ವಿಶೇಷ

91 ದೇಶಗಳ ರಾಷ್ಟ್ರಗೀತೆ ಕಂಠಪಾಠ ಮಾಡಿ ದಾಖಲೆ ಬರೆದ ಗುಜರಾತ್ ಯುವಕ

Srinivasamurthy VN

ವಡೋದರಾ: ಗುಜರಾತ್‌ ನ ಹದಿಹರೆಯದ ಯುವಕನೋರ್ವ ತನೆಗೆ 91 ದೇಶಗಳ ರಾಷ್ಟ್ರಗೀತೆಗಳನ್ನು ಕಂಠಪಾಠ ಮಾಡಿದ್ದಾನೆ.

ವಡೋದರಾ ಮೂಲದ ಅಥರ್ವ ಅಮಿತ್ ಮುಲೆ ಎಂಬಾತ, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬ್ರಿಟನ್ ಸೇರಿದಂತೆ 91 ದೇಶಗಳ ರಾಷ್ಟ್ರಗೀತೆಗಳನ್ನು ನಾನು ಕಂಠಪಾಠ ಮಾಡಿದ್ದೇನೆ ಎಂದು ಹೇಳಿದ್ದಾನೆ.

ಪ್ರಸ್ತುತ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿರುವ 18 ವರ್ಷದ ಅಥರ್ವ ಅಮಿತ್, "ನಾವು ವಾಸುದೈವ ಕುಟುಂಬಕಂ ಅನ್ನು ನಂಬಿದ್ದರಿಂದ, ಇತರೆ ದೇಶಗಳ ರಾಷ್ಟ್ರಗೀತೆಗಳನ್ನು ಸಹ ಕಂಠಪಾಠ ಮಾಡಬೇಕೆಂದು ನಾನು ಭಾವಿಸಿದೆ. ಇದಕ್ಕಾಗಿ ಹಲವು ದೇಶಗಳ ರಾಷ್ಟ್ರಗೀತೆಗಳನ್ನು ಕಲಿತೆ. ಕತಾರ್, ಸಿರಿಯಾ,  ಥೈಲ್ಯಾಂಡ್, ಯೆಮೆನ್, ನ್ಯೂಜಿಲೆಂಡ್ ಸೇರಿದಂತೆ 69 ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ಪಠಿಸಲು ಸಾಧ್ಯವಾಗಿದ್ದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತಮಗೆ ಮಾರ್ಚ್ 6, 2021 ರಂದು ಪ್ರಮಾಣಪತ್ರವನ್ನು ನೀಡಿತು. ಈಗ ಒಟ್ಟು 91 ರಾಷ್ಟ್ರಗೀತೆಗಳನ್ನು ಕಂಠಪಾಠ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

"ನನ್ನ ಕುಟುಂಬ ಸದಸ್ಯರು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಾರೆ. ನನ್ನ ತಾಯಿ, ಅಜ್ಜಿಯರು ಮತ್ತು ತಾಯಿಯ ಸಹೋದರರು ವೃತ್ತಿಪರವಾಗಿ ಶಾಸ್ತ್ರೀಯ ಸಂಗೀತದಲ್ಲಿದ್ದಾರೆ. ನಾನು ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದೇನೆ ಮತ್ತು ವೀಣೆ ನುಡಿಸುತ್ತಿದ್ದೇನೆ. ಕುತೂಹಲದಿಂದ, ವಿವಿಧ ದೇಶಗಳ  ಸಂಗೀತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾನು ರಾಷ್ಟ್ರಗೀತೆಗಳನ್ನು ಕಲಿಯಲು ಪ್ರಾರಂಭಿಸಿದೆ. ಆದ್ದರಿಂದ ಕ್ರಮೇಣ, ನಾನು ವಿವಿಧ ದೇಶಗಳ ರಾಷ್ಟ್ರಗೀತೆಗಳನ್ನು ಕಲಿತಿದ್ದೇನೆ "ಎಂದು ಅವರು ಹೇಳಿದರು.

SCROLL FOR NEXT