ವಿಶೇಷ

ಕೊರೋನಾ ಗೆದ್ದ 103 ವರ್ಷದ ಅಜ್ಜನ ಅನುಭವ ಕೇಳಿ!

Sumana Upadhyaya

ಬೆಂಗಳೂರು: ಕೊರೋನಾ ಸೋಂಕಿಗೆ ತುತ್ತಾದ ಇಳಿವಯಸ್ಸಿನವರು ಆಸ್ಪತ್ರೆಗೆ ದಾಖಲಾದವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದವರು ಕಡಿಮೆ ಮಂದಿ. ಅಂಥವರಲ್ಲಿ 103 ವರ್ಷದ ಈ ಅಜ್ಜ ಗುಣಮುಖರಾಗಿ ಮನೆಗೆ ಬಂದಿದ್ದು ತಮಗೆ ಸಿಕ್ಕಿದ ಚಿಕಿತ್ಸೆ ಅನುಭವವನ್ನು ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಶಾಂತಿನಗರದಲ್ಲಿ ಪ್ರೈಮ್ ರೋಸ್ ಕೋವಿಡ್ ಕೇರ್ ಸೆಂಟರ್ ನಲ್ಲಿ 103 ವರ್ಷದ ಶರಣಯ್ಯ ಎಂಬುವವರು ದಾಖಲಾಗಿದ್ದರಂತೆ. ಸಮಯಕ್ಕೆ ಸರಿಯಾಗಿ ವೈದ್ಯರು ಮತ್ತು ದಾದಿಯರಿಂದ ಚಿಕಿತ್ಸೆ ದೊರಕಿ ಗುಣಮುಖರಾಗಿ ಬಂದಿದ್ದಾರೆ. ಈ ಕುರಿತು ಸ್ವತಃ ಅವರೇ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಆಸ್ಪತ್ರೆ ವೈದ್ಯರು, ನರ್ಸ್ ಗಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಉತ್ತಮವಾದ ವ್ಯವಸ್ಥೆ ಮಾಡಿದ್ದರು, ಆಸ್ಪತ್ರೆಯ ಕೊಡುಗೆ ಸ್ಮರಿಸುತ್ತೇನೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

103 ವರ್ಷದ ಈ ಹಿರಿಯಜ್ಜ ಕೋವಿಡ್ ನಿಂದ ಗುಣಮುಖರಾಗಿ ಬಂದಿದ್ದು ನೋಡಿದರೆ ಕೋವಿಡ್ ಸೋಂಕಿತ ಚಿಕ್ಕವಯಸ್ಸಿನವರಿಗೆ ಸ್ಪೂರ್ತಿಯಾಗಲೇಬೇಕು. ಧನಾತ್ಮಕ ಚಿಂತನೆ, ಗಟ್ಟಿ ಮನಸ್ಸು ಇಲ್ಲಿ ಮುಖ್ಯವಾಗುತ್ತದೆ ಎಂದು ಈ ಅಜ್ಜನನ್ನು ಕಂಡರೆ ಗೊತ್ತಾಗುತ್ತದೆಯಲ್ಲವೇ?

SCROLL FOR NEXT