ಪಾಲಕ್ಕಾಡ್: ಒಟ್ಟಪಾಲಂನ ಕಿವುಡರ ಸರ್ಕಾರಿ ಪ್ರೌಢಶಾಲೆಯೊಳಗೆ ಕಾಲಿಡುತ್ತಿದ್ದಂತೆಯೇ ಹೃದಯ ಸ್ಪರ್ಶಿ ಅನುಭವ ತೆರೆದುಕೊಳ್ಳುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ತಮ್ಮ ತಾಯಂದಿರೇ ಪ್ರೀತಿಯಿಂದ ಹೊಲಿದ ಯೂನಿಫಾರ್ಮ್ ಧರಿಸಿ ಹೆಮ್ಮೆಯಿಂದ ಶಾಲೆಗೆ ಕಾಲಿಟ್ಟಿದ್ದಾರೆ. ಅಂದಹಾಗೆ, ಶಾಲಾ ಅಧಿಕಾರಿಗಳು ಈ ವರ್ಷದ ಫೆಬ್ರವರಿಯಲ್ಲಿ ಕ್ಯಾಂಪಸ್‌ನಲ್ಲಿ ಸಣ್ಣ ಟೈಲರಿಂಗ್ ಘಟಕ, ಥನಿಮಾ ಉತ್ಪಾದನಾ ಕೇಂದ್ರವನ್ನು ಆರಂಭಿಸಿದ್ದರು. ಇದು ಮಕ್ಕಳ ಕಲಿಕೆ ಮತ್ತು ಜೀವನದ ನಡುವೆ ಸೇತುವೆ ನಿರ್ಮಿಸುವ ಗುರಿಯಾಗಿತ್ತು. ಕೌಶಲ್ಯ ಅಭಿವೃದ್ಧಿ ಉಪಕ್ರಮವಾಗಿ ಪ್ರಾರಂಭವಾದದ್ದು ವಿದ್ಯಾರ್ಥಿಗಳು ಮತ್ತು ಅವರ ತಾಯಂದಿರ ಜೀವನದ ಪರಿವರ್ತಕ ಆಗಿ ಅರಳಿದೆ.
"ನಮ್ಮ ವಿದ್ಯಾರ್ಥಿಗಳು ಹುಟ್ಟಿನಿಂದಲೇ ಸವಾಲು ಎದುರಿಸುತ್ತಾ ಬಂದರಿಂದ ಭಾಷೆ, ಶಿಕ್ಷಣ ಮತ್ತು ಜೀವನ ಕೌಶಲ್ಯಗಳನ್ನು ಸ್ವಲ್ಪ ನಿಧಾನವಾಗಿ ಕಲಿಯುತ್ತಾರೆ. ಹಿಂದಿನ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೆ ಈಗ ಹೆಚ್ಚುವರಿ ಕೌಶಲ್ಯದಿಂದ ಸಜ್ಜುಗೊಳಿಸಲು ಬಯಸಿದ್ದೇವೆ. ಆಗ ಟೈಲರಿಂಗ್‌ನಲ್ಲಿ ವೃತ್ತಿಪರ ತರಬೇತಿ ಪ್ರಾರಂಭಿಸಲು ಯೋಚಿಸಿದ್ದೇವು. ಶೀಘ್ರದಲ್ಲೇ ಮಕ್ಕಳ ತಾಯಂದಿರನ್ನು ಸೇರಿಸಿದೇವು. ಇಂದು ನಮ್ಮೊಂದಿಗೆ ಕೆಲಸ ಮಾಡುತ್ತಿರುವ ಸುಂದರ ಸ್ಟಿಚ್ಚಿಂಗ್ ಅಮ್ಮಂದಿರ ತಂಡವೊಂದು ಇದೆ ಎಂದು ನಗುತ್ತಾ ಹೇಳಿದ್ರು ಶಾಲಾ ಮುಖ್ಯೋಪಾಧ್ಯಾಯಿನಿ ವಿ.ಎಲ್. ಮಿನಿ ಕುಮಾರಿ.
50 ವಿದ್ಯಾರ್ಥಿಗಳಿರುವ ಶಾಲೆ: ಈ ಶಾಲೆಯಲ್ಲಿ ಪ್ರೀ- ಪ್ರೈಮರಿಯಿಂದ ಹೈಯರ್ ಸೆಕೆಂಡರಿ ಗ್ರೇಡ್ ವರೆಗೂ 50 ವಿದ್ಯಾರ್ಥಿಗಳಿದ್ದಾರೆ. ತಾಯಂದಿರ ಗುಂಪು ತಮ್ಮ ಮಕ್ಕಳ ಯೂನಿಫಾರ್ಮ್ ಹೊಲೆದಿದ್ದಾರೆ. ಪ್ರೌಢಶಾಲೆಯಲ್ಲಿರುವವರು ಕೂಡಾ ಟೈಲರಿಂಗ್ ಕಲಿತಿದ್ದಾರೆ. ವಿನ್ಯಾಸ ಶಿಕ್ಷಕರೊಬ್ಬರ ಮೇಲ್ವಿಚಾರಣೆಯಲ್ಲಿ ಆರು ತಾಯಂದಿರು ಪೂರ್ಣವಧಿಗೆ ಘಟಕದಲ್ಲಿ ಕೆಲಸ ಮಾಡುತ್ತಾರೆ. ಅವರಲ್ಲಿ ಬಹುತೇಕರು ಮನೆ ಕೆಲಸಗಳನ್ನು ಮೀರಿ ಇದೇ ಮೊದಲ ಬಾರಿಗೆ ಕೈಯಲ್ಲಿ ಸೂಜಿ ಮತ್ತು ದಾರ ಇಡಿದಿದ್ದಾರೆ ಎಂದು ಶಿಕ್ಷಕಿ ಪಿ.ಆರ್. ಸುಜಿತಾ ತಿಳಿಸಿದರು.
ಯೂರ್ನಿಫಾರ್ಮ್ ಜೊತೆಗೆ ಅನೇಕ ಕರಕುಶಲ ಉತ್ಪನ್ನಗಳ ತಯಾರಿಕೆ:
ಇದರಿಂದ ಆರ್ಥಿಕವಾಗಿ ಸ್ವಾವಲಂಬಿಯಾಗುವ ಭರವಸೆ ಇದೆ. ಯೂನಿಫಾರ್ಮ್ ಜೊತೆಗೆ ಕರಕುಶಲ ಬ್ಯಾಗ್ ಗಳು, ಪರ್ಸ್ ಗಳು, ಕಾಗದದ ಪೈಲ್ ಗಳು, ತರಹೇವಾರಿ ಫ್ಯಾನ್ಸಿ ವಸ್ತುಗಳನ್ನು ಹೊಲೆಯುತ್ತೇವೆ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳನ್ನು ನಮ್ಮ ಬೆಂಬಲಕ್ಕೆ ಮುಂದಾಗುವುದನ್ನು ಎದುರು ನೋಡುತ್ತಿದ್ದೇವೆ ಎಂದು ಎಂಟನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಮುನಾವರ್ ತಾಯಿ ಕೆ.ವಿ. ಸಲೀನಾ ಹೇಳಿದರು.
ಈಕೆ ಪ್ರತಿ ದಿನ ತನ್ನ ಮಗನೊಂದಿಗೆ ತ್ರಿತಾಳದಿಂದ ಒಟ್ಟಪಾಲಂಗೆ 70 ಕಿಮೀ. ಪ್ರಯಾಣಿಸಿ ಮತ್ತೆ ವಾಪಸ್ಸಾಗುತ್ತಾರೆ. ಮುನಾವರ್ ತರಹದ ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಶಾಲೆಯಿಂದ ಇತರ ವಿಶೇಷ ಸೌಕರ್ಯಗಳನ್ನು ಒದಗಿಸಲಾಗಿದೆ.
ಶಾಲೆಯಲ್ಲಿ ಇತರ ಅನೇಕ ವಿಶೇಷ ಸೌಕರ್ಯಗಳು: ಶಾಲೆಯಲ್ಲಿ ಐಡಿಯಾಲಜಿ ಲ್ಯಾಬ್, ಸ್ಪೀಚ್, ಸೈನ್ಸ್ ಲ್ಯಾಬ್, ಕಂಪ್ಯೂಟರ್ ಲ್ಯಾಬ್, ಕಿಡ್ಸ್ ಪಾರ್ಕ್, ಆಟದ ಮೈದಾನ ಮತ್ತು ಹಾಸ್ಟೆಲ್ ಸೌಕರ್ಯವಿದೆ. ತರಕಾರಿ ಫಾರ್ಮ್ ಹಾಗೂ ಕಲೆ, ಕ್ರೀಡೆ ಮತ್ತು ವಿಜ್ಞಾನಕ್ಕೆ ಪರಿಣತ ಶಿಕ್ಷಕರು ಇದ್ದಾರೆ. ಪ್ರತಿ ಐವರು ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಇರುವಂತೆ ಶಾಲೆ ನಿರ್ವಹಣೆ ಮಾಡಲಾಗುತ್ತಿದೆ.
ಮೂಕ ವೇದನೆಯಿಂದ ಜಗತ್ತನ್ನು ಎದುರಿಸುವ ಹೆಚ್ಚಿನ ಮಕ್ಕಳಿಗೆ, ತಮ್ಮ ಕೈಗಳಿಂದ ಏನನ್ನಾದರೂ ರಚಿಸಲು ಕಲಿಯುವ ಕ್ರಿಯೆಯು ಸ್ಪೂರ್ತಿದಾಯಕವಾಗಿದೆ. ಇದು ಅವರ ಭವಿಷ್ಯದ ಜೀವನೋಪಾಯವನ್ನು ಬೆಂಬಲಿಸುವ ಕೌಶಲ್ಯದೊಂದಿಗೆ ಅವರನ್ನು ಸಬಲಗೊಳಿಸುತ್ತದೆ. ಅಲ್ಲದೇ ಸೃಜನಶೀಲತೆ ಮತ್ತು ಸ್ವಾಭಿಮಾನವನ್ನು ಬೆಳೆಸುತ್ತದೆ" ಎಂದು ಶಾಲೆಯ ಪೋಷಕ-ಶಿಕ್ಷಕರ ಸಂಘದ (ಪಿಟಿಎ) ಅಧ್ಯಕ್ಷ ಶಿವಸ್-ಅಂಕರಾನ್ ಎಂ ಹೇಳಿದರು.