ಗದಗದಲ್ಲಿ ಪತ್ತೆಯಾಗಿರುವ ಎರಡು ಹೊಸ ಕೀಟಗಳು. 
ವಿಶೇಷ

ಅಪರೂಪದ ಕೀಟಕ್ಕೆ 'ಮೊಗ್ಯಾಂಬೋ' ಎಂದು ಹೆಸರಿಟ್ಟ ಗದಗದ ಸಂಶೋಧಕರು!

ಮೊಗ್ಯಾಂಬೋ, ರಾಮು ಕಾಕಾ ಎಂದ ತಕ್ಷಣ ನಮಗೆ ನೆನಪಾಗುವುದು ಅಮರೇಶ್ ಪುರಿ ಮತ್ತು ಎ.ಕೆ. ಹಂಗಲ್. ಈ ಇಬ್ಬರು ಖ್ಯಾತ ಕಲಾವಿದರು ತೆರೆಮೇಲೆ ಕಾಣಿಸಿಕೊಂಡ ಈ ಪಾತ್ರಗಳು ಇಂದಿಗೂ ಸಿನಿ ರಸಿಕರ ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಆದರೆ, ಇದೀಗ ಈ ಹೆಸರುಗಳು ಅಪರೂಪದ ಕೀಟಗಳಿಗೆ ಇಡಲಾಗುತ್ತಿದೆ.

ಗದಗ: ಮೊಗ್ಯಾಂಬೋ, ರಾಮು ಕಾಕಾ ಎಂದ ತಕ್ಷಣ ನಮಗೆ ನೆನಪಾಗುವುದು ಅಮರೇಶ್ ಪುರಿ ಮತ್ತು ಎ.ಕೆ. ಹಂಗಲ್. ಈ ಇಬ್ಬರು ಖ್ಯಾತ ಕಲಾವಿದರು ತೆರೆಮೇಲೆ ಕಾಣಿಸಿಕೊಂಡ ಈ ಪಾತ್ರಗಳು ಇಂದಿಗೂ ಸಿನಿ ರಸಿಕರ ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಆದರೆ, ಇದೀಗ ಈ ಹೆಸರುಗಳು ಅಪರೂಪದ ಕೀಟಗಳಿಗೆ ಇಡಲಾಗುತ್ತಿದೆ.

ಗದಗದಲ್ಲಿ ಇಂತಹ ಹೊಸ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಹೊಸದಾಗಿ ಕಂಡುಹಿಡಿದ ಕೀಟಗಳಿಗೆ ಭಾರತದ ಪ್ರಸಿದ್ಧ ಸಿನಿಮಾಗಳ ಪಾತ್ರ, ಸಾಧಕರ ಮತ್ತು ರಾಜಕಾರಣಿಗಳ ಹೆಸರನ್ನು ಇಡಲಾಗುತ್ತಿದೆ.

ಯಾವುದೇ ಹೊಸ ಜೀವಿ ಪತ್ತೆಯಾದಾಗ ಲ್ಯಾಟಿನ್ ಅಥವಾ ಗ್ರೀಕ್ ಪದಗಳನ್ನು ಬಳಸಿ ವೈಜ್ಞಾನಿಕವಾಗಿ ಹೆಸರು ನೀಡುವುದು ಪದ್ಧತಿಯಾಗಿದೆ. ಆದರೆ, ಬಹುತೇಕ ಕೀಟಗಳಿಗೆ ಕನ್ನಡದ ಹೆಸರುಗಳಿಲ್ಲ. ಭಾರತೀಯ ಹೆಸರುಗಳನ್ನು ನೀಡುವುದು ಕಷ್ಟಕರವಾಗಿದೆ.

ಈ ಕಾರಣದಿಂದ ಭಾರತೀಯರಿಗೆ ಹಲವು ಜೀವಿಗಳ, ಸಸ್ಯಗಳ ವೈಜ್ಞಾನಿಕ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ಕೂಡ ಕಷ್ಟಕರವಾಗಿದೆ. ಹೀಗಾಗಿ ಈ ಸಮಸ್ಯೆಗೆ ಮುಕ್ತಿ ಹಾಡಲು ಗದಗ ಜಿಲ್ಲೆಯ ಸಂಶೋಧಕರು ಹೊಸ ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಇದರಂತೆ ಕೆಲ ದಿನಗಳ ಹಿಂದೆ ಪತ್ತೆಯಾದ ಅಪೆಫ್ಲೈಪುಪಾ2 ಎಂಬ ಕೀಟಕ್ಕೆ ಮೊಗ್ಯಾಂಬೋ, ಹ್ಯಾಲಿಮೊರ್ಫಾ ಹ್ಯಾಲಿಸ್‌ಗೆ ರಾಮು ಕಾಕಾ ಎಂಬ ಹೆಸರನ್ನು ನೀಡಿದ್ದಾರೆ.

ಕೀಟಗಳಿಗೆ ನಟರ ಪಾತ್ರಗಳ ಹೆಸರಿಡಲು ಎರಡು ಉದ್ದೇಶಗಳಿವೆ. ಒಂದು ಆ ನಟರಿಗೆ ಗೌರವ ಸಲ್ಲಿಸಲು, ಮತ್ತೊಂದು ವಿದ್ಯಾರ್ಥಿಗಳಲ್ಲಿ ಸಂಶೋಧನೆ ಕುರಿತು ಆಸಕ್ತಿ ಹುಟ್ಟಿಸಲು ಹಾಗೂ ಸುಲಭವಾಗಿ ಪತ್ತೆ ಮಾಡುವ ಸಲುವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸಂಶೋಧಕರಾದ ಸಂಗಮೇಶ ಕಡಗದ್ ಮತ್ತು ಮಂಜುನಾಥ ನಾಯಕ್ ಮಾತನಾಡಿ, ಕಿರಿಯ ಸಂಶೋಧಕರು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಇಂತಹ ಹೆಸರುಗಳನ್ನು ಇಡುತ್ತಿದ್ದೇವೆ. ಮೊದಲು ವೈಜ್ಞಾನಿಕ ಹೆಸರುಗಳನ್ನು ಇಡುತ್ತಿದ್ದೆವು. ನಂತರ ದಂತಕಥೆಯುಳ್ಳ ನಾಯಕರ ಹೆಸರನ್ನು ಇಡಲು ಆರಂಭಿಸಿದ್ದೆವು. ಇದೀಗ ವಿದ್ಯಾರ್ಥಿಗಳಿಗೆ ಸುಲಭವಾಗಲು ರಾಜಕೀಯ ನಾಯಕರು, ಕ್ರಿಕೆಟರ್ ಗಳು, ಸಿನಿಮಾಗಳ ಪಾತ್ರಗಳ ಹೆಸರನ್ನು ನೀಡುತ್ತಿದ್ದೇವೆ. ಈ ಹೆಸರುಗಳು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಗದಗ ಜಿಲ್ಲೆಯ ಗಜೇಂದ್ರಗಡ ಬಳಿಯ ಭೈರಾಪುರ ಗುಡ್ಡದ ಮೇಲೆ ‘ಹಿಟ್ಲರ್ ಮುಖ’ ಹೋಲುವ ಅಪರೂಪದ ಕೀಟಗಳು ಪತ್ತೆಯಾಗಿತ್ತು. ಕೀಟವು ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮುಖವನ್ನೇ ಹೋಲುವಂತಿತ್ತು. ಹೀಗಾಗಿ ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಈ ಅಪರೂಪದ ಕೀಟಕ್ಕೆ ಹಿಟ್ಲರ್ ಎಂದೇ ಹೆಸರಿಡಲಾಗಿತ್ತು. ಇದಾದ ಬಳಿಕ ಹೊಸದಾಗಿ ಪತ್ತೆ ಮಾಡಿದ ಕೀಟಕ್ಕೆ ರಾಜಕೀಯ ನಾಯಕರು, ಪ್ರಮುಖರ ಹೆಸರುಗಳನ್ನಿಡುವ ಪ್ರವೃತ್ತಿ ಮುಂದುವರೆದಿತ್ತು.

ಕಳೆದ ವಾರ ಕೂಡ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಕಣಜಕ್ಕೆ ಸೋಲಿಗ ಎಂಬ ಹೆಸರಿಡಲಾಗಿತ್ತು. ಅರಣ್ಯ ಮತ್ತು ಜೀವವೈವಿಧ್ಯದ ಸಂರಕ್ಷಣೆಗೆ ಅವರ ಕೊಡುಗೆಯನ್ನು ಗುರ್ತಿಸಿ ಈ ಹೆಸರನ್ನು ಕಣಜಕ್ಕೆ ನೀಡಲಾಗಿತ್ತು.

ಸೋಮವಾರ ಕೂಡ ಗದಗದಲ್ಲಿ ಬಹಳ ದಿನಗಳ ನಂತರ ಹೊಸ ಜೇಡವೊಂದು ಕಾಣಿಸಿಕೊಂಡಿತ್ತು. ಇದಕ್ಕೆ ಬಾಹುಬಲಿ ಖ್ಯಾತಿಯ ಭಲ್ಲಾಳ ಎಂದು ಹೆಸರಿಡಲಾಗಿತ್ತು. ಜೇಡದ ದೇಹವು ಚಿತ್ರದಲ್ಲಿ ಭಲ್ಲಾಳ ಬಳಸಿದ್ದ ರಥದಂತೆ ಹೋಲುತ್ತಿತ್ತು. ಹೀಗಾಗಿಯೇ ಇದಕ್ಕೆ ಭಲ್ಲಾಳ ಎಂದು ಹೆಸರಿಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT