ಸಾಂದರ್ಭಿಕ ಚಿತ್ರ 
ವಿಶೇಷ

ಗುಜರಾತ್: 67ನೇ ವರ್ಷದಲ್ಲಿ ಪಿಎಚ್ ಡಿ ಪಡೆದು ಕನಸು ಈಡೇರಿಸಿಕೊಂಡ ವಡೋದರಾ ಮಹಿಳೆ!

ಅರವತ್ತು ವರ್ಷ ಆದ ಮೇಲೆ ರಾಮಾ, ಕೃಷ್ಣಾ ಎಂದು ಧ್ಯಾನ ಮಾಡುತ್ತಾ ದಿನ ಕಳೆಯುವುದು ಸಾಮಾನ್ಯ. ಆದರೆ 67 ವರ್ಷದ ಮಹಿಳೆಯೊಬ್ಬರು ಪಿಎಚ್ ಡಿ ಪಡೆದು ತಮ್ಮ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ.

ವಡೋದರಾ: ಅರವತ್ತು ವರ್ಷ ಆದ ಮೇಲೆ ರಾಮಾ, ಕೃಷ್ಣಾ ಎಂದು ಧ್ಯಾನ ಮಾಡುತ್ತಾ ದಿನ ಕಳೆಯುವುದು ಸಾಮಾನ್ಯ. ಆದರೆ 67 ವರ್ಷದ ಮಹಿಳೆಯೊಬ್ಬರು ಪಿಎಚ್ ಡಿ ಪಡೆದು ತಮ್ಮ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ. 

ಗುಜರಾತ್‌ನ ವಡೋದರಾದ ಉಷಾ ಲೋದಯಾ ತಮ್ಮ ಕನಸ್ಸನ್ನು ನನಸು ಮಾಡಿಕೊಂಡ ಮಹಿಳೆ,  ಕಲಿಯುವುದರಲ್ಲಿ ಚುರುಕಾಗಿದ್ದ ಅವರಿಗೆ 16ನೇ ವಯಸ್ಸಿನಲ್ಲಿ ವಿವಾಹ ನಿಶ್ಚಯವಾಗಿತ್ತು. ಬಿಎಸ್‌ಸಿ ಮೊದಲ ವರ್ಷದಲ್ಲಿದ್ದಾಗ ಮದುವೆಯಾದ್ದರಿಂದ ಶಿಕ್ಷಣ ಅರ್ಧಕ್ಕೇ ನಿಲ್ಲಿಸಬೇಕಾಯಿತು. ಅಂಥವರು ಐದು ದಶಕಗಳ ಬಳಿಕ 67ನೇ ವಯಸ್ಸಿನಲ್ಲಿ ಅವರು ಪಿಎಚ್‌.ಡಿ ಪೂರ್ತಿ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅದಕ್ಕೆ ಸಂಬಂಧಿಸಿದ ಮೌಖಿಕ ಸಂದರ್ಶನ (ವೈವಾ) ಕೂಡ ಪೂರ್ತಿಯಾಗಿದೆ.

ನಾನು ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದೆ, ಆದರೆ ವಿವಾಹದ ಕಾರಣ ನಾನು ನನ್ನ ಗಮನವನ್ನೆಲ್ಲಾ ಕುಟುಂಬದ ಕಡೆ ನೀಡಿದೆ. ಮದುವೆ ಬಳಿಕ ಪತಿಯ ಪ್ರೋತ್ಸಾಹದಿಂದ ಬಿಎಸ್‌ಸಿ ಪೂರ್ತಿಗೊಳಿಸಿದ ಅವರು, ಮಹಾರಾಷ್ಟ್ರದ ಶತ್ರುಂಜಯ ಅಕಾಡೆಮಿಯಿಂದ ಜೈನ ಸಿದ್ಧಾಂತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಅದೇ ವಿಚಾರದಲ್ಲಿ ಅವರು ಸಂಶೋಧನ ಪ್ರಬಂಧ ಮಂಡಿಸಿ ಪಿಎಚ್ ಡಿ ಪಡದಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.

ಮೊಮಕ್ಕಳ ಮುದ್ದಿನ ಅಜ್ಜಿಯಾಗಿರುವ ಉಷಾ ಮೊಮ್ಮಕ್ಕಳಿಗೂ ಉತ್ಸಾಹ ತುಂಬುತ್ತಿದ್ದಾರೆ. ಉಷಾ ಆವರಿಗೆ ತಮ್ಮ ಸೊಸೆ ನಿಶಾ ಲೋದಯಾ ಸಹಾಯ ಮಾಡಿದ್ದಾರೆ. ಪ್ರತಿದಿನ ಸುಮಾರು 6 ರಿಂದ 7 ಗಂಟೆ ಅಭ್ಯಾಸ ಮಾಡುತ್ತಿದ್ದರು. ಕುಟುಂಬಸ್ಥರೆಲ್ಲರೂ ಅವರಿಗೆ ಸಹಾಯ ಮಾಡದಿದ್ದರೇ ಉಷಾ ತಮ್ಮ ಗುರಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಉಷಾ ಅವರ ಸೊಸೆ ನಿಶಾ ಲೋದಯಾ ತಿಳಿಸಿದ್ದಾರೆ. ನೈತಿಕ ಸ್ಥೈರ್ಯ ತುಂಬಲು ಉಷಾ ಅವರ ಪತಿ ಇಂದು ಪ್ರಪಂಚದಲ್ಲಿಲ್ಲ, ಆದರೆ ಅವರ ಮಗ, ಮತ್ತು ಸೊಸೆ ಅವರ
ಬೆಂಬಲದಿಂದಾಗಿ ಪಿಎಚ್ ಡಿ ಪದವಿ ಪಡೆಯಲು ಸಹಾಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT