ಹೂವಿನ ತ್ಯಾಜ್ಯಗಳಿಂದ ಅಗರಬತ್ತಿಯ ತಯಾರಿಕೆ 
ವಿಶೇಷ

ಕಸದಿಂದ ರಸ: ಹೂವುಗಳ ತ್ಯಾಜ್ಯದಿಂದ ಸುವಾಸನೆ ಭರಿತ ಅಗರಬತ್ತಿ ತಯಾರಿ!

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 3 ದಿನಗಳ 17ನೇ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನ 'ಮುನಿಸಿಪಾಲಿಕಾ-2023' ನಡೆಯಿತು. 

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 3 ದಿನಗಳ 17ನೇ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನ 'ಮುನಿಸಿಪಾಲಿಕಾ-2023' ನಡೆಯಿತು. ಇದನ್ನು ಆಯೋಜಿಸಿದ್ದು ಬೆಳಗಾವಿ ನಗರ ಪಾಲಿಕೆ (BCC) ಮತ್ತು ಚಿತ್ತಾಪುರ ಟೌನ್ ಮುನ್ಸಿಪಲ್ ಕಾರ್ಪೊರೇಷನ್ (CTMC). ಸಮ್ಮೇಳನದ ವಿಶೇಷತೆಯೆಂದರೆ ದೇವಸ್ಥಾನ, ದರ್ಗಾ ಮತ್ತು ಮಾರುಕಟ್ಟೆಯಲ್ಲಿ ಸಂಗ್ರಹವಾದ ಹೂವಿನ ತ್ಯಾಜ್ಯಗಳಿಂದ ಅಗರಬತ್ತಿಯ ತಯಾರಿಕೆ. ಕಸದಿಂದ ಉಪಯುಕ್ತ ರಸದ ಉತ್ಪಾದನೆ ಮಾಡಿ ಸಂದರ್ಶಕರ ಗಮನ ಸೆಳೆಯಿತು.

ಬಿಸಿಸಿಯ ಹಿರಿಯ ಆರೋಗ್ಯ ನಿರೀಕ್ಷಕ ಶೀತಲ್ ರಾಮತೀರ್ಥ, ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಸುಮಾರು 300 ಕಿಲೋ ಹೂವಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಬೆಳಗಾವಿಯ ಅಶೋಕ ನಗರದ ಸಗಟು ಹೂವಿನ ಮಾರುಕಟ್ಟೆಯಲ್ಲಿ ಇದನ್ನು ಸಂಗ್ರಹಿಸಿ 50 ಕಿಲೋಗೆ ಇಳಿಸಲಾಗುತ್ತದೆ. ನಂತರ ಅದನ್ನು ಹಲವು ಪರಿಷ್ಕರಣೆ ಮೂಲಕ ಸುವಾಸನೆಭರಿತ ಅಗರಬತ್ತಿಗಳಾಗಿ ಮಾಡಿ ಸ್ವಸಹಾಯ ಗುಂಪುಗಳಿಂದ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ.

ಬಿಸಿಸಿಯ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ವಿ.ಕಲದಗಿ, ನಾಲ್ಕು ತಿಂಗಳ ಹಿಂದೆ ಈ ಸೌಲಭ್ಯವನ್ನು ಮಾಜಿ ಉಪಲೋಕಾಯುಕ್ತ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ಸುಭಾಷ್ ಬಿ ಅಡಿ ಉದ್ಘಾಟಿಸಿದ್ದರು. ಕಾರ್ಯಕ್ರಮ, ಸಮಾರಂಭ, ಧಾರ್ಮಿಕ ಸಮಾರಂಭಗಳಲ್ಲಿ ಕೊನೆಗೆ ಉತ್ಪತ್ತಿಯಾಗುವ ಹೂವಿನ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಪುಡಿ ಮಾಡಲಾಗುತ್ತದೆ. ಹೂವಿನ ಪುಡಿಯೊಂದಿಗೆ ಮರದ ಬೆಂಡೆ ಮತ್ತು ಗ್ಲೈಕೋಲ್ ನ್ನು ಸೇರಿಸಿ ಪ್ರತಿದಿನ ಸುಮಾರು 20,000 ಅಗರಬತ್ತಿಗಳನ್ನು ತಯಾರಿಸಲಾಗುತ್ತದೆ ಎನ್ನುತ್ತಾರೆ. 

ಸ್ವಸಹಾಯ ಸಂಘಗಳಿಗೆ ಅಗರಬತ್ತಿಯನ್ನು ತಯಾರಿಸಲು ಹೂವಿನ ಪುಡಿಯಂತಹ ಕಚ್ಚಾ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಬಿಸಿಸಿಗೆ ಗ್ರೈಂಡಿಂಗ್ ಮಷಿನ್, ಅಗರಬತ್ತಿ ರೋಲಿಂಗ್ ಮಷಿನ್ ಅಳವಡಿಸಲು ಹಾಗೂ ಶೆಡ್ ಹಾಕಲು ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಎಚ್.ವಿ.ಕಲದಗಿ ಹೇಳುತ್ತಾರೆ. 

ನಿಗಮವು ಕಚ್ಚಾ ವಸ್ತುಗಳನ್ನು ನೀಡುವುದರಿಂದ ಸ್ವಸಹಾಯ ಗುಂಪುಗಳು ವಿದ್ಯುತ್‌ಗೆ ಮಾತ್ರ ಹಣ ಪಾವತಿಸಬೇಕು. ತಮ್ಮದೇ ಆದ ಬಿದಿರಿನ ಕಡ್ಡಿಗಳನ್ನು ಖರೀದಿಸಬೇಕು. ನಂತರ ಈ ಅಗರಬತ್ತಿಗಳನ್ನು ಕಂಪನಿಗಳಿಗೆ ನೀಡಲಾಗುತ್ತದೆ ಎಂದು ಅವರು ಹೇಳಿದರು. ಸೌಂದತ್ತಿ ಯೆಲ್ಲಮ್ಮ ದೇವಸ್ಥಾನದ ಅಧಿಕಾರಿಗಳು ಅಗರಬತ್ತಿಗಳಿಗಾಗಿ ಸ್ವಸಹಾಯ ಸಂಘಗಳನ್ನು ಸಂಪರ್ಕಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT