ಸ್ಯಾಡಿಯೊ ಮಾನೆ ತನ್ನ ಲಿವರ್‌ಪೂಲ್ ದಿನಗಳಲ್ಲಿ ಸ್ಕೋರ್ ಮಾಡಿದ ನಂತರ ಸಂಭ್ರಮಿಸುತ್ತಿರುವುದು.  
ವಿಶೇಷ

ಜನರಿಗೆ ಮೂಲ ಆದಾಯ, ಶಾಲೆ, ಆಸ್ಪತ್ರೆ ಸೌಲಭ್ಯ: ಇದು ಫುಟ್ ಬಾಲ್ ಆಟಗಾರ ಸಾಡಿಯೊ ಮಾನೆ ಹಳ್ಳಿಯನ್ನು ರೂಪಾಂತರಿಸಿದ ಕಥೆ...

ಸೆನೆಗಲೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಬಡತನದಲ್ಲಿ ಹುಟ್ಟಿ ಬೆಳೆದು ನಂತರ ತನ್ನ ಹಳ್ಳಿಯನ್ನು ಯಾವ ರೀತಿ ಪರಿವರ್ತಿಸಿದ ಎಂಬ ರೋಚಕ ಕಥೆಯಿದು.

"ನನಗೆ ಹತ್ತು ಫೆರಾರಿಗಳು, 20 ವಜ್ರದ ಗಡಿಯಾರಗಳು, ಎರಡು ಜೆಟ್ ವಿಮಾನಗಳು ಏಕೆ ಬೇಕು? ಅದರಿಂದ ಜನರಿಗೆ ಏನು ಉಪಯೋಗ, ನಾನು ಹಸಿವಿನಿಂದ ಬಳಲುತ್ತಿದ್ದೆ, ಹೊಲಗಳಲ್ಲಿ ಕೆಲಸ ಮಾಡುತ್ತಿದ್ದೆ. ಬರಿಗಾಲಿನಲ್ಲಿ ಆಟವಾಡುತ್ತಿದ್ದೆ. ಶಾಲೆಗೆ ಹೋಗುತ್ತಿರಲಿಲ್ಲ, ಇವತ್ತು ನಾನು ಬೇರೆಯವರಿಗೆ ಸಹಾಯ ಮಾಡುವ ಮಟ್ಟಕ್ಕೆ ಬೆಳೆದಿದ್ದೇನೆ, ಸಹಾಯ ಮಾಡುತ್ತೇನೆ'' ಇದು ಸೆನೆಗಲೀಸ್ ವೃತ್ತಿಪರ ಫುಟ್ ಬಾಲ್ ಆಟಗಾರ ಸಾಡಿಯೊ ಮಾನೆ ಮಾತುಗಳು.

ಊಹಿಸಿಕೊಳ್ಳಿ, ಕ್ರೀಡಾ ತಾರೆಯೊಬ್ಬರು ಇದನ್ನು ಹೇಳುವುದು ಮಾತ್ರವಲ್ಲ, ಆ ರೀತಿ ಬದುಕಿ ತೋರಿಸಿದ್ದಾರೆ. ಅವರು ಮತ್ಯಾರೋ ಅಲ್ಲ, ಸಾಡಿಯೊ ಮಾನೆ. ಸೆನೆಗಲೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಬಡತನದಲ್ಲಿ ಹುಟ್ಟಿ ಬೆಳೆದು ನಂತರ ತನ್ನ ಹಳ್ಳಿಯನ್ನು ಯಾವ ರೀತಿ ಪರಿವರ್ತಿಸಿದ ಎಂಬ ರೋಚಕ ಕಥೆಯಿದು.

ಆಫ್ರಿಕಾದ ಬಡ ಪ್ರದೇಶಗಳಲ್ಲಿ ಒಂದಾದ ದ್ರಾಕ್ಷಿಹಣ್ಣಿನ ತೋಟದ ಮಧ್ಯೆ ಹುಟ್ಟಿಕೊಂಡ ಕನಸು ಈಗ ಅಂತಾರಾಷ್ಟ್ರೀಯ ವೃತ್ತಿಜೀವನವಾಗಿ ರೂಪಾಂತರಗೊಳ್ಳುವಲ್ಲಿಯವರೆಗೆ ಬೆಳೆಯಿತು. ಮಾನೆ ಅವರು 2019 ರಲ್ಲಿ ಚಾಂಪಿಯನ್ಸ್ ಲೀಗ್ ನ್ನು ಗೆದ್ದು, ತನ್ನ ಹಳ್ಳಿಯಾದ ಬಂಬಾಲಿಯಲ್ಲಿ ಬೆಳಗಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.

ಬಂಬಾಲಿಯು ಸೇಧಿಯು ಪ್ರಾಂತ್ಯದಲ್ಲಿದೆ, ಅಲ್ಲಿ ಸುಮಾರು ಶೇಕಡಾ 70ರಷ್ಟು ಮಂದಿ ಬಡ ಕುಟುಂಬದ ಹಿನ್ನೆಲೆಯವರು.

ಮಾನೆ ತನ್ನ ಗಳಿಕೆಯ ಒಂದು ಮಿಲಿಯನ್ ಪೌಂಡ್‌ಗಳನ್ನು ಬಂಬಾಲಿಯಾಗೆ ಮೀಸಲಿಡುವ ಮೂಲಕ ಹಳ್ಳಿಯನ್ನು ಬೆಳಗಿಸಿದ್ದಾರೆ. ಶಾಲೆಗಳ ನಿರ್ಮಾಣಕ್ಕೆ 3 ಲಕ್ಷ ಡಾಲರ್, ಆಸ್ಪತ್ರೆಗಳ ನಿರ್ಮಾಣಕ್ಕೆ 6 ಲಕ್ಷ ಡಾಲರ್ ಹಣ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಇಂಟರ್‌ನೆಟ್‌ ಸೌಲಭ್ಯವನ್ನೂ ಕಲ್ಪಿಸಿದ್ದಾರೆ.

ಏಳನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ಊರಿನಲ್ಲಿ ಅಂಚೆ ಕಚೇರಿ, ಪೆಟ್ರೋಲ್ ಬಂಕ್, ಮಸೀದಿಯನ್ನು ಕಟ್ಟಿಸಿದ್ದಾರೆ. ಪ್ರಸಿದ್ಧ ಸಾರ್ವಜನಿಕ ಮೂಲ ಆಧಾಯ ಯೋಜನೆ ಅನುಷ್ಠಾನಗೊಂಡು ಪ್ರತಿ ತಿಂಗಳು ಬಡ ಕುಟುಂಬಗಳಿಗೆ 76 ಡಾಲರ್ ಧನ ಸಹಾಯ ಮಾಡುತ್ತಾರೆ.

ನಮ್ಮ ದೇಶದ ಕ್ರೀಡಾ ತಾರೆಗಳು, ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ಸಾಡಿಯೋ ಮಾನೆ ರೀತಿ ಯೋಚಿಸಿ ಸಮಾಜಮುಖಿ ಕೆಲಸಗಳನ್ನು ಮಾಡಿದರೆ ನಮ್ಮ ದೇಶ ಎಷ್ಟು ಉದ್ದಾರವಾಗಬಹುದಲ್ಲವೇ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT