ಉಸ್ತಾದ್ ರಶೀದ್ ಖಾನ್ 
ವಿಶೇಷ

'ಅವರ ಕೊನೆಯ ಉಸಿರು ಇರುವವರೆಗೂ, ಗಂಟೆಗಟ್ಟಲೆ ರಿಯಾಜ್ ಮಾಡುತ್ತಿದ್ದರು': ವಿಜಯ್ ಪ್ರಕಾಶ್ ಕಂಡ ಉಸ್ತಾದ್ ರಶೀದ್ ಖಾನ್

ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಕ್ಯಾನ್ಸರ್ ಕಾಯಿಲೆಯಿಂದ ತಮ್ಮ 55ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಂಗೀತ ದಿಗ್ಗಜನೊಂದಿಗೆ ತಾವು ನಡೆಸಿದ ಸಂವಾದಕ್ಕಿಂತ ಮುಖ್ಯವಾಗಿ ಅವರ ಸಂಗೀತ ಪ್ರದರ್ಶನವನ್ನು ನೇರವಾಗಿ ವೀಕ್ಷಿಸುವ ಸೌಭ್ಯಾಗ್ಯ ಸಿಕ್ಕಿರುವ ಅನುಭವವನ್ನು ಖ್ಯಾತ ಹಿನ್ನೆಲೆ ಗಾಯಕ, ಸಂಗೀತಗಾರ ವಿಜಯ್ ಪ್ರಕಾಶ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಓದುಗರೊಂದಿಗ

ಬೆಂಗಳೂರು: ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಕ್ಯಾನ್ಸರ್ ಕಾಯಿಲೆಯಿಂದ ತಮ್ಮ 55ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಂಗೀತ ದಿಗ್ಗಜನೊಂದಿಗೆ ತಾವು ನಡೆಸಿದ ಸಂವಾದಕ್ಕಿಂತ ಮುಖ್ಯವಾಗಿ ಅವರ ಸಂಗೀತ ಪ್ರದರ್ಶನವನ್ನು ನೇರವಾಗಿ ವೀಕ್ಷಿಸುವ ಸೌಭ್ಯಾಗ್ಯ ಸಿಕ್ಕಿರುವ ಅನುಭವವನ್ನು ಖ್ಯಾತ ಹಿನ್ನೆಲೆ ಗಾಯಕ, ಸಂಗೀತಗಾರ ವಿಜಯ್ ಪ್ರಕಾಶ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ವಿಜಯ್ ಪ್ರಕಾಶ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಮೋನಿಕಾ ಮೊನಾಲಿಸಾ ಅವರೊಂದಿಗೆ ಹಂಚಿಕೊಂಡ ಅನಿಸಿಕೆ ಹೀಗಿದೆ: ''ಉಸ್ತಾದ್ ರಶೀದ್ ಖಾನ್ ಅವರೊಂದಿಗೆ ನಾನು ನಡೆಸಿದ ಮೊದಲ ಸಂವಾದಕ್ಕಿಂತ ಅವರ ಸಂಗೀತ ಪ್ರದರ್ಶನವನ್ನು ಮೊದಲ ಬಾರಿಗೆ ನೇರವಾಗಿ ವೀಕ್ಷಿಸಿರುವ ದಿನದ ಬಗ್ಗೆ ನಾನು ಮಾತನಾಡಲು ಇಷ್ಟಪಡುತ್ತೇನೆ. ಅದು ಬಹುಶಃ 2000 ದಶಕದ ಆರಂಭದಲ್ಲಿ, ಮುಂಬೈನ ಸಭಾಂಗಣವೊಂದರಲ್ಲಿ. ಆ ಸಭಾಂಗಣದಲ್ಲಿ ಇದ್ದದ್ದು ಕೇವಲ 50 ಜನರು ಪ್ರೇಕ್ಷಕರು. ಇಷ್ಟು ದೊಡ್ಡ ಸಂಗೀತಗಾರನ ಕಚೇರಿಗೆ ಜನ ಬಾರದಿದ್ದದು ಕಂಡು ನನಗೆ ಅಚ್ಚರಿಯಾಗಿತ್ತು. ಖಾನ್ ಸಾಬ್ ಅಸಮಾಧಾನಗೊಳ್ಳುತ್ತಾರೆ ಅವರಿಗೆ ಬೇಸರವಾಗುತ್ತದೆ ಎಂದು ನಾನು ಭಾವಿಸಿದೆ, ಆದರೆ ಅವರು ಮೂರು ಗಂಟೆಗಳ ಕಾಲ ಅದ್ಬುತ ಪ್ರದರ್ಶನ ನೀಡಿದರು. ಅಂದರೆ ಇಲ್ಲಿ ಕಲಾವಿದನಿಗೆ ಪ್ರೇಕ್ಷಕರ ಸಂಖ್ಯೆ ಮುಖ್ಯವಲ್ಲ, ಕೇಳಿದವರು ಎಷ್ಟು ಮೆಚ್ಚಿಕೊಳ್ಳುತ್ತಾರೆ ಎಂಬುದು ಮುಖ್ಯ ಎಂದು ಅವರು ಅಂದು ತೋರಿಸಿಕೊಟ್ಟರು.

ವಾರದ ದಿನಗಳಲ್ಲಿ ಸಂಗೀತ ಆಲಿಸಲು ಬಂದಿದ್ದ ಆ 50 ಜನರು ಸಂಗೀತದ ಬಗ್ಗೆ ಬಹಳ ಪ್ರೀತಿಯಿರುವವರು ಆಗಿದ್ದರು. ಆ ದಿನ ನನಗೆ ಚೆನ್ನಾಗಿ ನೆನಪಿದೆ ಏಕೆಂದರೆ ಅದು ನನಗೆ ಜೀವನದ ಪಾಠವಾಗಿತ್ತು. ನೀವು ವೇದಿಕೆಯಲ್ಲಿದ್ದರೆ, ಎಷ್ಟು ಜನರಿದ್ದರೂ ನಿಮ್ಮ ಅತ್ಯುತ್ತಮ ಪ್ರದರ್ಶನ ಕಲಾಕರ್ಮವಾಗಿರುತ್ತದೆ, ಕಲಾವಿದನಿಗೆ ಪ್ರದರ್ಶನ ಮುಖ್ಯವೇ ಹೊರತು ಪ್ರೇಕ್ಷಕರ ಸಂಖ್ಯೆಯಲ್ಲ. ಒಬ್ಬ ವ್ಯಕ್ತಿಯು ನಿಮ್ಮ ಮಾತನ್ನು ಕೇಳುತ್ತಿದ್ದರೂ ಸಹ, ನೀವು ಇನ್ನೂ ನಿಮ್ಮ ಕೆಲಸವನ್ನು ಪೂರ್ಣ ಪ್ರಾಮಾಣಿಕತೆಯಿಂದ ಮಾಡುತ್ತೀರಿ. ಅಂದು ಅಭಿಮಾನಿಯಾಗಿ ಅವರ ಸಂಗೀತ ಆಲಿಸಲು ಹೋಗಿದ್ದ ನನಗೆ ನಂತರದ ದಿನಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ.

ಒಂದು ಬಾರಿ ಗಣೇಶ ಉತ್ಸವದ ಸಮಯದಲ್ಲಿ ನಾವು ಜುಗಲ್ಬಂದಿ ಮಾಡಿದ್ದೆವು. ಕಚೇರಿ ಆರಂಭವಾಗುವ ಮುನ್ನ ನಿಮ್ಮ ಜೊತೆ ನಿಂತು ನಿಮಗೆ ಸಮನಾಗಿ  ನಾನು ಈ ಜುಗಲ್ಬಂದಿಯಲ್ಲಿ ಭಾಗವಹಿಸುವಷ್ಟು ಅರ್ಹನಲ್ಲ ಎಂದಿದ್ದೆ. ನಾನು ಅವರನ್ನು ವಿದ್ಯಾರ್ಥಿಯಾಗಿ ಅವರ ಹಾಡುಗಳನ್ನು ಗಮನಿಸಲು ಬಯಸಿದ್ದೆ. ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ಒಂದು ಸೌಭಾಗ್ಯ.

ಉಸ್ತಾದ್‌ರು ಅನೇಕ ಬಂದಿ ಜೀವನದಲ್ಲಿ ಬಂದು ಹೋಗುತ್ತಾರೆ.  ಆದರೆ ಕೆಲವರು ಮಾತ್ರ ಪ್ರಭಾವ ಬೀರಿ ಬೇರೆಯವರು ಅವರ ಸ್ಥಾನವನ್ನು ತುಂಬಲಾರದ ಪರಿಸ್ಥಿತಿಯಲ್ಲಿ ಇರಿಸಿ ಹೋಗುತ್ತಾರೆ. ಅವರ ಕೊನೆಯ ಉಸಿರು ಇರುವವರೆಗೂ, ಅವರು ಸಂಗೀತ ರಿಯಾಜ್ ಅಥವಾ ಅಭ್ಯಾಸದಲ್ಲಿ ಗಂಟೆಗಟ್ಟಲೆ ಕಳೆಯುತ್ತಿದುದರಿಂದ ಅವರು ಪರಿಪೀರ್ಣ ಗಾಯಕ ಮತ್ತು ಸಂಗೀತಗಾರನಾಗಿ ಸುಸಜ್ಜಿತಗೊಂಡರು. ಇದು ಅವರ ಅತ್ಯಂತ ಪ್ರಶಂಸನೀಯ ವಿಷಯ ಎಂದು ಭಾವಿಸಿದ್ದೇನೆ. 

ಅವರ ಠುಮ್ರಿಗಳು ಮತ್ತು ತುಕಡಾಗಳನ್ನು ಹೊರತುಪಡಿಸಿ, ಅರೆ-ಶಾಸ್ತ್ರೀಯ ಸಂಗೀತಕ್ಕೆ ಅವರು ಹೊಂದಿಕೊಂಡ ರೀತಿ ಸಂಗೀತ ಭ್ರಾತೃತ್ವವು ಇನ್ನೂ ಮಾತನಾಡುತ್ತಿದೆ. 'ಜಬ್ ವಿ ಮೆಟ್ ' ಚಿತ್ರದ ಆವೋಗೆ ಜಬ್ ತುಮ್ ಹಾಡು ಅದಕ್ಕೊಂದು ಸುಂದರ ಉದಾಹರಣೆ.

ಉಸ್ತಾದ್ ರಶೀದ್ ಖಾನ್ ಅವರ ಮರಣದ ಸುದ್ದಿ ನಮಗೆ ಆಘಾತ ತಂದಿದ್ದು, ಭರಿಸಲಾರದ ತುಂಬು ನಷ್ಟವಾಗಿದೆ.''

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT