ವಿಶೇಷ

ದೃಷ್ಟಿ ದೋಷ ಹೊಂದಿದವರಿಗೆ ಸ್ವಯಂಚಾಲಿತ ವಾಕಿಂಗ್ ಸ್ಟಿಕ್ ರೂಪಿಸಿದ ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

Srinivas Rao BV

ಮೈಸೂರು: ದೃಷ್ಟಿ ದೋಷ ಹೊಂದಿರುವವರಿಗೆ ಉಪಕಾರವಾಗುವ ನಿಟ್ಟಿನಲ್ಲಿ ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ವತಂ ಚಾಲಿತ ವಾಕಿಂಗ್ ಸ್ಟಿಕ್ ನ್ನು ರೂಪಿಸಿದ್ದಾರೆ. 

ರಸ್ತೆಯಲ್ಲಿ ಗುಂಡಿ, ಅಡಚಣೆಗಳು, ಜನದಟ್ಟಣೆ ಇರುವ ಪ್ರದೇಶಗಳಲ್ಲಿನ ಅಡಚಣೆಗಳನ್ನು ಸುಲಭವಾಗಿ ಹಾಗೂ ತ್ವರಿತವಾಗಿ ಗುರುತಿಸುವ ಸಾಮರ್ಥ್ಯವನ್ನು ಈ ವಾಕಿಂಗ್ ಸ್ಟಿಂಗ್ ಹೊಂದಿದೆ. 

ಕೈಗೆಟುಕುವ ದರದಲ್ಲಿ ಲಭ್ಯವಾಗುವ ಈ ವಾಕಿಂಗ್ ಸ್ಟಿಕ್ ಗಳು ವಿಶ್ವಾಸಾರ್ಹ, ಪೋರ್ಟಬಲ್, ವಿದ್ಯುತ್ ಅಥವಾ ಇನ್ನಿತರ ಶಕ್ತಿಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. 

ಈಗಾಗಲೇ ಇರುವ ಸ್ಮಾರ್ಟ್ ಸ್ಟಿಕ್ ಗಳಿಗೂ ಇದಕ್ಕೂ ಇರುವ ವ್ಯತ್ಯಾಸವೇನು?

ಈಗಾಗಲೇ ಕೆಲವು ಸ್ಮಾರ್ಟ್ ಸ್ಟಿಕ್ ಗಳು ಲಭ್ಯವಿದ್ದು ಅವು ಅಡಚಣೆಗಳು ಹಾಗೂ ಗುಂಡಿಗಳಿರುವುದನ್ನು ತಿಳಿಸುವುದಕ್ಕೆ ಅನುಕ್ರಮವಾಗಿ ಅಲ್ಟ್ರಾಸೋನಿಕ್ ಸೆನ್ಸರ್ ಹಾಗೂ ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ನ್ನು ಬಳಕೆ ಮಾಡಿಕೊಳ್ಳುತ್ತವೆ, ಇದರಿಂದ ಎಚ್ಚರಿಕೆಗಳನ್ನು ತಕ್ಷಣಕ್ಕೆ ನೀಡಲು ಸಾಧ್ಯವಾಗದೇ ವಿಳಂಬದ ಸಮಸ್ಯೆಗಳನ್ನು ಹೊಂದಿದೆ. ಆದರೆ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜ್ (ವಿವಿಸಿಇ) ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಸ್ಟಿಕ್ ಗಳು ರಸ್ತೆಯಲ್ಲಿರುವ ಅಡಚಣೆ ಹಾಗೂ ರಸ್ತೆ ಗುಂಡಿಯನ್ನು ಪತ್ತೆ ಮಾಡುವುದಕ್ಕೆ ಎರಡಕ್ಕೂ ಅಲ್ಟ್ರಾಸೋನಿಕ್ ಸೆನ್ಸಾರ್ ಗಳನ್ನೇ ಬಳಕೆ ಮಾಡಿಕೊಳ್ಳಲಿದ್ದು, ಸೂಕ್ತ ಸಮಯದಲ್ಲಿ ಅಲರ್ಟ್ ಸಿಗುವಂತೆ ಮಾಡುತ್ತದೆ.
 
ಇದನ್ನೂ ಓದಿ: ಕೇರಳ: ಪಟ್ಟು ಬಿಡದ ಸಾಹಸಿ; ರೀಫಿಲ್, ಸಿಡಿ, ಕ್ಯಾಮೆರಾ ಬಳಸಿ ಡ್ರೋನ್ ತಯಾರಿದ ಬಾಲಕ!

ಸ್ಮೃತಿ ಬಾಳಿಗ ಹಾಗೂ ಸಹಪಾಠಿಗಳಾದ ಸಪ್ನಾ ಹೆಚ್ಎಂ, ಶ್ರೇಯಸ್ ಎನ್, ಯೋಗೇಶ್ ಗೌಡ ಈ ಸ್ವಯಂ ಚಾಲಿತ ಸ್ಟಿಕ್ ಗಳನ್ನು ಅಭಿವೃಧ್ದಿಪಡಿಸಿರುವ ವಿದ್ಯಾರ್ಥಿಗಳಾಗಿದ್ದು, ದೃಷ್ಟಿ ದೋಷ ಹೊಂದಿದ್ದ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷೆ ಬರೆಯಲು 3 ನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಸ್ಮೃತಿ ಬಾಳಿಗ ಸಹಾಯ ಮಾಡಿದ್ದರು. ಈ ವೇಳೆ ಅವರ ಸಮಸ್ಯೆಗಳನ್ನು, ಪ್ರಮುಖವಾಗಿ ರಸ್ತೆ ದಾಟುವಾಗ ಅವರ ಪರಿಸ್ಥಿತಿಯನ್ನು ಕಂಡು ಹೊಸ ಮಾದರಿಯ ಸ್ವಯಂಚಾಲಿತ ಸ್ಟಿಕ್ ಗಳನ್ನು ರೂಪಿಸಲು ಚಿಂತನೆ ನಡೆಸಿದ್ದರು.

ಎಲೆಕ್ಟ್ರಾನಿಕ್ಸ್& ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ, ಪ್ರೊಫೆಸರ್ ಡಾ. ಚಂದ್ರಶೇಖರ್ ಎಂ ಪಾಟೀಲ್, ಹಾಗೂ ಗಿರಿಜಾಂಬ ಡಿಎಲ್, ಸಹಾಯಕ ಪ್ರಾಧ್ಯಾಕಪರು, ಇ&ಸಿ ಅವರ ಮಾರ್ಗದರ್ಶನದಲ್ಲಿ ಈ ಅತ್ಯಾಧುನಿಕ ಸ್ಟಿಕ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. 

"ದೃಷ್ಟಿದೋಷ ಹೊಂದಿರುವವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಯೋಜನೆಯೊಂದರ ಬಗ್ಗೆ ನಾವು 2 ವರ್ಷಗಳ ಹಿಂದೆ ಶಾಲಾ ಶಿಕ್ಷಕಿಯೊಂದಿಗೆ ಚರ್ಚಿಸಿದ್ದೆವು. ಆಗ ಸ್ಮೃತಿ ದೃಷ್ಟಿ ದೋಷ ಹೊಂದಿರುವವರ ಸುರಕ್ಷತೆ ಬಗ್ಗೆ ಮಾತನಾಡಿದ್ದರು, ಈ ಸಂದರ್ಭದಲ್ಲೇ ಅವರಿಗಾಗಿ ಸ್ವಯಂಚಾಲಿತ ಸ್ಟಿಕ್ ನ್ನು ಅಭಿವೃದ್ಧಿಪಡಿಸುವ ಯೋಜನೆ ಮೂಡಿತು. ಇನ್ನಿಬ್ಬರು ಸಹಪಾಠಿಗಳು ಸಹಕರಿಸಿದ್ದರಿಂದ ನಾವು ಸಂಶೋಧನೆಯನ್ನು ಆರಂಭಿಸಿದೆವು" ಎನ್ನುತ್ತಾರೆ ತಂಡದ ಸದಸ್ಯೆ ಸಪ್ನ.

"ಈ ಸ್ವಯಂಚಾಲಿತ ಸ್ಟಿಕ್ ನಲ್ಲಿ ಇಮೇಜ್ ಪ್ರೊಸೆಸಿಂಗ್ ಆಯ್ಕೆಯನ್ನು ಬಳಸಬಹುದಾಗಿತ್ತಾದರೂ, ವೆಚ್ಚದ ನಿರ್ಬಂಧಗಳು ಹಾಗೂ ವಿಳಂಬವನ್ನು ಮನಗಂಡು, ಅಲ್ಟ್ರಾಸೋನಿಕ್ ಸೆನ್ಸರ್ ಗಳನ್ನು ಬಳಕೆ ಮಾಡಿದೆವು. ಈ ರೀತಿಯಾಗಿ ಅಭಿವೃದ್ಧಿಪಡಿಸಲಾದ ಸ್ಟಿಕ್ ಗಳಿಗೆ ನಮ್ಮ  ಮಾರ್ಗದರ್ಶಕರು ಅನುಮೋದನೆ ನೀಡಿದರು" ಎಂದು ವಿವರಿಸಿದ್ದಾರೆ ಸಪ್ನ.

ವಿವಿಸಿಇ ಪ್ರಾಂಶುಪಾಲ ಸದಾಶಿವೇಗೌಡ ಈ ಬಗ್ಗೆ ಮಾತನಾಡಿ, "ಇತ್ತೀಚಿನ ತಂತ್ರಜ್ಞಾನ, ಜಗತ್ತಿನಾದ್ಯಂತ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ. ಈ ಯೋಜನೆಯ ಮೂಲಕ ನಮ್ಮ ವಿದ್ಯಾರ್ಥಿಗಳು ದೃಷ್ಟಿ ದೋಷ ಹೊಂದಿರುವವರಿಗೆ ಇನ್ನಷ್ಟು ಆತ್ಮವಿಶ್ವಾಸದಿಂದ ಅಡ್ಡಾಡುವಂತೆ ಸಹಕರಿಸಿದ್ದಾರೆ" ಎಂದು ಹೇಳಿದ್ದಾರೆ. 

SCROLL FOR NEXT