ವಿಶೇಷ

ಕೊಡಗು: ನಕ್ಸಲ್ ವಿರೋಧಿ ಪಡೆ ಕಮಾಂಡೊಗಳಿಂದ ನಕ್ಸಲ್ ಪೀಡಿತ ಪ್ರದೇಶದ ಅರಣ್ಯವಾಸಿಗಳಿಗೆ ಫುಡ್ ಕಿಟ್ ವಿತರಣೆ

Shilpa D

ಮಡಿಕೇರಿ: ದಟ್ಟ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುವ ನಕ್ಸಲ್ ವಿರೋಧಿ ಪಡೆ ಕಮಾಂಡೋಗಳು ಕಾಡಿನಲ್ಲಿರುವ ಬಡ ನಿವಾಸಿಗಳಿಗೆ ಆಹಾರ ಧಾನ್ಯ ವಿತರಿಸಿದ್ದಾರೆ.

ಕೊಡಗು ಜಿಲ್ಲೆಯ ಅರಣ್ಯದಲ್ಲಿ ಪ್ರತ್ಯೇಕವಾಗಿ ವಾಸವಾಗಿರುವ ಬುಡಕಟ್ಟು ನಿವಾಸಿಗಳು ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿಗಳಿಲ್ಲದ ಕಾರಣ, ಹಲವರು ಸರ್ಕಾರಿ ಯೋಜನೆಗಳನ್ನು ಪಡೆಯುವುದರಿಂದ ವಂಚಿತರಾಗಿದ್ದಾರೆ. ಹೀಗಾಗಿ ಸಾಂಕ್ರಾಮಿಕ ರೋಗವು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ.

ನಾವು ಕಾಡುಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವಾಗ, ನಾವು ಕಾಡಿನಲ್ಲಿರುವ ಬಡ ಕುಟುಂಬಗಳನ್ನು ಗುರುತಿಸುತ್ತೇವೆ. ಎಎನ್‌ಎಫ್ ಅಧೀಕ್ಷಕ ಬಿ ನಿಖಿಲ್ ಅವರ ಪ್ರಯತ್ನದಿಂದ ನಾವು ಅಂತಹ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸುತ್ತಿದ್ದೇವೆ ಎಂದು ಭಾಗಮಂಡಲ ಮೂಲದ ಎಎನ್‌ಎಫ್ ಎಸ್‌ಐ ಶಶಿಕುಮಾರ್ ವಿವರಿಸಿದ್ದಾರೆ.

ಫಲಾನುಭವಿಗಳ ಪಟ್ಟಿಯನ್ನು ಕಮಾಂಡೋಗಳು ಎಎನ್‌ಎಫ್ ತಂಡಗಳಿಗೆ ಸಲ್ಲಿಸುತ್ತಿದ್ದಾರೆ. ಆಹಾರ ಕಿಟ್‌ಗಳನ್ನು ಪಡೆ ಜೋಡಿಸುತ್ತದೆ. ನಾವು ಆಹಾರ ಕಿಟ್‌ಗಳನ್ನು ಸ್ವೀಕರಿಸಿದ ನಂತರ, ನಾವು ಕಾಡಿಗೆ ಹೋಗಿ ಕಿಟ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುತ್ತೇವೆ ಎಂದು ಅವರು ಹೇಳಿದರು.

ಕೊಡಗಿನಾದ್ಯಂತ, ಎಎನ್‌ಎಫ್ ಕಮಾಂಡೋಗಳು ಈವರೆಗೆ ಸುಮಾರು 100 ಆಹಾರ ಕಿಟ್‌ಗಳನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ವಿತರಿಸಿದ್ದಾರೆ. 

ನಾವು ಜಿಲ್ಲೆಯ ಭಾಗಮಂಡಲ ಆರ್ಜಿ ಮತ್ತು ಕುಟ್ಟಾ ಗ್ರಾಮಗಳಲ್ಲಿ ಸುಮಾರು 60 ಆಹಾರ ಕಿಟ್‌ಗಳನ್ನು ವಿತರಿಸಿದ್ದೇವೆ. ಈ ವರ್ಷ ನಾವು ಈ ಕ್ರಮವನ್ನು ಪ್ರಾರಂಭಿಸಿದ್ದೇವೆ ಮತ್ತು ಸುಮಾರು 40 ಆಹಾರ ಕಿಟ್‌ಗಳನ್ನು ವಿತರಿಸಿದ್ದೇವೆ ಎಂದು 
ಅವರು ದೃಢಪಡಿಸಿದ್ದಾರೆ.

ಭಾಗಮಂಡಲ, ಕುಟ್ಟ ಮತ್ತು ಆರ್ಜಿ ಗ್ರಾಮಗಳಲ್ಲಿನ ಗ್ರಾಮೀಣ ಆಸ್ಪತ್ರೆಗಳಿಗೆ ಎಎನ್‌ಎಫ್ ತಂಡ ಆಮ್ಲಜನಕ ಕಾನ್ಸಂಟ್ರೇಟರ್ ದಾನ ಮಾಡಿದೆ. ಬೇರೆ ಜಿಲ್ಲೆಗಳಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಬಡ ಕುಟುಂಬಗಳಿಗೆ ದೇಣಿಗೆ ನೀಡಲು ಅನೇಕ ದಾನಿಗಳು ಮುಂದೆ ಬಂದಿದ್ದಾರೆ. ಆದರೆ ಕೊಡಗಿನಲ್ಲಿ ಯಾರು ದೇಣಿಗೆ ನೀಡಿಲ್ಲ, ಆದ್ದರಿಂದ ನಾವು ಎಎನ್‌ಎಫ್‌ನಿಂದ ಕಿಟ್‌ಗಳನ್ನು ಪಡೆಯುತ್ತಿದ್ದೇವೆ ಎಂದು ಶಶಿಕುಮಾರ್ ಹೇಳಿದರು.

SCROLL FOR NEXT