ಸಾಂಕೇತಿಕ ಚಿತ್ರ 
ವಿಶೇಷ

ಶಾರ್ಕ್​ ಪ್ರತಿಕಾಯಗಳಲ್ಲಿನ ಪ್ರೋಟೀನ್​​​​ ನಲ್ಲಿ ಕೊರೊನಾಗೆ ತಡೆಯೊಡ್ಡುವ ಸಾಮರ್ಥ್ಯ!

ಸಾಗರಗಳಲ್ಲಿ ವಾಸ ಮಾಡುವ ಜೀವಿಗಳ ದೇಹದಲ್ಲಿರುವ ಪ್ರತಿಕಾಯಗಳು ಕೊರೊನಾ ತಡೆಯಲು ಸಹಕಾರಿಯಾಗಿವೆ ಎಂಬ ವಿಷಯ ಅಧ್ಯಯನವೊಂದರಿಂದ ಹೊರಬಿದ್ದಿದೆ.

ವಾಷಿಂಗ್ ಟನ್: ಕೊರೊನಾ ನಿಯಂತ್ರಣಕ್ಕೆ ಇಡೀ ಪ್ರಪಂಚವೇ ಟೊಂಕ ಕಟ್ಟಿ ನಿಂತಿದೆ. ಇದರ ಬೆನ್ನಲ್ಲೇ ಈಗಾಗಲೇ ಹಲವಾರು ದೇಶಗಳಲ್ಲಿ ಎರಡೂ ಲಸಿಕೆಗಳನ್ನು ನೀಡಲಾಗಿದೆ. ಆದರೂ ಕೊರೊನಾ ರೂಪಾಂತರ ಪಡೆದುಕೊಂಡು ಮನುಕುಲಕ್ಕೆ ಕಾಟ ಕೊಡುತ್ತಲೇ ಇದೆ. ಇದರ ಬೆನ್ನಲ್ಲೇ ಈಗ ಸಮುದ್ರ, ಸಾಗರಗಳಲ್ಲಿ ವಾಸ ಮಾಡುವ ಜೀವಿಗಳ ದೇಹದಲ್ಲಿರುವ ಪ್ರತಿಕಾಯಗಳು ಕೊರೊನಾ ತಡೆಯಲು ಸಹಕಾರಿಯಾಗಿವೆ ಎಂಬ ವಿಷಯ ಅಧ್ಯಯನವೊಂದರಿಂದ ಹೊರಬಿದ್ದಿದೆ.

ಶಾರ್ಕ್‌ಗಳ ದೇಹದಲ್ಲಿರುವ ಪ್ರತಿಕಾಯಗಳಲ್ಲಿರುವ ಪ್ರೋಟೀನ್ ಕೊರೊನಾ ಹಾಗೆ ಕೊರೊನಾ ರೂಪಾಂತರ ವೈರಸ್​ಗಳು ಮಾನವ ಜೀವಕೋಶಕ್ಕೆ ಸೋಂಕು ತಗುಲದಂತೆ ಸಹಾಯ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಶಾರ್ಕ್​ಗಳಲ್ಲಿರುವ ಪ್ರತಿಕಾಯಗಳಲ್ಲಿರುವ ಪ್ರೋಟೀನ್ ಅನ್ನು ವಿಎನ್​ಎಆರ್ ಎಂದು ಕರೆಯಲಾಗುತ್ತದೆ. ಈ ಪ್ರೋಟೀನ್ ಗಾತ್ರದಲ್ಲಿ ಮಾನವ ಪ್ರತಿಕಾಯಗಳ ಹತ್ತನೇ ಒಂದು ಭಾಗದಷ್ಟಿದ್ದು, ಸೋಂಕು ತಡೆಯುವ ಸಾಮರ್ಥ್ಯ ಹೊಂದಿರುತ್ತವೆಯಂತೆ.

ವಿಸ್ಕಾನ್ಸಿನ್ – ಮ್ಯಾಡಿಸನ್ ವಿಶ್ವವಿದ್ಯಾನಿಲಯದ ಸಂಶೋಧಕರು ಶಾರ್ಕ್​ ಪ್ರೋಟೀನ್​ಗಳು WIV1-CoV ಎಂಬ ಕೋವಿಡ್​ ಸೋಂಕನ್ನು ನಿಷ್ಕ್ರಿಯಗೊಳಿಸಲು ಸಹಕಾರಿ ಎಂದು ಸಂಶೋಧಿಸಿದ್ದಾರೆ. ಈ WIV1-CoV ಕೋವಿಡ್ ಸೋಂಕು ಮಾನವ ಜೀವಕೋಶಗಳಿಗೆ ತಗಲುವ ಸೋಂಕಾಗಿದೆ.

ಮುಂದೊಂದು ದಿನ ಎಲ್ಲ ರೀತಿಯ ಕೋವಿಡ್ ರೂಪಾಂತರಗಳಿಗೂ ಈ ಔಷಧ ಬಳಸುವ ಸಾಧ್ಯತೆ ಇದೆ ಎಂದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯ ರೋಗಶಾಸ್ತ್ರದ ಪ್ರಾಧ್ಯಾಪಕ ಆ್ಯರನ್ ಲೆಬ್ಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ