ಒಂದೇ ಹೆರಿಗೆಯಲ್ಲಿ 9 ಶಿಶುಗಳಿಗೆ ಜನ್ಮ ನೀಡಿ ಶಾಕ್ ಆದ ಮಹಿಳೆ!
ಸಾಮಾನ್ಯವಾಗಿ ತಾಯಂದಿರು ಅವಳಿ ಅಥವಾ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವುದು ಸಾಮಾನ್ಯ. ವಿಚಿತ್ರ ಎಂದರೆ ಮಹಿಳೆಯೊಬ್ಬಳು ಮೂರು, ನಾಲ್ಕು ಅಲ್ಲ, ಒಟ್ಟಿಗೆ 9 ಶಿಶುಗಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾಳೆ. ಈ ಘಟನೆ ಮಾಲಿಯಲ್ಲಿ ನಡೆದಿದೆ.
ಮಾಲಿ: ಸಾಮಾನ್ಯವಾಗಿ ತಾಯಂದಿರು ಅವಳಿ ಅಥವಾ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವುದು ಸಾಮಾನ್ಯ. ವಿಚಿತ್ರ ಎಂದರೆ ಮಹಿಳೆಯೊಬ್ಬಳು ಮೂರು, ನಾಲ್ಕು ಅಲ್ಲ, ಒಟ್ಟಿಗೆ 9 ಶಿಶುಗಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾಳೆ. ಈ ಘಟನೆ ಮಾಲಿಯಲ್ಲಿ ನಡೆದಿದೆ.
ಮಾಲಿ ದೇಶದ ಹಲಿಮಾ ಸಿಸ್ಸಿ (25) ಮಂಗಳವಾರ ಏಕ ಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಕೆಗೆ ಹೆರಿಗೆ ಮಾಡಿಸಲು ಇಬ್ಬರು ವೈದ್ಯರು ಭಾರಿ ಶ್ರಮಿಸಬೇಕಾಯಿತು..!. ಒಂದೇ ಹೆರಿಗೆಯಲ್ಲಿ ಒಂಬತ್ತು ಮಕ್ಕಳು ಜನಿಸಿರುವ ಸುದ್ದಿ ಆ ದೇಶದ ನಾಯಕರಿಗೂ ತಲುಪಿದೆ.
ಜನಿಸಿದ 9 ಮಕ್ಕಳಲ್ಲಿ ಐದು ಹೆಣ್ಣು ಹಾಗೂ ನಾಲ್ಕು ಗಂಡು ಶಿಶುಗಳಾಗಿವೆ. ತಾಯಿ ಹಾಗೂ ಒಂಬತ್ತು ಮಕ್ಕಳು ಕ್ಷೇಮವಾಗಿ, ಆರೋಗ್ಯವಾಗಿವೆ ಎಂದು ಆ ದೇಶದ ಆರೋಗ್ಯ ಸಚಿವ ಫಾಂಟಾ ಸಿಬಿ ಹೇಳಿದ್ದಾರೆ. ಸ್ಕ್ಯಾನಿಂಗ್ ಸಮಯದಲ್ಲಿ ಹೆಚ್ಚು ಸಂಖ್ಯೆಯ ಮಕ್ಕಳು ಜನಿಸುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದರಂತೆ.
ಅಂದಾಜಿನ ಪ್ರಕಾರ ಮಹಿಳೆ ಏಳು ಮಕ್ಕಳಿಗೆ ಜನ್ಮ ನೀಡಬಹುದು ಎಂದು ಭಾವಿಸಿದ್ದಳು. ಆದರೆ, ಒಮ್ಮೆಗೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿರುವುದಕ್ಕೆ ತಮಗೆ ಆಶ್ಚರ್ಯ, ಅಘಾತವಾಗಿದೆ ಎಂದು ಹಲೀಮಾ ಹೇಳಿದ್ದಾರೆ. ಸಿಸೇರಿಯನ್ ಮೂಲಕ ಹೆರಿಗೆ ಪ್ರಕ್ರಿಯೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.