ವಿಶೇಷ

ಸ್ಟಾರ್ಟ್ ಅಪ್ ಫೆಸ್ಟ್ ನಲ್ಲಿ ಅತ್ಯುತ್ತಮ ಸಾಮಾಜಿಕ ಪರಿಣಾಮ ಪ್ರಶಸ್ತಿ ಗೆದ್ದ ಕರ್ನಾಟಕ ವಿದ್ಯಾರ್ಥಿಯ ಬ್ರೈಲ್ ಪ್ರಿಂಟರ್

Sumana Upadhyaya

ಬೆಂಗಳೂರು: ಹಲವಾರು ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಸ್ಟಾರ್ಟ್‌ಅಪ್ ಇಂಡಿಯಾ ಆಯೋಜಿಸಿದ ರಾಷ್ಟ್ರವ್ಯಾಪಿ ಪಿಚ್ ಫೆಸ್ಟ್ ಸ್ಮಾರ್ಟ್‌ ಐಡಿಯಾಥಾನ್ 2022 ರಲ್ಲಿ ಕರ್ನಾಟಕದ ವಿದ್ಯಾರ್ಥಿಯ ಆವಿಷ್ಕಾರವಾದ ಪೋರ್ಟಬಲ್ ಮತ್ತು ಅಗ್ಗದ ಬ್ರೈಲ್ ಪ್ರಿಂಟರ್ ಅತ್ಯುತ್ತಮ ಸಾಮಾಜಿಕ ಪ್ರಭಾವದ ವ್ಯಾಪಾರ ಯೋಜನೆ ಪ್ರಶಸ್ತಿ ಗೆದ್ದುಕೊಂಡಿದೆ. 

ಪೃಥ್ವಿ ಸಿಸ್ಟಮ್ಸ್ ಮತ್ತು ಇನ್ನೋವೇಶನ್ಸ್ ಸಂಸ್ಥಾಪಕ ಕವಿರಾಜ್ ಪೃಥ್ವಿ ಅವರ ತಂಡವು ಫೆಸ್ಟ್‌ಗೆ ಆಯ್ಕೆಯಾದ 1,200 ಮಂದಿಯಲ್ಲಿ ಒಬ್ಬರಾಗಿದ್ದಾರೆ, ಇವರ ಈ ತಂತ್ರಜ್ಞಾನ ಆವಿಷ್ಕಾರವು ಟ್ಯಾಕ್ಟಾಲ್, ಮೌಸ್-ಗಾತ್ರದ ಪೋರ್ಟಬಲ್ ಪ್ರಿಂಟರ್, ಬ್ರೈಲ್‌ನಲ್ಲಿ ಸುಲಭವಾಗಿ ಮುದ್ರಿಸಲು ಸಹಾಯ ಮಾಡುತ್ತದೆ. 

"ಬ್ರೈಲ್ ಪ್ರಿಂಟರ್‌ಗಳು ಪ್ರಮಾಣಿತ ಆಯಾಮಗಳಲ್ಲಿ ಮುದ್ರಿಸುತ್ತವೆ. ಇವು ತೀವ್ರ ದುಬಾರಿಯಾಗಿದ್ದು, ಸರಾಸರಿ ಸುಮಾರು $2000 ರಿಂದ $3000 ಬೆಲೆಬಾಳುತ್ತದೆ. ಬ್ರೈಲ್ ಲಿಪಿಯಲ್ಲಿ ಮುದ್ರಿಸಲು ದೃಷ್ಟಿವಿಶೇಷಚೇತನ ಮಕ್ಕಳು ಮತ್ತು ಇತರರಿಗೆ ಅಗ್ಗದ ವಿಧಾನದಲ್ಲಿ ಸುಲಭವಾಗಿ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಎಂದು ಕವಿರಾಜ್ TNIE ಗೆ ತಿಳಿಸಿದರು. 

ಕವಿರಾಜ್ ಅವರು II T ಗುವಾಹಟಿಯಲ್ಲಿ ಎಂಜಿನಿಯರಿಂಗ್ ಭೌತಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದು, ಕವಿರಾಜ್ ಮತ್ತು ಅವರ 15 ಸದಸ್ಯರ ತಂಡವು ಇತರ ರೀತಿಯ ಸಹಾಯಕ ತಂತ್ರಜ್ಞಾನವನ್ನು ಆವಿಷ್ಕರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

SCROLL FOR NEXT