ಹಾವನ್ನು ಜಗಿಯುತ್ತಿರುವ ಜಿಂಕೆ 
ವಿಶೇಷ

ಅದು ಹುಲ್ಲಲ್ಲಾ...: ಹಾವು ಜಗಿಯುತ್ತಿರುವ ಜಿಂಕೆ, ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದ Viral Video

ಈ ಜಗತ್ತಿನಲ್ಲಿ ಎಂತೆಂಥಹ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ ಎಂದರೆ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಿಲ್ಲ.. ಈ ಸಾಲಿಗೆ ಇಲ್ಲೊಂದು ವೈರಲ್ ವಿಡಿಯೋ ಸೇರ್ಪಡೆಯಾಗಿದೆ.

ಈ ಜಗತ್ತಿನಲ್ಲಿ ಎಂತೆಂಥಹ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ ಎಂದರೆ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಿಲ್ಲ.. ಈ ಸಾಲಿಗೆ ಇಲ್ಲೊಂದು ವೈರಲ್ ವಿಡಿಯೋ ಸೇರ್ಪಡೆಯಾಗಿದೆ.

ಇಲ್ಲೊಂದು ಜಿಂಕೆ ವಿಷಕಾರಿ ಹಾವನ್ನು ಹುಲ್ಲಿನ ರೀತಿ ಜಗಿಯುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಜಿಂಕೆಗಳು ಶುದ್ಧ ಸಸ್ಯಹಾರಿ ಪ್ರಾಣಿಗಳು, ಕಾಡುಗಳಲ್ಲಿ ಹಸಿರು ಹುಲ್ಲನ್ನು ಗಿಡ ಪೊದೆಗಳಲ್ಲಿ ಬೆಳೆದ ಹಸಿರು ಚಿಗುರೆಲೆಗಳನ್ನು ತಿಂದು ಇವು ಬದುಕುತ್ತವೆ. ಆದರೆ ನಮ್ಮ ಈ ನಂಬಿಕೆಯನ್ನೇ ಇಲ್ಲೊಂದು ಜಿಂಕೆ ಬುಡಮೇಲು ಮಾಡಿದ್ದು, ಕಂದು ಜಿಂಕೆಯೊಂದು ಹಾವನ್ನು ಹುಲ್ಲಿನಂತೆ ಬಾಯಲ್ಲಿ ಜಗಿಯುತ್ತಿದೆ.

ಸ್ಥಳೀಯರೊಬ್ಬರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿ ನಡೆಯಿತು.. ಯಾರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂಬ ಅಂಶ ಬಯಲಾಗಿಲ್ಲವಾದರೂ ಜಿಂಕೆಯ ನಡೆ ಮಾತ್ರ ಸ್ವತಃ ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದೆ.

@TheFigen_ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಾನು ಜಿಂಕೆಯೊಂದು ಹಾವನ್ನು ತಿನ್ನುತ್ತಿರುವುದನ್ನು ಮೊದಲ ಬಾರಿ ನೋಡುತ್ತಿದ್ದೇನೆ. ಇವುಗಳಿಗೆ ಹುಲ್ಲು ನೀಡುತ್ತಿಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. 21 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಹಾವನ್ನು ಜಿಂಕೆ ಬಬಲ್‌ಗಮ್ ತರ ಜಗಿಯುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ನೋಡಿದ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT