ವಿಶೇಷ

ಬೆಂಗಳೂರು ದಂಪತಿಯ ಅರಳಿದ ಕನಸು ಈ 'ವೃಕ್ಷವನಂ'

Nagaraja AB

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ದಂಪತಿಗಳು ಪ್ರೀತಿಯಿಂದ ಪೋಷಿಸಿದ ಸಮೃದ್ಧ ಆಹಾರ ವನ, ಸುಂದರವಾದ ಚಿಂತನೆಗಳು 'ವೃಕ್ಷವನಂ' ಆಗಿ ಅರಳುತ್ತಿದೆ. 'ವೃಕ್ಷವನಂ'  ರೂಪಿಸಿದ ಪುಷ್ಪಾ ಕಲ್ಯಾಣಪುರ, ಎಲ್ಲಾ ನೈಸರ್ಗಿಕ ವಿಷಯಗಳ ಬಗ್ಗೆ ಯಾವಾಗಲೂ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.

ಪುಷ್ಪಾ ಕಲ್ಯಾಣಪುರ
<strong>ಪುಷ್ಪಾ ಕಲ್ಯಾಣಪುರ</strong>

46 ವರ್ಷ ವಯಸ್ಸಿನ ದಂತ ವೈದ್ಯೆ, ಮೇಕಪ್ ಕಲಾವಿದೆ  ಆಗಿರುವ ಪುಷ್ಪಾ ಕಲ್ಯಾಣಪುರ ಅವರು, ಕೇವಲ 12 ವರ್ಷ ವಯಸ್ಸಿನವರಾಗಿದ್ದಾಗಲೇ, ತನ್ನದೇ ಆದ ಆಹಾರವನ್ನು ಉತ್ಪಾದಿಸಿ, ಸೇವಿಸುವ ಆಲೋಚನೆ ಹೊಂದಿದ್ದರಂತೆ. 2010 ರಲ್ಲಿ ಹಸಿರಿನಿಂದ ಆವೃತವಾದ ಹಳ್ಳಿಗಾಡಿನ ಮನೆಯ ಚಿತ್ರವನ್ನು ಚಿತ್ರಿಸಿದರಂತೆ. ಇದಾದ ಒಂದು ದಶಕದ ನಂತರ, ತನ್ನ ಕನಸಿನ 'ವೃಕ್ಷವನಂ' ಪರಿಕಲ್ಪನೆಗೆ  ಪೋಟೋಗ್ರಾಪರ್ ಆಗಿರುವ ಪತಿ ಕಿಶನ್ ಕಲ್ಯಾಣಪುರ ಅವರು ನೆರವು ನೀಡಿದ್ದಾರೆ.

ವೃಕ್ಷವನಂ ನಮ್ಮ ಕನಸಾಗಿತ್ತು, ಎರಡೂವರೆ ವರ್ಷಗಳ ಹಿಂದೆ ಪ್ರಾರಂಭಿಸಿದ್ದೇವೆ. ಮರಗಳು ಮತ್ತು ಸಸ್ಯಗಳ ಪರಿಸರ ವ್ಯವಸ್ಥೆಯನ್ನು ರಚಿಸುವುದು, ನಮಗೆ ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಒದಗಿಸುವುದು, ಅಂತಿಮವಾಗಿ ಆಹಾರ ಅರಣ್ಯವಾಗಿ ರೂಪಾಂತರಗೊಳ್ಳುವುದು ಈ ಕಲ್ಪನೆಯಾಗಿದೆ ಎಂದು ಪುಷ್ಪಾ ಹೇಳುತ್ತಾರೆ. 

ಆಹಾರ ಅರಣ್ಯವು ಅರಣ್ಯ ಉದ್ಯಾನವನ್ನು ಹೋಲುತ್ತದೆ. ಈ ಸಂಪೂರ್ಣ ಕಲ್ಪನೆಯು 'ಫಾರ್ಮಾಕಲ್ಚರ್' ಪರಿಕಲ್ಪನೆಯ ಮೇಲೆ ನಿಂತಿದೆ, ಇದು ಸ್ವಾವಲಂಬಿ ಮತ್ತು ಸಮರ್ಥನೀಯ ರೀತಿಯಲ್ಲಿ ಕೃಷಿ ಪರಿಸರ ವ್ಯವಸ್ಥೆಗಳ ಬೆಳವಣಿಗೆಯನ್ನು ಸೂಚಿಸುತ್ತದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕೋಡಿಕೊಂಡದಲ್ಲಿ ಗೇಟೆಡ್ ಸಮುದಾಯದ ಕಾಲು ಎಕರೆ ಜಾಗವನ್ನು ಆಕ್ರಮಿಸಿಕೊಂಡಿರುವ 'ವೃಕ್ಷವನಂ' ಇಂದು ತರಕಾರಿ ಇಳುವರಿ ನೀಡುವ ಸಸ್ಯಗಳನ್ನು ಹೊರತುಪಡಿಸಿ ಹಣ್ಣು-ಹಂಪಲು, ಔಷಧೀಯ ಮತ್ತು ಹೂವಿನ ಮರಗಳು ಸೇರಿದಂತೆ ಕನಿಷ್ಠ 150 ಮರಗಳಿಗೆ ನೆಲೆಯಾಗಿದೆ.

ವೃಕ್ಷವನಂ

ಇದೇ ರೀತಿಯಲ್ಲಿ ತಮ್ಮ ಪರಿಕಲ್ಪನೆ ಹುಟ್ಟುಕೊಂಡ ಬಗ್ಗೆ ಹೇಳುವ ಪುಷ್ಪಾ, ಸುಮಾರು ಆರು ವರ್ಷಗಳ ಹಿಂದೆ ರಾಜಾಜಿನಗರದ ನಮ್ಮ ಮನೆಯ ತಾರಸಿಯ ಮೇಲೆ ನಮ್ಮ ಆಹಾರದ ಅಗತ್ಯವನ್ನು ಪೂರೈಸುವ ಚಿಕ್ಕ ಕಿಚನ್ ಗಾರ್ಡನ್ ಸ್ಥಾಪಿಸಿದೆವು. ನಂತರ ಇದೇ ರೀತಿಯ ವಿನ್ಯಾಸವನ್ನು ನೈಸರ್ಗಿಕ, ದೊಡ್ಡ ಪ್ರಮಾಣದಲ್ಲಿ ಪುನರಾವರ್ತಿಸಬಹುದು ಎಂದು ನಾನು ಭಾವಿಸಿ, ಸಂಶೋಧನೆ ನಡೆಸಿದ ನಂತರ ನಾನು ಹುಡುಕುತ್ತಿರುವುದು ಫಾರ್ಮಾಕಲ್ಚರ್‌ನಲ್ಲಿದೆ ಎಂದು ಕಂಡುಕೊಂಡೆ. ಭೂಮಿಯಿಂದ ಸಿಗುವ ಪೋಷಕಾಂಶಕಗಳಿಂದ ಕೀಟ ಮುಕ್ತ, ಆಹಾರ ವನ ಸೃಷ್ಟಿಸಲು ಬಯಸಿದ್ದಾಗಿ ಅವರು ತಿಳಿಸಿದರು. 

ಕಿಶನ್ ಕಲ್ಯಾಣಪುರ

ವೃಕ್ಷವನಂ ಸರಿಯಾದ ಆಹಾರ ಪದ್ಧತಿ, ಅವುಗಳ ಬಳಕೆ ಕುರಿತು ಉತ್ತೇಜಿಸುವುದರ ಜೊತೆಗೆ ಸಮಗ್ರ ಜೀವನವನ್ನು ನಡೆಸುವ ಕಡೆಗೆ ಸಂಬಂಧಿತ ಬದಲಾವಣೆಯ ಸಂಕೇತವಾಗಿದೆ. ಫಾರ್ಮಾಕಲ್ಚರ್ ಮಾರ್ಗಸೂಚಿಗಳನ್ನು ಅನುಸರಿಸಿ, ಅರಣ್ಯವು ಪ್ರಕೃತಿಯೊಂದಿಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತದೆ, ಕೀಟನಾಶಕ-ಮುಕ್ತ, ಸಾವಯವ ಮತ್ತು ಪೋಷಕಾಂಶ-ದಟ್ಟವಾದ ಆಹಾರವನ್ನು ಉತ್ಪಾದಿಸುತ್ತದೆ. ಆಹಾರ ಅರಣ್ಯ ಕೇವಲ ಒಂದು ಸಣ್ಣ ಪ್ರದೇಶದಲ್ಲಿ ಆಹಾರ ಬೆಳೆ ಬೆಳೆಯಲಾಗುತ್ತದೆ. ಆದರೆ, ಅದಲ್ಲದೇ, ನೀರು, ಆಶ್ರಯ, ಸರಿಯಾದ ಅಡುಗೆ ವಿಧಾನಗಳು, ಶಕ್ತಿ ಮತ್ತು ಪೋಷಣೆಯಂತಹ ಮೂಲಭೂತ ಅಗತ್ಯಗಳನ್ನು ಪರಿಹರಿಸುವ ಮೂಲಕ ಪ್ರಕೃತಿಯೊಂದಿಗೆ ಚೆನ್ನಾಗಿ ಸಂಬಂಧ ಉಂಟುಮಾಡಿವುದು ವೃಕ್ಷವನಂ ಪ್ರಾಜೆಕ್ಟ್ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಈ ವಿಷಯಗಳಿಗೆ ಸಂಬಂಧಿಸಿದ ಕಾರ್ಯಾಗಾರಗಳ ಮೂಲಕ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಮುಂದಿನ ದಿನಗಳಲ್ಲಿ ವೃಕ್ಷವನಂಗೆ ಜನರ ಭೇಟಿ ಮತ್ತು ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು 47 ವರ್ಷದ ಕಿಶನ್ ಹೇಳುತ್ತಾರೆ. ವೃಕ್ಷವನಂ ನೊಳಗೆ ದಂಪತಿಗಳು ತಮ್ಮಗಾಗಿ ಆಕರ್ಷಣೀಯವಾದ ಶಾಂಬಲ ಮನೆ ನಿರ್ಮಿಸಿದ್ದಾರೆ. ಸಾಕಷ್ಟು ಸೂರ್ಯನ ಬೆಳಕು ಮತ್ತು ತಾಜಾ ಗಾಳಿ ಬರುವಂತೆ ಮಣ್ಣಿನ ಗೋಡೆಯಿಂದ ಈ ಮನೆಯನ್ನು ನಿರ್ಮಿಸಲಾಗಿದೆ ಎಂದು ಕಿಶನ್  ತಿಳಿಸಿದರು.

ತರಕಾರಿಗಳು, ಹೂವು ಮತ್ತು ಹಣ್ಣು,  ಮರಗಳು ಮತ್ತು ಸಸ್ಯಗಳು ಒಂದೇ ಕಡೆ ಇರುವುದಕ್ಕೆ ವೃಕ್ಷವನಂ ಎನ್ನಲಾಗುತ್ತದೆ. ಸೀತಾಫಲ, ಪೇರಲ, ಸ್ಟಾರ್‌ಫ್ರೂಟ್, ಪಪ್ಪಾಯಿ, ಬಾಳೆಹಣ್ಣು, ಕಿತ್ತಳೆ, ಮಾವು, ಸೇಬು, ತೆಂಗಿನಕಾಯಿ, ನೆಲ್ಲಿಕಾಯಿ, ಕ್ಯಾರೆಟ್, ಎಲೆಕೋಸು, ದಾಸವಾಳ, ಚಂಪಾ, ನಾಗಚಂಪಾ, ಮಲ್ಲಿಗೆ ಮತ್ತು ಬಹಳಷ್ಟು ಸೊಪ್ಪುಗಳು ಸೇರಿವೆ. ಕೆಲವು ಔಷಧೀಯ ಸಸ್ಯಗಳಲ್ಲಿ ಅಮರಂಥ್, ಸಿಮರೂಬಾ, ಸೋರ್ಸಾಪ್ ಮತ್ತು ಸೋಪ್ನಟ್ ಸೇರಿವೆ. ಇಲ್ಲಿನ ಹೆಚ್ಚಿನ ಸಸ್ಯವರ್ಗವು ಬದಲಾಗುತ್ತಿರುವ ಋತುಮಾನಗಳಿಗೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ.
 

SCROLL FOR NEXT