ಕಲ್ಪರಸ ಸಂಗ್ರಹಣೆ ಪ್ರಕ್ರಿಯೆ 
ವಿಶೇಷ

ತೆಂಗು ಬೆಳೆಗಾರರಿಗೆ ವರದಾನ 'ಕಲ್ಪರಸ': ಮಾರುಕಟ್ಟೆಯಲ್ಲಿ ರಸಕ್ಕೆ ಭರ್ಜರಿ ಬೇಡಿಕೆ; ಕಲಿಯುಗದ 'ಅಮೃತ'ದ ಯಶೋಗಾಥೆ!

ಕೋವಿಡ್‌ನ  ಸಾಂಕ್ರಾಮಿಕದ ಕ್ರೂರ ಹಿಡಿತದಿಂದ ಹೊರಬರುತ್ತಿರುವ ಜಗತ್ತು  ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುತ್ತಿದೆ. ಉತ್ತಮ ಆರೋಗ್ಯ ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ. ಹೀಗಾಗಿ 'ಸಾವಯವ' ಲೇಬಲ್ ಹೊಂದಿರುವ ಸೂಪರ್ ಫುಡ್‌ಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.

ಉಡುಪಿ: ಕೋವಿಡ್‌ನ  ಸಾಂಕ್ರಾಮಿಕದ ಕ್ರೂರ ಹಿಡಿತದಿಂದ ಹೊರಬರುತ್ತಿರುವ ಜಗತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುತ್ತಿದೆ. ಉತ್ತಮ ಆರೋಗ್ಯ ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ. ಹೀಗಾಗಿ 'ಸಾವಯವ' ಲೇಬಲ್ ಹೊಂದಿರುವ ಸೂಪರ್ ಫುಡ್‌ಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕಲ್ಪರಸ ಒಂದು ಆರೋಗ್ಯಕರ ಪೇಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ತೆಂಗಿನ ಮರದ ಕಲ್ಪರಸಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದನ್ನು ಪೂರೈಸಲು ಮತ್ತು ತೆಂಗು ಬೆಳೆಗಾರರ ​​ಆದಾಯವನ್ನು ಹೆಚ್ಚಿಸಲು, ಉಡುಪಿ ಕಲ್ಪರಸ ತೆಂಗಿನಕಾಯಿ ಮತ್ತು ಎಲ್ಲಾ ಮಸಾಲೆ ಉತ್ಪಾದಕರ ಕಂಪನಿ ಲಿಮಿಟೆಡ್ ನೀರಾವನ್ನು ‘ಕಲ್ಪರಸ’ ಎಂಬ ಬ್ರಾಂಡ್‌ನಲ್ಲಿ ಮಾರಾಟ ಮಾಡುತ್ತಿದೆ.

ತೆಂಗಿನ ಮರದ ಇನ್ನೂ ಅರಳದ ಹೊಂಬಾಳೆಯಿಂದ ಇಳಿಸಲಾಗುವ ಸಿಹಿಯಾದ ಸಸ್ಯ ರಸವೇ ಕಲ್ಪರಸ. ಇದನ್ನು ಸ್ಥಳೀಯ ಭಾಷೆಯಲ್ಲಿ ನೀರಾ ಎಂದು ಕರೆಯಲಾಗುತ್ತದೆ. ಆದರೆ ಇದು ಶೇಂದಿ ಅಲ್ಲ. ಕಲ್ಪರಸ ಅಮಲು ರಹಿತವಾಗಿದ್ದು, ಅತ್ಯಂತ ಪೌಷ್ಠಿಕಾಂಶ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಒಂದು ನೈಸರ್ಗಿಕ ಆರೋಗ್ಯದಾಯಕ ಪಾನೀಯವಾಗಿದೆ.

ಕಲ್ಪರಸ ಬಾಟಲ್

ತೆಂಗಿನ ಮರದ ಹೊಂಬಾಳೆಯ ತುದಿ ಕತ್ತರಿಸಿ ಐಸ್‌ಕ್ಯೂಬ್‌ ಇರುವ ಇನ್‌ಸುಲೇಟೆಡ್‌ ಕ್ಯಾನ್‌ ಕಟ್ಟಲಾಗುತ್ತದೆ. ಅಲ್ಲಿ ಸಂಗ್ರಹವಾಗುವ ರಸವನ್ನು ಪ್ರತಿದಿನ 2 ರಿಂದ 3 ಬಾರಿ ತೆಗೆಯಲಾಗುವುದು. ಪ್ರತಿ ಗ್ರಾಮಗಳಲ್ಲಿ ಕನಿಷ್ಠ 20 ರಿಂದ 30 ರೈತರನ್ನು ಹೊಂದಿರುವ ಸೊಸೈಟಿ ರಚಿಸಿ ಅಲ್ಲಿ ಶೀಥಲೀಕರಣ ಘಟಕದ ವ್ಯವಸ್ಥೆ ಮಾಡಿ, ಕಲ್ಪರಸ ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಕೋಲ್ಡ್‌ ಸ್ಟೋರೇಜ್‌ ಬಾಕ್ಸ್‌ಗಳಲ್ಲಿ ಕಲ್ಪರಸವನ್ನಿಟ್ಟು ಮಾರಾಟ ಮಾಡಲಾಗುವುದು.

2021 ರಲ್ಲಿ ಉಡುಪಿಯ ರೈತ ಮುಖಂಡ ಸತ್ಯನಾರಾಯಣ ಉಡುಪ ಜಪ್ತಿ ಅವರು ಇತರ ಒಂಬತ್ತು ನಿರ್ದೇಶಕರು ಮತ್ತು 1,028 ಷೇರುದಾರರೊಂದಿಗೆ ಕಂಪನಿಯನ್ನು ಸ್ಥಾಪಿಸಿದರು. ಕಂಪನಿಯು ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಿದೆ.  'ಕಲ್ಪರಸ' ಮಾರುಕಟ್ಟೆಯಲ್ಲಿ ಹಿಟ್ ಆಗಿದೆ. ಈ ಟೇಸ್ಟಿ, ಪೌಷ್ಟಿಕ ಮತ್ತು ಆರೋಗ್ಯ ಪಾನೀಯವು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಏಳು ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ (ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ, ಹೆಬ್ರಿ, ಕಾರ್ಕಳ, ಮೂಡುಬಿದಿರೆ, ಬಿ.ಸಿ. ರೋಡ್ ಮತ್ತು ಮಂಗಳೂರು).

ಕಾಸರಗೋಡಿನ ಕೇಂದ್ರೀಯ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಕಂಪನಿಯು 'ಕಲ್ಪರಸ' ಉತ್ಪಾದಿಸಲು ಖರೀದಿಸಿದೆ ಎಂದು ಕಂಪನಿಯ ಅಧ್ಯಕ್ಷರಾದ ಉಡುಪ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. 21 ಕಲ್ಪರಸ ತಂತ್ರಜ್ಞ (ಕಲ್ಪರಸ ಇಳಿಸುವವರು) ರಿಗೆ 45 ದಿನಗಳ ತರಬೇತಿ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ಮಲ್ನಾಡ್ ನಟ್ಸ್ ಅಂಡ್ ಸ್ಪೈಸ್ ಪ್ರೊಡ್ಯೂಸರ್ಸ್ ಕಂಪನಿಯೇ ಮೂರು ವರ್ಷಗಳ ಹಿಂದೆ ‘ಕಲ್ಪರಸ’ ತಯಾರಿಕೆಗೆ ಮುಂದಾಗಿತ್ತು. ನೀರಾ ಕ್ಯಾನ್ಸರ್‌ನಿಂದ ಜನರನ್ನು ರಕ್ಷಿಸುತ್ತದೆ. ಆದರೆ, ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಕಲ್ಪರಸ ಪಾನೀಯ ತಮ್ಮ ರಕ್ತದೊತ್ತಡವನ್ನು ಉತ್ತಮ ಮಟ್ಟದಲ್ಲಿ ಇರಿಸಿದೆ ಎಂದು ಗ್ರಾಹಕರು ನನ್ನ ಗಮನಕ್ಕೆ ತಂದಿದ್ದಾರೆ ಎಂಬುದಾಗಿ ಸತ್ಯನಾರಾಯಣ ಉಡುಪ ಹೇಳಿದ್ದಾರೆ.

ಜಿಲ್ಲೆಯಲ್ಲಿ 1028 ರೈತರು ಸಂಸ್ಥೆಗೆ ಷೇರುದಾರರಾಗಿದ್ದು ಐದು ವರ್ಷಗಳಲ್ಲಿ 5,000 ಕುಟುಂಬ ತಲುಪುವ ಗುರಿ ಇದೆ. ಪ್ರತಿ ಷೇರುದಾರರಿಂದ 8 ತೆಂಗಿನ ಮರಗಳಿಂದ ಮಾತ್ರ ಕಲ್ಪರಸ ಖರೀದಿಸಲು ಸಂಸ್ಥೆ ತೀರ್ಮಾನಿಸಿದ್ದು, ಕಲ್ಪರಸ ತೆಗೆಯಲು ಈಗಾಗಲೇ 14 ತಂತ್ರಜ್ಞರಿಗೆ 45 ದಿನಗಳ ತರಬೇತಿ ನೀಡಲಾಗಿದೆ ಎಂದು ಸತ್ಯನಾರಾಯಣ ಉಡುಪ ತಿಳಿಸಿದರು.

ಒಂದು ತೆಂಗಿನ ಮರದಿಂದ ಪ್ರತಿದಿನ 2 ಲೀಟರ್‌ನಷ್ಟು ಕಲ್ಪರಸ ಸಿಗಲಿದೆ. ವರ್ಷಕ್ಕೆ ಒಂದು ಮರದಿಂದ ಕನಿಷ್ಠ 600 ಲೀಟರ್‌ನಂತೆ 8 ಮರಗಳಿಂದ 5,000 ಲೀಟರ್‌ನಷ್ಟು ಉತ್ಪಾದಿಸಬಹುದು. ಲೀಟರ್‌ಗೆ ರೈತರಿಗೆ  20 ರು. ದರದಂತೆ ವರ್ಷಕ್ಕೆ 1 ಲಕ್ಷದಷ್ಟು ಆದಾಯಗಳಿಸಬಹುದು. ಸ್ವತಃ ರೈತರೇ ಕಲ್ಪರಸ ಇಳಿಸಿದರೆ ವರ್ಷಕ್ಕೆ 2.5 ಲಕ್ಷ ರು ಸಂಪಾದಿಸಬಹುದು. ಕಲ್ಪರಸ'ವನ್ನು ವಿವಿಧ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ. 200 ಎಂಎಲ್‌ಗೆ 40, 500 ಎಂಎಲ್‌ಗೆ 100 ಮತ್ತು ಒಂದು ಲೀಟರ್‌ಗೆ 200 ರೂ. ದರ ನಿಗದಿ ಮಾಡಲಾಗಿದೆ.

UKCAAS ಕಲ್ಪರಸ ಮಳಿಗೆ

ಕಂಪನಿಯು ಈಗಾಗಲೇ ಪ್ರತಿದಿನ 100 ಲೀಟರ್‌ಗಳಷ್ಟು 'ಕಲ್ಪರಸ'ವನ್ನು ಮಾರಾಟ ಮಾಡುತ್ತಿದೆ ಮತ್ತು ಮುಂದಿನ ಋತುವಿನಲ್ಲಿ ಸೆಪ್ಟೆಂಬರ್‌ನಿಂದ ಮೇ ತಿಂಗಳವರೆಗೆ ಅದನ್ನು ದಿನಕ್ಕೆ 600 ಲೀಟರ್‌ಗೆ ಹೆಚ್ಚಿಸಲು ಬಯಸಿದೆ. ಈ ಬೇಸಿಗೆಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಕಲ್ಪರಸ’ ಮಾರಾಟ ಆಕರ್ಷಕವಾಗಿತ್ತು ಎಂದು ಉಡುಪ ತಿಳಿಸಿದರು.

ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಜನರು ಆರೋಗ್ಯಕರ ಪಾನೀಯವನ್ನು ಸೇವಿಸುವಂತೆ ಮಾಡುವ ಅವಳಿ ಉದ್ದೇಶಗಳನ್ನು ನಾವು ಹೊಂದಿರುವುದರಿಂದ ಜನರು ನಮ್ಮ ಉದ್ಯಮವನ್ನು ಬೆಂಬಲಿಸಬೇಕು" ಎಂದು ಹೇಳಿದ್ದಾರೆ.

ಅಮಲುಮುಕ್ತ, ರಾಸಾಯನಿಕ ಮುಕ್ತ ನೈಸರ್ಗಿಕ ಪಾನೀಯ ಕಲ್ಪರಸದಲ್ಲಿ ಪೋಷಕಾಂಶದ ಕಣಜವೇ ಇದೆ ಎಂಬುದನ್ನು ಕಾಸರಗೋಡು ಸಿಪಿಸಿಆರ್‌ಐ ವೈಜ್ಞಾನಿಕ ಸಂಶೋಧನೆಯಲ್ಲಿ ಕಂಡುಕೊಂಡಿದೆ. ಇದು ದೈಹಿಕ ಶಕ್ತಿ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ರಕ್ತದೊತ್ತಡ ನಿಯಂತ್ರಿಸುತ್ತದೆ. ಅಮಿನೋ ಆಮ್ಲ ಇರುವುದರಿಂದ ಹೆಚ್ಚಿನ ಪ್ರೊಟೀನ್ ಉತ್ಪಾದನೆ, ಮೂತ್ರಕೋಶದ ಕಲ್ಲಿನ ಸಮಸ್ಯೆ ನೀಗಿಸಿ ಆರೋಗ್ಯ ಕಾಪಾಡುವ ಶಕ್ತಿ, ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಎಂದು ಅವರು ವಿವರಿಸಿದರು.

'ಕಲ್ಪರಸ' ತಯಾರಿಕೆಯ ಪ್ರಕ್ರಿಯೆಯನ್ನು ವಿವರಿಸಿದ ಉಡುಪ, ತೆಂಗಿನ  ಹೊಂಬಾಳೆಯನ್ನು ಅದರ ತಾಜಾ ರಸವನ್ನು ಸಂಗ್ರಹಿಸಲು ಮೊದಲು ತುದಿಯಲ್ಲಿ ಕತ್ತರಿಸಲಾಗುತ್ತದೆ. ಇನ್‌ಸುಲೇಟೆಡ್‌ ಕ್ಯಾನ್‌ ಕಟ್ಟಿ ರಸ ಅದರೊಳಗೆ ಹರಿಯಲು ಅನುಮತಿಸಲಾಗುತ್ತದೆ. ಈ ಪಾನೀಯವನ್ನು 4 ಡಿಗ್ರಿ ಸೆಲ್ಸಿಯಸ್‌ಗಿಂತ  ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿದಾಗ, ಅದರ ಜೀವಿತಾವಧಿ ನಾಲ್ಕು ದಿನಗಳ ಕಾಲ ಇರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

SCROLL FOR NEXT