ನೀಲಿಕುರಿಂಜಿ ಹೂವು 
ವಿಶೇಷ

12 ವರ್ಷಗಳ ಬಳಿಕ ಮತ್ತೆ ಅರಳಿದ ನೀಲಕುರಿಂಜಿ ಹೂವು: ಮಡಿಕೇರಿ ಬೆಟ್ಟ ಶ್ರೇಣಿಗೆ ನೀಲವರ್ಣದ ಹೊದಿಕೆ!

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದ್ದು, ಬೆಟ್ಟದ ಶ್ರೇಣಿ ನೀಲಿಮಯವಾಗಿ ಕಂಗೊಳಿಸುತ್ತಿದೆ. 

ಮಡಿಕೇರಿ: ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದ್ದು, ಬೆಟ್ಟದ ಶ್ರೇಣಿ ನೀಲಿಮಯವಾಗಿ ಕಂಗೊಳಿಸುತ್ತಿದೆ. 

ವಾರಾಂತ್ಯ ಕರ್ಫ್ಯೂ ಕಾರಣಕ್ಕೆ ವಾರದ ಮಧ್ಯದಲ್ಲೂ ಪ್ರವಾಸಿಗರು ಬಂದು ನೀಲಿ ಬೆಟ್ಟದ ಅಂದವನ್ನು ಸವಿದು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಹೂವು ಅರಳಿ ಒಂದು ವಾರವಾಗಿದ್ದು, ಇನ್ನೂ ಕೆಲವು ದಿನಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಸಂಘಜೀವಿಯಾಗಿ ಅರಳುವ ಹೂವು ಅಪರೂಪಕ್ಕೊಮ್ಮೆ ಅರಳಿ ಕಾಫಿ ನಾಡಿನ ಬೆಟ್ಟಗಳ ಅಂದ ಹೆಚ್ಚಿಸುತ್ತಿವೆ.

ಇತ್ತೀಚೆಗೆ ನನ್ನ ಸೋದರಸಂಬಂಧಿಗಳೊಂದಿಗೆ ಕೋಟೆ ಬೆಟ್ಟಕ್ಕೆ ಭೇಟಿ ನೀಡಿದ್ದೆ, ಅಲ್ಲಿ ನನಗೆ ಅಭೂತಪೂರ್ವ ಅನುಭವವಾಗಿತ್ತು. ಬೆಟ್ಟದ ಪ್ರಮುಖ ಭಾಗವು ಈ ನೇರಳೆ ಹೂವುಗಳಿಂದ ಆವೃತವಾಗಿತ್ತು. ಈ ಹೂವು ಪ್ರತಿ 12 ವರ್ಷಗಳಿಗೊಮ್ಮೆ ಅರಳುತ್ತವೆ ಎಂದು ನಂತರ ನಮಗೆ ತಿಳಿಯಿತು ಎಂದು ಸ್ಥಳೀಯರಾದ ಧನುಷ್ ಕಾವೇರಿಯಪ್ಪ ಹೇಳಿದರು.

ಪಶ್ಚಿಮಘಟ್ಟದ ಸಾಲಿನ ಕೋಟೆಬೆಟ್ಟ, ಪುಷ್ಪಗಿರಿ, ಕುಮಾರ ಪರ್ವತದಲ್ಲಿ ಹೂವುಗಳು ಅರಳುವುದುಂಟು. ಸ್ಥಳೀಯವಾಗಿ, ಅವುಗಳನ್ನು ಕುರಿಂಜಿ ಹೂವುಗಳು ಎಂದು ಕರೆಯಲಾಗುತ್ತದೆ ಮತ್ತು ವೈಜ್ಞಾನಿಕವಾಗಿ ಅವುಗಳನ್ನು ಸ್ಟ್ರೋಬಿಲಾಂಥೆಸ್ ಕುಂಥಿಯಾನ ಎಂದು ಕರೆಯಲಾಗುತ್ತದೆ. ಇವು 12 ವರ್ಷಗಳಿಗೊಮ್ಮೆ ಅರಳುವುದು ನಿಜ ಎಂದು ಮಡಿಕೇರಿ ಡಿಸಿಎಫ್ ಪೂವಯ್ಯ ಖಚಿತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT