ಚಾರ್ಮಾಡಿ ಹಸನಬ್ಬ 
ವಿಶೇಷ

ಚಾರ್ಮಾಡಿ ರಸ್ತೆ ಪ್ರಯಾಣಿಕರ ಆಪತ್ಭಾಂದವ ಹಸನಬ್ಬಗೆ ಒಲಿಯಿತು ರಾಜ್ಯೋತ್ಸವ ಪ್ರಶಸ್ತಿ!

ದಕ್ಷಿಣ ಕನ್ನಡ-ಚಿಕ್ಕಮಗಳೂರು ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 73ರಲ್ಲಿ (ಚಾರ್ಮಾಡಿ ಘಾಟ್ ರಸ್ತೆ) ರಸ್ತೆ ಅಪಘಾತದಲ್ಲಿ ಬಲಿಯಾದ ಅನೇಕರ ಜೀವ ಉಳಿಸಿ ಪರೋಪಕಾರ ಮೆರೆದ ಸಾಮಾಜಿಕ ಸೇವಾ ವಿಭಾಗದಲ್ಲಿ ಚಾರ್ಮಾಡಿ ಹಸನಬ್ಬ ಅವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಂಗಳೂರು: 73 ವರ್ಷದ ವೃದ್ಧ ಚಾರ್ಮಾಡಿ ಹಸನಬ್ಬ ಅವರು ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಕ್ಷಿಣ ಕನ್ನಡ-ಚಿಕ್ಕಮಗಳೂರು ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 73ರಲ್ಲಿ (ಚಾರ್ಮಾಡಿ ಘಾಟ್ ರಸ್ತೆ) ರಸ್ತೆ ಅಪಘಾತದಲ್ಲಿ ಬಲಿಯಾದ ಅನೇಕರ ಜೀವ ಉಳಿಸಿ ಪರೋಪಕಾರ ಮೆರೆದ ಸಾಮಾಜಿಕ ಸೇವಾ ವಿಭಾಗದಲ್ಲಿ ಚಾರ್ಮಾಡಿ ಹಸನಬ್ಬ ಅವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

1971ರಲ್ಲಿ ಈ ಹೆದ್ದಾರಿಯ ಚಾರ್ಮಾಡಿ ಗ್ರಾಮದಲ್ಲಿ ಹಸನಬ್ಬ ಅವರು ಉಪಾಹಾರ ಗೃಹವನ್ನು ತೆರೆದರು, ಮೊದಲ ಕೆಲವು ವರ್ಷಗಳವರೆಗೆ, ಅವರು ಪೊಲೀಸ್ ಪ್ರಕರಣಗಳಲ್ಲಿ ಭಾಗಿಯಾಗಲು ಇಷ್ಟಪಡದ ಕಾರಣ ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡಲು ಹಿಂಜರಿಯುತ್ತಿದ್ದರು.

ಆದರೆ, ಪದೇ ಪದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಜನರು ಅನುಭವಿಸುವ ಕಷ್ಟ, ಸಂಚಾರ ದಟ್ಟಣೆಯಿಂದ ಇತರ ಪ್ರಯಾಣಿಕರಿಗೆ ಆಗುವ ತೊಂದರೆಯನ್ನು ಗಮನಿಸಿ ಅವರು ಮನಸ್ಸು ಬದಲಾಯಿಸಿದರು. ಅಪಘಾತದ ಸ್ಥಳಗಳಿಂದ ನಾನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ ಜನರ ಸಂಖ್ಯೆಯನ್ನು ನಾನು ಲೆಕ್ಕ ಇಟ್ಟುಕೊಂಡಿಲ್ಲ.ಅದು 1,000 ಕ್ಕಿಂತ ಹೆಚ್ಚಾಗಬಹುದು ಎನ್ನುತ್ತಾರೆ.

ಘಾಟ್ ರಸ್ತೆ ಅಪಘಾತ ಅಧಿಕ: ಚಾರ್ಮಾಡಿಯ ಈ ಹೆದ್ದಾರಿಯ ಕಿರಿದಾದ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಅಪಘಾತ ವಾಹನಗಳ ಸ್ಥಳ ಮಹಜರು ನಡೆಸಲು ದಶಕದ ಹಿಂದೆ ಪೊಲೀಸರು ಅವಕಾಶ ನೀಡಿದ್ದರು. ಮೊಬೈಲ್ ನೆಟ್ ವರ್ಕ್ ಸಿಗದ, ಫೋನ್‌ಗಳು ಇಲ್ಲದಿದ್ದಾಗ ಈ ರಸ್ತೆಯಲ್ಲಿ ಅಪಘಾತದ ಸ್ಥಳಗಳನ್ನು ತಲುಪಲು ಪೊಲೀಸರಿಗೆ ಕನಿಷ್ಠ ನಾಲ್ಕು ಗಂಟೆಗಳು ಬೇಕಾಗುತ್ತದೆ. ಹಾಗಾಗಿ ಅಪಘಾತ ವಾಹನಗಳ ಮಹಜರು ನಡೆಸಿ ಹೆದ್ದಾರಿಯಿಂದ ತೆರವುಗೊಳಿಸಲು ಸಹಕರಿಸುತ್ತಿದ್ದೆ. ಪೊಲೀಸರು ನನ್ನನ್ನು ಹಾಗೆ ಮಾಡಲು ಪ್ರೋತ್ಸಾಹಿಸಿದರು ಎಂದು ಹಸನಬ್ಬ ಹೇಳುತ್ತಾರೆ. 

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ನಡುವಿನ ಈ 25 ಕಿ.ಮೀ ಘಾಟ್ ರಸ್ತೆ ಅಪಘಾತಗಳಿಗೆ ತುತ್ತಾಗುತ್ತಿರುತ್ತದೆ. ಈ ರಸ್ತೆಯಲ್ಲಿ ಅಪಘಾತವಾದರೆ ಹಸನಬ್ಬನಿಗೆ ಕರೆ ಬರುತ್ತದೆ. ಅವರು ತಕ್ಷಣ ತಮ್ಮ ಕಾರಿನಲ್ಲಿ ಒಂದೆರಡು ಜನರೊಂದಿಗೆ ಸ್ಥಳಕ್ಕೆ ಧಾವಿಸಿ ಅಪಘಾತಕ್ಕೀಡಾದವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸುತ್ತಾರೆ.

ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾಗ ಹಸನಬ್ಬ ಅವರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ನೀಡುವುದಾಗಿ ತಿಳಿಸಿದ್ದರು. ಆದರೆ ಹಸನಬ್ಬ ಅವರು ನಿರಾಕರಿಸಿದ್ದರು. ತಮ್ಮ ಸ್ವಂತ ಹಣದಿಂದ ಜನರಿಗೆ ಸೇವೆ ಸಲ್ಲಿಸುವುದರಿಂದ ತೃಪ್ತಿ ಪಡೆಯುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT