ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಗ್ರಾಮ ಪಂಚಾಯತ್‌ನ ಸರ್ಕಾರಿ ಗುಡ್ಡೆಯಲ್ಲಿರುವ ಸ್ಮಶಾನ 
ವಿಶೇಷ

ಜೀವನದ ಅಂತಿಮ ಯಾತ್ರೆಗೊಂದು ಗೌರವದ ವಿದಾಯ: ಉಡುಪಿಯ ಕಾಪುವಿನಲ್ಲೊಂದು ಮಾದರಿ ಸ್ಮಶಾನ

ಸ್ಮಶಾನ ಎಂದರೆ ಮನಸ್ಸಿನಲ್ಲಿ ಮೂಡುವ ಕಲ್ಪನೆಗಳು, ಚಿತ್ರಗಳು ಏನು ಹೇಳಿ? ಮುರಿದ ಬೆಂಚುಗಳು, ಬೆಳೆದ ಪೊದೆಗಳು, ಹರಿದ ಬಟ್ಟೆಗಳು, ಒಣಗಿದ ಹೂವುಗಳು, ಮಣ್ಣಿನ ಮಡಕೆಗಳು. 

ಉಡುಪಿ: ಸ್ಮಶಾನ ಎಂದರೆ ಮನಸ್ಸಿನಲ್ಲಿ ಮೂಡುವ ಕಲ್ಪನೆಗಳು, ಚಿತ್ರಗಳು ಏನು ಹೇಳಿ? ಮುರಿದ ಬೆಂಚುಗಳು, ಬೆಳೆದ ಪೊದೆಗಳು, ಹರಿದ ಬಟ್ಟೆಗಳು, ಒಣಗಿದ ಹೂವುಗಳು, ಮಣ್ಣಿನ ಮಡಕೆಗಳು. 

ಆದರೆ ಇಲ್ಲೊಂದು ಸ್ಮಶಾನವಿದು, ಸಂಪೂರ್ಣ ಭಿನ್ನ. ಸುತ್ತಮುತ್ತ ಅಷ್ಟು ಸ್ವಚ್ಛವಾಗಿದ್ದು, ಹಚ್ಚ ಹಸಿರಿನ ಹೊದಿಕೆಯನ್ನು ಹೊಂದಿದ್ದು, ಜನರು ಇದನ್ನು ಉದ್ಯಾನವನ ಎಂದು ತಪ್ಪಾಗಿ ಭಾವಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಗ್ರಾಮ ಪಂಚಾಯತ್‌ನ ಸರ್ಕಾರಿ ಗುಡ್ಡೆಯಲ್ಲಿರುವ ಈ ಸ್ಥಳದಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಸಲಾಗುತ್ತಿದೆ ಎಂದು ಅದರೊಳಗೆ ಕಾಲಿಟ್ಟಾಗಲೇ ಗೊತ್ತಾಗುವುದು.

ಈಗ ಇದು ಇತರ ಸ್ಮಶಾನಗಳಿಗೆ ಮಾದರಿ ಎಂದು ಹೇಳಲಾಗಿದ್ದರೂ, ಇತ್ತೀಚಿನವರೆಗೂ ಅಷ್ಟು ಸೊಗಸಾಗಿರಲಿಲ್ಲ. ಸ್ಮಶಾನ ಇರುವ ಜಾಗವನ್ನು ‘ಕಪ್ಪು ಚುಕ್ಕೆ’ ಎಂದು ಗುರುತಿಸಿ ಅಲ್ಲಿ ಕಸ ಸುರಿಯುತ್ತಿದ್ದರು. ಸ್ಥಳೀಯ ಪಂಚಾಯತ್ ಸದಸ್ಯರು ಸೇರಿದಂತೆ ಹಲವಾರು ಉತ್ತಮ ಸಮಾಜಸೇವಕರ ತೀವ್ರ ಪ್ರಯತ್ನದ ನಂತರ, ಸ್ಮಶಾನವು ಈಗ ಉದ್ಯಾನದ ರೀತಿ ಕಂಗೊಳಿಸುತ್ತಿದೆ. ಮೃತರಿಗೆ ಸೂಕ್ತ ಗೌರವ ಇಲ್ಲಿ ನೀಡಲಾಗುತ್ತಿದೆ.

ಈ ಸ್ಮಶಾನವನ್ನು 1962 ರಲ್ಲಿ ಪ್ರಾರಂಭಿಸಲಾಯಿತು. ಆದರೆ ನಿಜವಾದ ಅಭಿವೃದ್ಧಿ - ಅದರ ರೂಪಾಂತರ - ಆರು ವರ್ಷಗಳ ಹಿಂದೆ ಇದನ್ನು ಮಾದರಿ ಸ್ಮಶಾನವನ್ನಾಗಿ ಪರಿವರ್ತಿಸಲು ಪಂಚಾಯತ್ ಆಸಕ್ತಿ ತೋರಿಸಿದಾಗ ನಡೆಯಿತು. ಸ್ಮಶಾನದ ಬಳಿ ಇರುವ 30 ಸೆಂಟ್ಸ್ ಬಂಜರು ಭೂಮಿಯನ್ನು ಕಸದ ತೊಟ್ಟಿಯಾಗಿ ಬಳಸಲಾಗುತ್ತಿತ್ತು ಎಂದು ಸ್ಮಶಾನದಲ್ಲಿ ಕೆಲಸ ಮಾಡುವ ಕಿಶೋರ್ ಪೂಜಾರಿ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ನಂತರ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ಕಟಪಾಡಿ ಗ್ರಾಮ ಪಂಚಾಯತ್ ಮುಂದೆ  ಅದನ್ನು ಉದ್ಯಾನವನ ರೀತಿಯಲ್ಲಿ ಪರಿವರ್ತಿಸಲು ತಮ್ಮ ಕಲ್ಪನೆ ಮುಂದಿಟ್ಟರು. ಪಂಚಾಯಿತಿ ಅಧ್ಯಕ್ಷೆ ಇಂದಿರಾ ಎಸ್‌ ಆಚಾರ್ಯ, ಉಪಾಧ್ಯಕ್ಷ ಅಬೂಬಕರ್‌ ಎ ಆರ್‌ ಅವರು ಅದರ ಪರಿವರ್ತನೆಯನ್ನು ಸೂಕ್ಷ್ಮವಾಗಿ ರೂಪಿಸಿದರು. ವಿಶಾಲವಾದ ಕಾಯುವ ಪ್ರದೇಶವಲ್ಲದೆ, ಉರುವಲು ಇಡಲು ಶೇಖರಣಾ ಕೊಠಡಿ ಮತ್ತು ಬೂದಿ ಕೊಳವನ್ನು ನಿರ್ಮಿಸಲಾಗಿದೆ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸ್ಮಶಾನದ ಪ್ರಾಂಗಣದಲ್ಲಿ ಸತ್ತವರ ಸಂಬಂಧಿಕರಿಗೆ ಕುಳಿತು ಧಾರ್ಮಿಕ ಕ್ರಿಯೆಗಳನ್ನು ಮಾಡಲು ಇಂಟರ್ಲಾಕ್ ಟೈಲ್ಸ್ ಮತ್ತು ಕಲ್ಲಿನ ಬೆಂಚುಗಳನ್ನು ಹಾಕಲಾಗಿದೆ. ಇಂಟರ್‌ಲಾಕಿಂಗ್‌ ಟೈಲ್ಸ್‌ ಹಾಕಲು ಸ್ಥಳೀಯ ಪಂಚಾಯಿತಿ ಹಣಕ್ಕಾಗಿ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದ್ದು, ಕಳೆದ ವರ್ಷ ಪಂಚಾಯಿತಿ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮೂಲಕ 2.36 ಲಕ್ಷ ರೂಪಾಯಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಅಂತ್ಯಕ್ರಿಯೆಯ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ಕಿಶೋರ್ ಪೂಜಾರಿ ಹೇಳುತ್ತಾರೆ. 

ಮೃತದೇಹವನ್ನು ಸುಡಲು 3 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತಿದ್ದರೂ ಬಡವರಿಂದ ಶುಲ್ಕ ಪಡೆಯದ ಹಲವು ನಿದರ್ಶನಗಳಿವೆ. ಈ ಹಿಂದೆ ತ್ಯಾಜ್ಯ ಸುರಿಯುವುದು ಅವ್ಯಾಹತವಾಗಿ ನಡೆದಾಗ ಬೇಸರಗೊಂಡಿದ್ದರು ಎನ್ನುತ್ತಾರೆ ಅಬೂಬಕರ್.

ಲಭ್ಯವಿರುವ 30 ಸೆಂಟ್ಸ್ ಖಾಲಿ ಬಂಜರು ಭೂಮಿಯಲ್ಲಿ ಉದ್ಯಾನವನ ರೀತಿ ಮಾಡಲಾಗಿದೆ. 85ಕ್ಕೂ ಹೆಚ್ಚು ವಿವಿಧ ಜಾತಿಯ ಹಣ್ಣುಹಂಪಲು ಸಸಿಗಳನ್ನು ನೆಡಲಾಗಿದ್ದು, ಅವು ಈಗ ಹುಲುಸಾಗಿ ಬೆಳೆಯುತ್ತಿವೆ. ಕೆಲವು ತರಕಾರಿ ಗಿಡಗಳನ್ನೂ ನೆಡಲಾಯಿತು. ಶೌಚಾಲಯ ನಿರ್ಮಿಸಲಾಗಿದೆ. ಶವರ್ ಸೌಲಭ್ಯದೊಂದಿಗೆ ಸ್ನಾನಗೃಹವೂ ಲಭ್ಯವಿದೆ.

ತೋಟಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಸುಸಜ್ಜಿತವಾದ ಸ್ಮಶಾನವು ಸಮಾಜಕ್ಕೆ ಉಪಯುಕ್ತ ಎಂಬ ಸಂದೇಶ ನೀಡಲು ನಾವು ಮುಂದಾಗಿದ್ದೇವೆ ಎಂದು ಆಚಾರ್ಯ ಹೇಳುತ್ತಾರೆ.

ಮಾಜಿ ಅಧ್ಯಕ್ಷ ಹಾಗೂ ಈಗ ಪಂಚಾಯಿತಿ ಸದಸ್ಯ ಅಶೋಕ್ ರಾವ್ ಅವರು ಮುಂದೆ ಬಂದು ತಾಯಿಯ ಸ್ಮರಣಾರ್ಥ ಚಿತಾಗಾರಕ್ಕೆ ದೀಪಗಳನ್ನು ಅರ್ಪಿಸಿದ್ದಾರೆ. ಸ್ಮಶಾನದ ಒಳಗಿನ ಗೋಡೆಗಳು ಜೀವನ ಮತ್ತು ಸಾವಿನ ಬಗ್ಗೆ ಕೆಲವು ಅರ್ಥಪೂರ್ಣ ಕಲಾಕೃತಿಗಳನ್ನು ಹೊಂದಿವೆ. ಶವಗಳನ್ನು ಸುಡಲು ಎರಡು ಕೋಣೆಗಳಿದ್ದು, ಅವುಗಳನ್ನು ಉತ್ತಮವಾಗಿ ನಿರ್ವಹಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT