಲಿಯಲ್ಲಿ ಮಹಾತ್ಮಾ ಗಾಂಧಿಯವರು ಒಂದು ವಾರ ತಂಗಿದ್ದ ಗ್ರಾಮವೀಗ ಬಹಳ ಬದಲಾವಣೆ ಕಂಡಿದೆ. ಕಳೆದೊಂದು ಶತಮಾನದಿಂದ ಇಲ್ಲಿ ಸಾಮಾಜಿಕ ಸುಧಾರಣೆಯಾಗಿದೆ.

ಇಲ್ಲಿನ ಜನರ ಪ್ರಮುಖ ಉದ್ಯೋಗ ಖಾದಿ ಬಟ್ಟೆ ನೇಯ್ಗೆಯಾದರೂ ಕೂಡ ಈಗ ಬದಲಿ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದಾರೆ. ದೇಶ ಸೇವೆಯ ಉದ್ದೇಶದಿಂದ ಹಲವು ಯುವಕರು ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುತ್ತಿದ್ದಾರೆ. ಅದರ ಜೊತೆ ಖಾದಿ ಉದ್ಯಮ ಮತ್ತು ಕೃಷಿಯನ್ನು ಮುಂದುವರಿಸುತ್ತಿದ್ದಾರೆ. ಇಲ್ಲಿನ ಪ್ರಮುಖ ಸಕ್ಕರೆ ಕಾರ್ಖಾನೆಯಾದ ಬೆಳಗಾವಿ ಸಕ್ಕರೆ ಕಾರ್ಖಾನೆ ಹೂಡ್ಲಿಯ ಕಬ್ಬು ಬೆಳೆಯನ್ನು ಅವಲಂಬಿಸಿದೆ.

ಹುಡ್ಲಿಯಲ್ಲಿ ಮದ್ಯದ ಅಂಗಡಿಗಳು ಇಲ್ಲ, ನಿವಾಸಿಗಳು ಯಾವುದೇ ರೀತಿಯ ಮೂಢನಂಬಿಕೆಗಳನ್ನು ನಂಬುವುದಿಲ್ಲ. ಗ್ರಾಮಸ್ಥರು ಗಾಂಧಿಯವರ ಸಿದ್ಧಾಂತಗಳನ್ನು ದೃಢವಾಗಿ ನಂಬುತ್ತಾರೆ ಮತ್ತು ಮುಂಬರುವ ಪೀಳಿಗೆಗಳು ಸಂಪ್ರದಾಯವನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ ಎನ್ನುತ್ತಾರೆ ಹುಡಲಿ ಖಾದಿ ಗ್ರಾಮೋದ್ಯೋಗ ಉತ್ಪಾದಕ ಸಂಘದ ಉತ್ಪಾದನಾ ವ್ಯವಸ್ಥಾಪಕ ಈಶ್ವರ್ ಕುಲ್ಗೋಡ್. 

ಗಾಂಧೀಜಿಯ ಸ್ವಾವಲಂಬನೆಯ ಸಿದ್ಧಾಂತಗಳಿಂದ ಪ್ರೇರಿತರಾಗಿ ಹುಡ್ಲಿಯ ನಿವಾಸಿಗಳು ಖಾದಿ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಗಂಗಾಧರ ರಾವ್ ದೇಶಪಾಂಡೆ --- ಗಾಂಧಿಯನ್ನು ಹುಡ್ಲಿಗೆ ಕರೆತಂದವರು ಗ್ರಾಮವನ್ನು ಖಾದಿ ಗ್ರಾಮವಾಗಿ ಪರಿವರ್ತಿಸಿದರು ಮತ್ತು ಅಂದಿನಿಂದ ಇಲ್ಲಿಗೆ ಖಾದಿ ಉತ್ಪಾದನೆ ವೇಗ ಪಡೆದುಕೊಂಡಿದೆ.

SCROLL FOR NEXT