ವಿಶೇಷ

ಕ್ಯಾಡಿಗಳಿಗೆ ನೆರವಿನ ಹಸ್ತ ಚಾಚಿದ ಗಾಲ್ಫರ್ ಎಸ್.ಚಿಕ್ಕರಂಗಪ್ಪ

Srinivas Rao BV

ಬೆಂಗಳೂರು: ಭಾರತದ ಗಾಲ್ಫರ್ ಎಸ್ ಚಿಕ್ಕರಂಗಪ್ಪ ಉನ್ನತ ಸ್ಥಾಯಿಗೆ ಏರಿದ್ದರೂ ತಮ್ಮ ವಿನಮ್ರತೆಯನ್ನು ಮರೆತಿಲ್ಲ. ಹಿಂದೊಮ್ಮೆ ಬಾಲ್ ಬಾಯ್ ಹಾಗೂ ಕ್ಯಾಡಿ ವಿಭಾಗದಲ್ಲಿ ಅನುಭವ ಹೊಂದಿದ್ದ ಚಿಕ್ಕರಂಗಪ್ಪ ಅವರು ಈಗ ಕ್ಯಾಡಿ ಹಾಗೂ ಬಾಲ್ ಬಾಯ್ ಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.

ಸಾಂಕ್ರಾಮಿಕದ ಅವಧಿಯಲ್ಲಿ ಗಾಲ್ಫ್ ಕೋರ್ಸ್ ಗಳು ಮುಚ್ಚಲ್ಪಟ್ಟಿದ್ದು, ಜೀವನಾಧಾರ ವೃತ್ತಿಗೆ ಆಧಾರವಾಗಿದ್ದು ಮುಚ್ಚಲ್ಪಟ್ಟಿದ್ದರ ಪರಿಣಾಮವಾಗಿ ಕ್ಯಾಡಿಗಳು ಬಾಲ್ ಬಾಯ್ ಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈಗಲ್ಟನ್ ಗಾಲ್ಫ್ ರೆಸಾರ್ಟ್ ನಲ್ಲಿರುವ ಕ್ಯಾಡಿಗಳಿಗೆ ಚಿಕ್ಕರಂಗಪ್ಪ ನೆರವು ನೀಡಲು ಮುಂದಾಗಿದ್ದಾರೆ.  

ಈಗಲ್ಟನ್ ಕೋರ್ಸ್ ಮುಚ್ಚಿ ಒಂದು ತಿಂಗಳಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ ಕ್ಯಾಡಿಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು. ಅವರೇ ನಮ್ಮ ಮೊದಲ ಆದ್ಯತೆಯಾಗಿದ್ದಾರೆ. ನಾನು ಅದೇ ಹಿನ್ನೆಲೆಯವನು ಎಂದಲ್ಲ, ಆದರೆ, ಅವರ ಸಂಕಷ್ಟದ ಸ್ಥಿತಿ ಅರ್ಥವಾಗುತ್ತದೆ" ಎಂದು ಚಿಕ್ಕರಂಗಪ್ಪ ಹೇಳಿದ್ದಾರೆ.

ವಿವಿಧ ರೀತಿಯ ಧಾನ್ಯಗಳು, 25 ಕೆ.ಜಿಯಷ್ಟು ಅಕ್ಕಿ, 5 ಕೆಜಿ ಗೋಧಿ, ಈರುಳ್ಳಿ, ಟೊಮ್ಯಾಟೋ, ಮಸಾಲೆಗಳು ಇತರ ಅಗತ್ಯ ಪದಾರ್ಥಗಳನ್ನು ನಾವು ವಿತರಣೆ ಮಾಡುತ್ತಿದ್ದೇವೆ. ಕ್ಯಾಡಿಗಳನ್ನು ಹೊರತುಪಡಿಸಿ ಈಗಲ್ಟನ್ ಇರುವ ಪ್ರದೇಶಗಳಲ್ಲಿನ ಗ್ರಾಮದ ಜನರಿಗೂ ಆಹಾರ ಪದಾರ್ಥಗಳನ್ನು ನೀಡಲಾಗಿದೆ.

"ನಮ್ಮ ಸುತ್ತಲಿನ ಜನರ ಕಾಳಜಿ ವಹಿಸುವುದು ತುಂಬಾ ಮುಖ್ಯವಾದದ್ದು. ನಾನು ಅವರು (ನಮ್ಮ ಗ್ರಾಮದ ಜನ) ಕಷ್ಟಪಡುತ್ತಿರುವುದನ್ನು ನೋಡಿದೆ. ಅವರಿಗೆ ಸಹಾಯ ಮಾಡಲೇಬೇಕಿತ್ತು" ಎನ್ನುತ್ತಾರೆ ಈಗಲ್ಟನ್ ನ ಮಾಲಿಕರು ಹಾಗೂ ಅದರ ಸದಸ್ಯರೊಂದಿಗೆ ನೆರವು ನೀಡಿರುವ ಚಿಕ್ಕರಂಗಪ್ಪ

ಚಿಕ್ಕರಂಗಪ್ಪ ಅವರು ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಇದೇ ಮಾದರಿಯಲ್ಲಿ 250 ಕುಟುಂಬಗಳಿಗೆ ಅವರು ಸಹಾಯ ಮಾಡಿದ್ದರು. ಈ ವರೆಗೂ 120 ಕುಟುಂಬಗಳಿಗೆ ಅಗತ್ಯ ಪದಾರ್ಥಗಳನ್ನು ತಲುಪಿಸಿರುವ ಅವರು, ನಗರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಮಾಡುವ ಯೋಜನೆ ಹೊಂದಿದ್ದಾರೆ. 
 

SCROLL FOR NEXT