Midnight Sun: ನಮಗೆಲ್ಲ ಸಾಮಾನ್ಯವಾಗಿ ಸಂಜೆ ಆರೇಳು ಗಂಟೆಯಾಗುತ್ತಿದ್ದಂತೆ ಕತ್ತಲಾವರಿಸಿ, ರಾತ್ರಿ 10 ಗಂಟೆಯ ವೇಳೆಗೆ ಲೈಟ್ ಆಫ್ ಮಾಡಿ ನಿದ್ರೆಗೆ ಜಾರುವುದು ರೂಢಿ. ಆದರೆ ಭೂಮಿಯ ಮೇಲೊಂದು ವಿಸ್ಮಯಕಾರಿ ಜಾಗವಿದೆ, ಅಲ್ಲಿ ನಮಗೆ ತಿಳಿದಿರುವಂತಹ ಸಾಮಾನ್ಯ ರಾತ್ರಿಯೇ ಇರುವುದಿಲ್ಲ. ಅಚ್ಚರಿಯೆಂದರೆ ಅಲ್ಲಿ ರಾತ್ರಿಯ ಅವಧಿ ಕೇವಲ 40 ನಿಮಿಷಗಳು ಮಾತ್ರ. ಉಳಿದ 23 ಗಂಟೆ 20 ನಿಮಿಷ ಸೂರ್ಯ ಆಕಾಶದಲ್ಲೇ ಇರುತ್ತಾನೆ. ಮುಳುಗೋದೇ ಇಲ್ಲ.! ಅದರಂತೆ, ರಾತ್ರಿ 12 ಗಂಟೆಗೂ ಹಗಲು ಇದ್ದಂತೆ ಬೆಳಕು ಇರುತ್ತದೆ. ಇದಕ್ಕೆ "Midnight Sun" ಅಥವಾ "ಅರ್ಧರಾತ್ರಿಯ ಸೂರ್ಯ" ಅಂತ ಹೆಸರು. ಆ ದೇಶ ಯಾವುದು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
ಇದು ಎಲ್ಲಿ ನಡೆಯುತ್ತದೆ?
ಸಂಜೆಯಾದ ಕೂಡಲೇ ಲೈಟ್ ಹಾಕಿ ಮಲಗುವ ಅಭ್ಯಾಸ ನಮಗಿದೆ. ಆದರೆ ಭೂಮಿಯ ಉತ್ತರ ಭಾಗದಲ್ಲಿ ಒಂದು ದೇಶವಿದೆ ಅಲ್ಲಿ ರಾತ್ರಿ ಎಂದರೆ ಕೇವಲ 40 ನಿಮಿಷ. ಉಳಿದ 23 ಗಂಟೆಗೂ ಹೆಚ್ಚು ಸಮಯ ಸೂರ್ಯ ಆಕಾಶದಲ್ಲೇ ಇರುತ್ತಾನೆ. ರಾತ್ರಿ 12 ಗಂಟೆಗೂ ಹಗಲು ಇದ್ದಂತೆ ಬೆಳಕು ಇರುತ್ತದೆ. ಈ ಚಮತ್ಕಾರ ನಡೆಯುವುದು ನಾರ್ವೆ ದೇಶದಲ್ಲಿ.
ಅರ್ಧರಾತ್ರಿಯಲ್ಲೂ ಕತ್ತಲಾಗಲ್ಲ!
ಹೌದು, ನಾರ್ವೆ ದೇಶವು ಆರ್ಕ್ಟಿಕ್ ಸರ್ಕಲ್ ಗಿಂತ ಮೇಲೆ ಇರುವುದರಿಂದ ಪ್ರತಿ ವರ್ಷ ಮೇ ತಿಂಗಳ ಮಧ್ಯದಿಂದ ಜುಲೈ ತಿಂಗಳ ಕೊನೆಯವರೆಗೆ Midnight Sun ಕಾಣಬಹುದು. ಉತ್ತರ ನಾರ್ವೆಯ ಹ್ಯಾಮರ್‌ಫೆಸ್ಟ್ ಎಂಬ ನಗರದಲ್ಲಿ ಬೇಸಿಗೆಯಲ್ಲಿ ಕೇವಲ 40 ನಿಮಿಷ ಮಾತ್ರ ಬೆಳಕು ಕಡಿಮೆಯಾಗಿ ಮತ್ತೆ ಸೂರ್ಯ ಉದಯಿಸುತ್ತಾನೆ.
ಇನ್ನು ನಾರ್ವೆಯ ಅತ್ಯಂತ ಉತ್ತರ ಭಾಗದಲ್ಲಿರುವ ಸ್ವಾಲ್‌ಬಾರ್ಡ್ ಎಂಬ ದ್ವೀಪ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಭಿನ್ನವಾಗಿರುತ್ತದೆ. ಇಲ್ಲಿ ವರ್ಷದ 6 ತಿಂಗಳು ಕಾಲ ಸೂರ್ಯ ಮುಳುಗುವುದೇ ಇಲ್ಲ ಮತ್ತು ಇನ್ನುಳಿದ 6 ತಿಂಗಳು ಸೂರ್ಯ ಉದಯಿಸುವುದೇ ಇಲ್ಲ. ಅಂದರೆ ಆರು ತಿಂಗಳು ನಿರಂತರ ಹಗಲು ಹಾಗೂ ಆರು ತಿಂಗಳು ನಿರಂತರ ರಾತ್ರಿ ಇರುತ್ತದೆ. ಚಳಿಗಾಲದ ಸಮಯದಲ್ಲಿ ಇಲ್ಲಿ ಕತ್ತಲೆಯ ವಾತಾವರಣ ಇರಲಿದ್ದು, ಈ ಅವಧಿಯಲ್ಲಿ ಆಕಾಶದಲ್ಲಿ ಸುಂದರವಾದ ಉತ್ತರ ಧ್ರುವದ ಬೆಳಕು ಅಥವಾ ನಾರ್ತನ್ ಲೈಟ್ಸ್ ವಿಸ್ಮಯ ಕಣ್ಣಿಗೆ ಬೀಳುತ್ತದೆ.