ವಿಶೇಷ

ಅತಿ ಹೆಚ್ಚು ಐಕ್ಯೂ ಹೊಂದಿದ 11 ವರ್ಷದ ವಿದ್ಯಾರ್ಥಿಗೆ 9ನೇ ತರಗತಿಗೆ ಬಡ್ತಿ ನೀಡಿದ ಯುಪಿ ಮಂಡಳಿ

Lingaraj Badiger

ಲಖನೌ: ಅತಿ ಹೆಚ್ಚು ಐಕ್ಯೂ(ಬುದ್ಧಿಮತ್ತೆ) ಹೊಂದಿರುವ ಕಾನ್ಪುರದ 11 ವರ್ಷದ ಬಾಲಕ ಯಶವರ್ಧನ್ ಸಿಂಗ್‌ಗೆ ಉತ್ತರ ಪ್ರದೇಶ ಪ್ರೌಢ ಶಿಕ್ಷಣ ಮಂಡಳಿ ಶುಕ್ರವಾರ 9ನೇ ತರಗತಿ ಪ್ರವೇಶಕ್ಕೆ ವಿಶೇಷ ಅನುಮತಿ ನೀಡಿದೆ.

ಯಶವರ್ಧನ್  ಸದ್ಯ 7ನೇ ತರಗತಿ ಓದುತ್ತಿದ್ದು, ಈಗ 9ನೇ ತರಗತಿಗೆ ಬಡ್ತಿ ನೀಡಲಾಗಿದೆ.

ಯಶವರ್ಧನ್ ಅವರು ಹೆಚ್ಚಿನ ಬುದ್ಧಿಮತ್ತೆ(ಐಕ್ಯೂ) ಹೊಂದಿರುವ ಹಿನ್ನೆಲೆಯಲ್ಲಿ ಯುಪಿ ಬೋರ್ಡ್ ಯಶವರ್ಧನ್ ಅವರನ್ನು ಪ್ರಸಕ್ತ ಶೈಕ್ಷಣಿಕ ಅವಧಿಯಲ್ಲಿ 9ನೇ ತರಗತಿಗೆ ನೇರ ಪ್ರವೇಶ ನೀಡಲು ನಿರ್ಧರಿಸಿದೆ.

ಯಶವರ್ಧನ್ ಅವರ ತಂದೆ ತಮ್ಮ ಮಗನಿಗೆ 9ನೇ ತರಗತಿಗೆ ನೇರ ಪ್ರವೇಶ ಕೋರಿ ಶಿಕ್ಷಣ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಯಶವರ್ಧನ್ ಅವರ ಐಕ್ಯೂ ಅಂಕಗಳನ್ನು ನಿರ್ಣಯಿಸಲು ಮತ್ತು ಅವರ ಬೌದ್ಧಿಕ ಮಟ್ಟವನ್ನು ವಿಶ್ಲೇಷಿಸಲು ಅನೇಕ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಅವರು ಎಲ್ಲಾ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ.

ಯಶವರ್ಧನ್ ಅವರ ಐಕ್ಯೂ 129 ಎಂದು ಕಂಡುಬಂದಿದೆ.

ಯುಪಿ ಬೋರ್ಡ್ ಅವರ ಮಾನಸಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ ಮತ್ತು ಉನ್ನತ ಮಟ್ಟದ ಜ್ಞಾಪಕ ಸಾಮರ್ಥ್ಯವನ್ನು ಸಹ ಪರೀಕ್ಷಿಸಿದೆ.

SCROLL FOR NEXT