ತಮ್ಮ ಮುದ್ದಿನ ಸಾಕುನಾಯಿಗಳೊಂದಿಗೆ ಶೆಲ್ಲಿ ಮತ್ತು ಕುಟುಂಬಸ್ಥರು 
ವಿಶೇಷ

ಸಾಕುನಾಯಿಗಳ ವಿವಾಹ ಏರ್ಪಡಿಸಿ ಅತಿಥಿಗಳಿಗೆ ಚಿಕನ್ ಬಿರಿಯಾನಿ ಉಣಬಡಿಸಿದ ಕೇರಳದ ಕುಟುಂಬ!

ಕೇರಳದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೋನಾ ಮಧ್ಯೆ ವಿವಾಹ ಇತ್ಯಾದಿ ಶುಭ ಸಮಾರಂಭಗಳನ್ನು ಮಾಡುವುದು, ಅತಿಥಿಗಳನ್ನು ಕರೆಯುವುದು ಕಷ್ಟವಾಗಿದೆ. ಈ ಮಧ್ಯೆ ಕುಟುಂಬಸ್ಥರೊಬ್ಬರು ತಮ್ಮ ಸಾಕುನಾಯಿಗೆ ಮದುವೆ ಮಾಡಿ ಸುದ್ದಿಯಾಗಿದ್ದಾರೆ. 

ತ್ರಿಶೂರ್: ಕೇರಳದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೋನಾ ಮಧ್ಯೆ ವಿವಾಹ ಇತ್ಯಾದಿ ಶುಭ ಸಮಾರಂಭಗಳನ್ನು ಮಾಡುವುದು, ಅತಿಥಿಗಳನ್ನು ಕರೆಯುವುದು ಕಷ್ಟವಾಗಿದೆ. ಈ ಮಧ್ಯೆ ಕುಟುಂಬಸ್ಥರೊಬ್ಬರು ತಮ್ಮ ಸಾಕುನಾಯಿಗೆ ಮದುವೆ ಮಾಡಿಸಿ ಸುದ್ದಿಯಾಗಿದ್ದಾರೆ. 

ಶೆಲ್ಲಿ ಪಿ ಕೆ ಮತ್ತು ಕುಟುಂಬಸ್ಥರ ಮುದ್ದಿನ ನಾಯಿಗಳಾದ ಆಸಿಡ್ ಎಂಬ ಸಾಕುನಾಯಿಗೆ ಜಾಹ್ನವಿ ಎಂಬ ಮತ್ತೊಂದು ಮುದ್ದು ಸಾಕುನಾಯಿಯನ್ನು ಮದುವೆ ಮಾಡಿಸಲಾಗಿದೆ. ಮಲಯಾಳಂ ಮಾಸ ಕನ್ನಿಯ ಶುಭ ಮುಹೂರ್ತದಲ್ಲಿ ಪುಣ್ಣಯುರ್ಕ್ಕುಲಮ್ ನಲ್ಲಿ ಕುನ್ನತುರ್ಮನ ಎಂಬಲ್ಲಿ ನಾಯಿಗಳಿಗೆ ಮದುವೆ ನಡೆದಿದೆ.

ಪೂರ್ವಾಹ್ನ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ಶುಭ ಮುಹೂರ್ತ ನೋಡಿಕೊಂಡು ಮನೆಯವರು ಮದುವೆ ಮಾಡಿಸಿದ್ದು ನಂತರ ಭರ್ಜರಿ ಭೋಜನವನ್ನೂ ನೀಡಿದ್ದರು. ಮದುವೆ ಸಮಾರಂಭದಲ್ಲಿ ನಾಯಿಗಳ ನೆಚ್ಚಿನ ಊಟ ಚಿಕನ್ ಬಿರಿಯಾನಿಯನ್ನು ಅತಿಥಿಗಳಿಗೆ ಉಣಬಡಿಸಲಾಗಿದೆ. ಆಸಿಡ್ ಮತ್ತು ಜಾಹ್ನವಿಯೊಟ್ಟಿಗೆ ಕುಳಿತು ಅತಿಥಿಗಳು ಚಿಕನ್ ಬಿರಿಯಾನಿಯನ್ನು ಸವಿದಿದ್ದಾರೆ.

ಎರಡು ವರ್ಷದ ಆಸಿಡ್ ಶೆಲ್ಲಿ ಮತ್ತು ಅವರ ಪತ್ನಿ, ಮಕ್ಕಳಿಗೆ ಕುಟುಂಬಸ್ಥರ ಹಾಗೆಯೇ ಇದೆ. ನನ್ನ ಪೋಷಕರಿಗೆ ನಾನು ಮತ್ತು ಸೋದರ ಅರ್ಜುನ್ ನಂತರ ಆಸಿಡ್ ಮೂರನೇ ಮಗನಂತೆ. ಆತನಿಗೆ ವಯಸ್ಸಾಗುತ್ತಿದ್ದಂತೆ ಜೋಡಿಯನ್ನು ಹುಡುಕುತ್ತಿದ್ದ ಪೋಷಕರು ತಕ್ಕ ಜೋಡಿ ಹೆಣ್ಣು ನಾಯಿಯನ್ನು ಹುಡುಕಿ ಮದುವೆ ಮಾಡಿಸಿದ್ದಾರೆ ಎಂದು ಶೆಲ್ಲಿಯವರ ಪುತ್ರ ಆಕಾಶ್ ಹೇಳುತ್ತಾರೆ. ಕಳೆದೊಂದು ವರ್ಷದಿಂದ ತಮ್ಮ ನಾಯಿ ಆಸಿಡ್ ಗೆ ಸೂಕ್ತ ಹೆಣ್ಣು ನಾಯಿಯನ್ನು ದಂಪತಿ ಹುಡುಕುತ್ತಿದ್ದರಂತೆ.

ನಾಯಿಯ ತರಬೇತುದಾರ ಮೂಲಕ ಜಾಹ್ನವಿ ಎಂಬ ಹೆಣ್ಣು ನಾಯಿಯನ್ನು ಕರೆತಂದು ವಿವಾಹ ಮಾಡಿಸಿದ್ದಾರೆ. ಮಲಯಾಳಂ ತಿಂಗಳು ಕನ್ನಿ ನಾಯಿಗಳ ಸಂಯೋಗ ತಿಂಗಳಿಗೆ ಪ್ರಶಸ್ತ ಎಂದು ಹೇಳಲಾಗುತ್ತಿದ್ದು ಈ ಸಮಯದಲ್ಲಿಯೇ ಸೂಕ್ತವೆಂದು ಮದುವೆ ಮಾಡಿಸಿದ್ದಾರೆ. ಅನೇಕರು ಏಕೆ ನಾಯಿಗಳಿಗೆ ಮದುವೆ ಮಾಡಿಸುತ್ತಿದ್ದೀರಿ ಎಂದು ಕೇಳಿದರು, ನಮಗೆ ನಮ್ಮ ಕುಟುಂಬಸ್ಥರ ರೀತಿಯೇ, ನಮ್ಮ ಪೋಷಕರಿಗೆ ಈ ನಾಯಿಗಳ ಮದುವೆಯಿಂದ ಖುಷಿಯಾಗಿದೆ ಎಂದು ಆಕಾಶ್ ಮತ್ತು ಅರ್ಜುನ್ ಹೇಳುತ್ತಾರೆ.

ನಾಯಿಗಳ ವಿವಾಹದ ವಿಡಿಯೊ ಮಾಡಿಸಿದ್ದು ಕುನ್ನತುರ್ಮನ ವಿವಾಹ ಸಮಾರಂಭ ವೈರಲ್ ಆಗಿದೆ. ಮದುವೆಯ ನಂತರ ಜಾಹ್ನವಿಯನ್ನು ಮನೆಗೆ ತುಂಬಿಸಿಕೊಂಡಿದ್ದು ಇನ್ನು ಮುಂದೆ ಶೆಲ್ಲಿ ಕುಟುಂಬದಲ್ಲಿ ಇಬ್ಬರು ನಾಯಿಗಳು ಒಟ್ಟಿಗೆ ಜೀವನ ನಡೆಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!