ರಾಮಮಂದಿರದ ಕೆಳಗೆ 'ಟೈಮ್ ಕ್ಯಾಪ್ಸುಲ್' 
ವಿಶೇಷ

ಸಾವಿರ ವರ್ಷ ಕಳೆದರೂ ಇನ್ನೆಂದೂ ವಿವಾದವಾಗದು: ರಾಮಮಂದಿರದ ಕೆಳಗೆ 2 ಸಾವಿರ ಅಡಿಯಲ್ಲಿ 'ಟೈಮ್ ಕ್ಯಾಪ್ಸುಲ್'; ಏನಿದರ ವಿಶೇಷತೆ?

500 ವರ್ಷಗಳಿಗೂ ಅಧಿಕ ಕಾಲದ ಹೋರಾಟದ ಬಳಿಕ ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಭವಿಷ್ಯದಲ್ಲಿ ಇನ್ನೆಂದೂ ಇಂತಹ ವಿವಾದವಾಗದಂತೆ ಮಂದಿರ ನಿರ್ಮಾಣದ ಉಸ್ತುವಾರಿ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 'ಮಾಸ್ಟರ್ ಪ್ಲಾನ್' ರೂಪಿಸಿದೆ.

ಅಯೋಧ್ಯೆ: 500 ವರ್ಷಗಳಿಗೂ ಅಧಿಕ ಕಾಲದ ಹೋರಾಟದ ಬಳಿಕ ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಭವಿಷ್ಯದಲ್ಲಿ ಇನ್ನೆಂದೂ ಇಂತಹ ವಿವಾದವಾಗದಂತೆ ಮಂದಿರ ನಿರ್ಮಾಣದ ಉಸ್ತುವಾರಿ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 'ಮಾಸ್ಟರ್ ಪ್ಲಾನ್' ರೂಪಿಸಿದೆ.

ಹೌದು.. ಅಯೋಧ್ಯೆಯ ರಾಮ ಮಂದಿರದ (Ayodhya Ram Mandir) ಭವ್ಯ ಕಟ್ಟಡದ ಕೆಳಗೆ, 2000 ಅಡಿಗಳಷ್ಟು ಆಳದಲ್ಲಿ ಒಂದು ʼಟೈಮ್‌ ಕ್ಯಾಪ್ಸೂಲ್ʼ (Time Capsule) ಅನ್ನು ಇರಿಸಲಾಗುತ್ತಿದ್ದು, ಇದು ರಾಮ ಜನ್ಮ ಭೂಮಿ ಭವ್ಯ ಇತಿಹಾಸವನ್ನು ಒಳಗೊಂಡಿರುವ ಮಾಹಿತಿ ಕೋಶವಾಗಿರಲಿದೆ ಎಂದು ಹೇಳಲಾಗಿದೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ರಾಮ ಮಂದಿರದ ಅಡಿಯಲ್ಲಿ 2,000 ಅಡಿಗಳಷ್ಟು ಕೆಳಗೆ ‘ಟೈಮ್ ಕ್ಯಾಪ್ಸುಲ್’ ಅನ್ನು ಇರಿಸುತ್ತದೆ. ಟೈಮ್ ಕ್ಯಾಪ್ಸುಲ್ ರಾಮ ಜನ್ಮಭೂಮಿಯ ವಿವರವಾದ ಇತಿಹಾಸವನ್ನು ಹೊಂದಿರುತ್ತದೆ ಎನ್ನಲಾಗಿದೆ.

ಟ್ರಸ್ಟ್‌ನ ಸದಸ್ಯರ ಪ್ರಕಾರ, ಈ ಪ್ರದೇಶದ ಬಗ್ಗೆ ಭವಿಷ್ಯದಲ್ಲಿ ತಲೆದೋರಬಹುದಾದ ಯಾವುದೇ ವಿವಾದವನ್ನು ತಪ್ಪಿಸಲು ಮಾಹಿತಿ ತುಂಬಿದ ಈ ಕ್ಯಾಪ್ಸೂಲ್ ಅನ್ನು ಸೈಟ್‌ನ ಕೆಳಗೆ ಇರಿಸಲಾಗುತ್ತದೆ. ʼರಾಮ ಮಂದಿರ’ ಇತಿಹಾಸದ ವಿವಿಧ ಅಂಶಗಳನ್ನು ಇದು ಹೊಂದಿದೆ. ಇದೊಂದು ಐತಿಹಾಸಿಕ ಮಾಹಿತಿಯ ಸಂಗ್ರಹ. ಭವಿಷ್ಯದ ಜನತೆಯೊಂದಿಗೆ ಸಂವಹನದ ವಿಧಾನವಾಗಿ, ಭವಿಷ್ಯದ ಪುರಾತತ್ವಶಾಸ್ತ್ರಜ್ಞರು ಅಥವಾ ಇತಿಹಾಸಕಾರರಿಗೆ ಸಹಾಯ ಮಾಡಲು ಇದನ್ನು ಬಳಸಲಾಗುತ್ತದೆ.

ಇದರಲ್ಲಿ ಏನಿರುತ್ತದೆ?
ಟೈಮ್‌ ಕ್ಯಾಪ್ಸೂಲ್‌ ಸಹಾಯದಿಂದ ಭವಿಷ್ಯದ ಪೀಳಿಗೆಗಳು ಈಗಿನ ನಿರ್ದಿಷ್ಟ ಯುಗ, ಸಮಾಜ ಮತ್ತು ದೇಶದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಸಾಮಾನ್ಯವಾಗಿ, ಈ ಟೈಮ್‌ ಕ್ಯಾಪ್ಸೂಲ್‌ಗಳನ್ನು ಕಟ್ಟಡಗಳ ಅಡಿಪಾಯದಲ್ಲಿ ಇರಿಸಲಾಗುತ್ತದೆ. ಸದ್ಯ ಈ ಟೈಮ್ ಕ್ಯಾಪ್ಸೂಲ್ ಅಯೋಧ್ಯೆ, ಭಗವಾನ್ ರಾಮನ ಬಗ್ಗೆ ಸಂದೇಶವನ್ನು ಸಂಸ್ಕೃತದಲ್ಲಿ ಹೊಂದಿರುತ್ತದೆ. ಇದನ್ನು ತಾಮ್ರದ ತಗಡಿನಲ್ಲಿ ಕೆತ್ತಿ ಅದನ್ನು ಸುರಕ್ಷಿತವಾದ, ತುಕ್ಕು ಹಿಡಿಯದ, ಶಿಲೆಯ ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ ಎಂದು ಹೇಳಲಾಗಿದೆ.

ಸಂಸ್ಕೃತವೇ ಯಾಕೆ? 
ಯಾಕೆಂದರೆ ಈ ಭಾಷೆಯಲ್ಲಿ ಹೆಚ್ಚಿನ ಮಾಹಿತಿಯನ್ನು ಹೊಂದಿದ ವಾಕ್ಯಗಳನ್ನು ಕೆಲವೇ ಪದಗಳಲ್ಲಿ ರಚಿಸಲು ಸಾಧ್ಯ..

ಯಾವಾಗ ಇರಿಸುತ್ತಾರೆ?
ಈ ಟೈಮ್‌ ಸಮಯ ಕ್ಯಾಪ್ಸೂಲ್ ಅನ್ನು ಭೂಮಿ ಪೂಜೆಯ ದಿನ ಅಥವಾ ಪ್ರಾಣ ಪ್ರತಿಷ್ಠಾಪನೆಯ ದಿನ ಇರಿಸಲಾಗುವುದಿಲ್ಲ. ಏಕೆಂದರೆ ಅದು ಸಿದ್ಧವಾಗಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಕನಿಷ್ಠ ಪದಗಳಲ್ಲಿ ಹೆಚ್ಚಿನ, ನಿಖರ ಮಾಹಿತಿಯನ್ನು ಬರೆಯಲು ತಜ್ಞರನ್ನು ಸಂಪರ್ಕಿಸಲಾಗಿದೆ.

ಟೈಮ್ ಕ್ಯಾಪ್ಸುಲ್ ವಿಶೇಷತೆ ಏನು?
ಇದೊಂದು ಐತಿಹಾಸಿಕ ಮಾಹಿತಿಯ ಸಂಗ್ರಹವಾಗಿದ್ದು, ಅಲ್ಯೂಮಿನಿಯಂ, ಸ್ಟೇನ್‌ಲೆಸ್ ಸ್ಟೀಲ್ ಅಥವಾ ತಾಮ್ರದಂತಹ ಲೋಹಗಳಿಂದ ಟೈಮ್ ಕ್ಯಾಪ್ಸುಲ್ ಅನ್ನು ತಯಾರಿಸಲಾಗುತ್ತದೆ. ಸಾವಿರಾರು ವರ್ಷಗಳ ನಂತರವೂ ಅದು ಹಾಳಾಗದಂತೆ ಆಸಿಡ್ ಮುಕ್ತವಾಗಿಸಿ ಅದರ ಮೇಲೆ ಸಂದೇಶವನ್ನು ಬರೆಯಲಾಗುತ್ತದೆ. ಟೈಮ್ ಕ್ಯಾಪ್ಸುಲ್ ಕಂಟೇನರ್ 3 ​​ಅಡಿ ಉದ್ದವಾಗಿರುತ್ತದೆ.

400 ವರ್ಷ ಹಿಂದಿನ ಕ್ಯಾಪ್ಸೂಲ್
2017ರ ನವೆಂಬರ್ 30ರಂದು, ಸ್ಪೇನ್‌ನ ಬರ್ಗೋಸ್‌ನಲ್ಲಿರುವ ಜೀಸಸ್ ಕ್ರೈಸ್ಟ್ ಪ್ರತಿಮೆಯ ಅಡಿಯಲ್ಲಿ ನೆಲದೊಳಗೆ 400 ವರ್ಷಗಳಷ್ಟು ಹಳೆಯ ಸಮಯದ ಕ್ಯಾಪ್ಸುಲ್ ಕಂಡುಬಂದಿತ್ತು. ಇದು 1777ರ ಕಾಲದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಾಹಿತಿಯನ್ನು ಹೊಂದಿದೆ. ತಜ್ಞರ ಪ್ರಕಾರ ಇದು ಅತ್ಯಂತ ಹಳೆಯ ಸಮಯದ ಕ್ಯಾಪ್ಸುಲ್ ಎನ್ನಲಾಗಿದೆ.

ಅಂದಹಾಗೆ ರಾಜಕಾರಣಿಗಳು, ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು ಸೇರಿದಂತೆ 7,000ಕ್ಕೂ ಹೆಚ್ಚು ಗಣ್ಯರು ಜ.22ರಂದು ನಡೆಯುವ ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮ ನೆರವೇರಿಸಲಿದ್ದು, ಗರ್ಭಗುಡಿಯಲ್ಲಿ ಈಗಾಗಲೇ ರಾಮ ಲಲ್ಲಾನ ಮೂರ್ತಿಯನ್ನು ಇರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT