ಚೋರ್ಮಾರಾ ಗ್ರಾಮದಲ್ಲಿ ಅಳವಡಿಸಲಾದ ಟಿವಿ 
ವಿಶೇಷ

ಬಿಹಾರದ ಮಾವೋವಾದಿ ಪೀಡಿತ ಬುಡಕಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಟಿವಿ ಆಗಮನ, ಗ್ರಾಮಸ್ಥರಲ್ಲಿ ಸಂಭ್ರಮ!

ಬಿಹಾರದ ಮಾವೋವಾದಿಗಳ ಪ್ರಾಬಲ್ಯವಿರುವ ಜಮುಯಿ ಜಿಲ್ಲೆಯ ಚೋರ್ಮಾರಾ ಗ್ರಾಮದ ನಿವಾಸಿಗಳ ಬಹುಕಾಲದ ಕನಸು ಈಗ ಅಕ್ಷರಶಃ ನನಸಾಗುತ್ತಿದೆ. ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಗುರುವಾರ ದೂರದರ್ಶನವನ್ನು ಅಳವಡಿಸಲಾಗಿದೆ.

ಪಾಟ್ನಾ: ಬಿಹಾರದ ಮಾವೋವಾದಿಗಳ ಪ್ರಾಬಲ್ಯವಿರುವ ಜಮುಯಿ ಜಿಲ್ಲೆಯ ಚೋರ್ಮಾರಾ ಗ್ರಾಮದ ನಿವಾಸಿಗಳ ಬಹುಕಾಲದ ಕನಸು ಈಗ ಅಕ್ಷರಶಃ ನನಸಾಗುತ್ತಿದೆ. ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಗುರುವಾರ ಟಿವಿಯನ್ನು ಅಳವಡಿಸಲಾಗಿದೆ.

43 ಇಂಚಿನ ಎಲ್‌ಇಡಿ ಟಿವಿ ಆನ್ ಮಾಡಿದಾಗ ಮಕ್ಕಳು ಸಂಭ್ರಮದಿಂದ ಕುಣಿದಾಡಿದರು ಮತ್ತು ಪುರುಷರು ಮತ್ತು ಮಹಿಳೆಯರು ಉತ್ಸಾಹದಿಂದ ಚಪ್ಪಾಳೆ ತಟ್ಟಿದರು.

'ನಾವು ಮೊದಲ ಬಾರಿಗೆ ಟಿವಿಯನ್ನು ಪಡೆದುಕೊಂಡಿದ್ದೇವೆ' ಎಂದು ಸ್ಥಳೀಯ ನಿವಾಸಿ ರಜತ್ ಕೋಡಾ ಹೇಳಿದರು. 'ಗ್ರಾಮದಲ್ಲಿ ಟೆಲಿವಿಷನ್ ಸೆಟ್ ಸ್ಥಾಪನೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ಈಗ ನಾವು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಮತ್ತೊಬ್ಬ ನಿವಾಸಿ ದಿಲೀಪ್ ಕುಮಾರ್ ಹೇಳುತ್ತಾರೆ.

ಗ್ರಾಮಸ್ಥರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲ್ಲಿಗೆ ನಿಯೋಜಿಸಲಾಗಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳಿಂದಾಗಿ ಇಲ್ಲಿಗೆ ಟಿವಿಯನ್ನು ತರಲಾಗಿದೆ. ಡಿಐಜಿ (ಮುಜಾಫರ್‌ಪುರ ಶ್ರೇಣಿ) ಸಂದೀಪ್ ಸಿಂಗ್ ಮತ್ತು ಕಮಾಂಡೆಂಟ್ ಜೋಗೇಂದ್ರ ಸಿಂಗ್ ಮೌರ್ಯ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜಮುಯಿ ಶಾಖೆಯನ್ನು ಇದಕ್ಕಾಗಿ ಸಂಪರ್ಕಿಸಿದರು ಮತ್ತು ನಂತರ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಡಿಟಿಎಚ್‌ ಸಂಪರ್ಕ ಹೊಂದಿರುವ ಟಿವಿಯನ್ನು ಗ್ರಾಮದಲ್ಲಿ ಅಳವಡಿಸಲಾಗಿದೆ.

'ಉಗ್ರವಾದದಿಂದ ಪೀಡಿತ ನಿವಾಸಿಗಳ ಜೀವನದಲ್ಲಿ ನಂಬಿಕೆ, ಅಭಿವೃದ್ಧಿ ಮತ್ತು ಭದ್ರತೆಯು ಬದಲಾವಣೆಯನ್ನು ತರಬಹುದು. ಸಿಆರ್‌ಪಿಎಫ್ ಮತ್ತು ಜಿಲ್ಲಾ ಪೊಲೀಸರ ನಡುವಿನ ಸಮನ್ವಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ' ಎಂದು ಸಿಂಗ್ ಹೇಳಿದರು.

ಮೌರ್ಯ ಮಾತನಾಡಿ, ಸರ್ಕಾರ ಗ್ರಾಮಸ್ಥರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದವರೆಲ್ಲರೂ ಮರಳಿ ಬರಬೇಕು' ಎಂದರು.

ಬ್ಯಾಂಕ್ ಸಾಲ ಪಡೆದು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶಗಳನ್ನು ಹುಡುಕಲು ಎಸ್‌ಬಿಐ ಸಹಾಯಕ ಜನರಲ್ ಮ್ಯಾನೇಜರ್ ಆಕಾಶ್ ಆನಂದ್ ಗ್ರಾಮಸ್ಥರಿಗೆ ಹೇಳಿದರು. ಮಹಿಳೆಯರು ಸಹ ಜೀವನೋಪಾಯಕ್ಕಾಗಿ ಸ್ವಸಹಾಯ ಗುಂಪುಗಳನ್ನು ಪ್ರಾರಂಭಿಸಬಹುದು ಎಂದು ಅವರು ಹೇಳಿದರು.

ಮೂರು ವರ್ಷಗಳ ಹಿಂದಿನವರೆಗೂ ರಾಜ್ಯದಲ್ಲಿ ಎಡಪಂಥೀಯ ಉಗ್ರವಾದದ ಕೇಂದ್ರಬಿಂದುವಾಗಿದ್ದ ಬರ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚೋರ್ಮಾರಾ ನೆಲೆಸಿದೆ. ಮುಖ್ಯವಾಗಿ ಆದಿವಾಸಿಗಳು ವಾಸಿಸುವ ಗ್ರಾಮವು ಕಾಡು ಮತ್ತು ಗುಡ್ಡಗಳಿಂದ ಆವೃತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT