ಅಲ್ಲು ಅರ್ಜುನ್ 
ವಿಶೇಷ

ಕೇರಳ ಹುಡುಗಿಯ ಭವಿಷ್ಯದ ಕನಸನ್ನು ನನಸು ಮಾಡಿದ ಸೂಪರ್ ಸ್ಟಾರ್ ಅಲ್ಲು ಅರ್ಜುನ್!

ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣ ಪಡೆಯುವ ಕನಸು ಈ ಅಲಪ್ಪುಳದ ಹುಡುಗಿಗೆ(ಹೆಸರು ಹೇಳಲು ಇಚ್ಛಿಸದ) ದೊಡ್ಡ ಸವಾಲಾಗಿತ್ತು. 

ಆಲಪ್ಪುಳ(ಕೇರಳ): ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣ ಪಡೆಯುವ ಕನಸು ಈ ಅಲಪ್ಪುಳದ ಹುಡುಗಿಗೆ(ಹೆಸರು ಹೇಳಲು ಇಚ್ಛಿಸದ) ದೊಡ್ಡ ಸವಾಲಾಗಿತ್ತು. 

ವಿದ್ಯಾರ್ಥಿನಿ ತಂದೆ ಕಳೆದ ವರ್ಷ ಕೋವಿಡ್‌ನಿಂದ ಸಾವನ್ನಪ್ಪಿದ್ದರು. ಇನ್ನು ಬಡ ಕುಟುಂಬ ಆದರಿಂದ ವಿದ್ಯಾರ್ಥಿನಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ಆಕೆಯ ಕೆಲ ಸ್ನೇಹಿತರು ಜಿಲ್ಲಾಧಿಕಾರಿ ವಿಆರ್ ಕೃಷ್ಣತೇಜ ಅವರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಹೀಗಾಗಿ ಹುಡುಗಿ ತನ್ನ ತಾಯಿಯೊಂದಿಗೆ ವಾರದ ಹಿಂದೆ ಕಲೆಕ್ಟರ್ ಅವರನ್ನು ಭೇಟಿಯಾಗಿದ್ದಳು. ಅವರು ಎಲ್ಲಾ ಬೆಂಬಲವನ್ನು ನೀಡಿದ್ದು ಒಂದು ವರ್ಷದ ಶೈಕ್ಷಣಿಕ ವೆಚ್ಚವನ್ನು ಪ್ರಾಯೋಜಿಸುವ ಮೂಲಕ ಆಕೆಯ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುವಂತೆ ನಟ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಿದರು. 

ಹೆಚ್ಚಿನ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯ ಇಂಗಿತಕ್ಕೆ ಅಲ್ಲು ಅರ್ಜುನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಆಕೆಯ ನರ್ಸಿಂಗ್ ಕೋರ್ಸ್‌ನ ಸಂಪೂರ್ಣ ಅವಧಿಯ ವೆಚ್ಚವನ್ನು ಭರಿಸಲು ಒಪ್ಪಿಕೊಂಡರು. ನಂತರ ಕೃಷ್ಣ ತೇಜಾ ಅವರು ಕತ್ತನಂನ ಸೇಂಟ್ ಥಾಮಸ್ ನರ್ಸಿಂಗ್ ಕಾಲೇಜಿಗೆ ಸಂಪರ್ಕಿಸಿದ್ದು ಅವಳನ್ನು ಮ್ಯಾನೇಜ್‌ಮೆಂಟ್ ಕೋಟಾದಡಿ ಸೇರಿಸಿಕೊಂಡಿದರು. ಇದೀಗ ನಿನ್ನೆಯಿಂದ ಹುಡುಗಿ ತರಗತಿಗೆ ಹಾಜರಾಗುತ್ತಿದ್ದಾಳೆ.

ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯಲ್ಲಿ ಶೇ.92 ಅಂಕ ಗಳಿಸಿದ್ದಳು. ಹಲವು ನರ್ಸಿಂಗ್ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಿದ್ದರೂ ಮೆರಿಟ್ ಕೋಟಾ ಮೂಲಕ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ. ನಂತರ ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆಯಲು ಯತ್ನಿಸಿದರು. ಆದಾಗ್ಯೂ, ದೊಡ್ಡ ಶುಲ್ಕಗಳ ಪಾವತಿಸುವುದು ಕಷ್ಟವಾಯಿತು. ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ ನಂತರ, ಅವರು ತಮ್ಮ ಫೇಸ್‌ಬುಕ್ ಗ್ರೂಪ್ ನಲ್ಲಿ 'ವಿ ಫಾರ್ ಅಲೆಪ್ಪಿ' ಎಂದು ಪೋಸ್ಟ್ ಮಾಡಿ ಪ್ರಯೋಜಕರಿಗಾಗಿ ಹುಡುಕಾಟ ನಡೆಸಿದರು. ಇದೀಗ ನಟ ಅಲ್ಲು ಅರ್ಜುನ್ ನೆರವಿನ ಹಸ್ತ ಚಾಚಿಸುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದು  ಇನ್ನು ಮುಂದಿನ ದಿನಗಳಲ್ಲಿ ಫೇಸ್ ಬುಕ್ ಮೂಲಕ ಸೇವೆ ಮುಂದುವರಿಸುವುದಾಗಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

2018ರ ವಿನಾಶಕಾರಿ ಪ್ರವಾಹದ ನಂತರ ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿರುವ ಜನರಿಗೆ ಸಹಾಯ ಮಾಡಲು ಕೃಷ್ಣ ತೇಜ ಅವರು 'ಐ ಆಮ್ ಫಾರ್ ಅಲೆಪ್ಪಿ' ಪ್ರಾರಂಭಿಸಿದರು. ಜಿಲ್ಲೆಯ ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸುವ ಉಪಕ್ರಮದಡಿ ಅಲ್ಲು ಅರ್ಜುನ್ ಧನಸಹಾಯ ಮಾಡಿದ್ದು ಅದರಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ 10 ಅಂಗನವಾಡಿಗಳನ್ನು ಪುನರ್ನಿರ್ಮಿಸಲಾಗಿದೆ. ಈ ವರ್ಷ ಕಲೆಕ್ಟರ್ ಗುಂಪಿನ ಹೆಸರನ್ನು 'ವಿ ಫಾರ್ ಅಲೆಪ್ಪಿ' ಎಂದು ಬದಲಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT