Online Desk
ವಿಶೇಷ

ನೋಟಿನ ಮೇಲಿರೋ ನಂಬರ್ ಮಾತ್ರ ಅಲ್ಲ, ನೋಟಿನ ಹಿಂಭಾಗದಲ್ಲಿರೋ ಸ್ಮಾರಕ ನೋಡಿದಿರಾ? ಇಲ್ಲಿದೆ ಭಾರತದ ಭವ್ಯ ಪರಂಪರೆಯ ಕುರಿತ ಮಾಹಿತಿ

ನಿಮ್ಮ ಬಳಿ ಇರುವ ನೋಟಿನ ಹಿಂಭಾಗದಲ್ಲಿದೆ ಭಾರತದ ಭವ್ಯ ಪರಂಪರೆ ಐತಿಹಾಸಿಕ ಮಹತ್ವ ಗೊತ್ತಾ? ಯಾವ ನೋಟಿನಲ್ಲಿ ಯಾವ ಸ್ಮಾರಕವಿದೆ? ಇಲ್ಲಿದೆ ನೋಡಿ ಭಾರತದ ನೋಟುಗಳ ಮೇಲಿರುವ ಪ್ರಸಿದ್ಧ ಸ್ಮಾರಕಗಳ ಕುರಿತ ಅಚ್ಚರಿಯ ಮಾಹಿತಿ:

ನಾವು ಡೈಲಿ ಬಳಕೆ ಮಾಡೋ ಕರೆನ್ಸಿ ನೋಟುಗಳಲ್ಲಿ ಹೆಚ್ಚಾಗಿ ಅದು ಎಷ್ಟು ರೂಪಾಯಿ ನೋಟು ಎಂದು ಗುರುತಿಸಲು ಎಂದು ಗುರುತಿಸಲು ಅದರ ಬಣ್ಣ, ಹಾಗೂ ಅದರ ಮೇಲಿರುವ ನೋಟಿನ ಮೌಲ್ಯ ಮಾತ್ರವೇ ನೋಡುತ್ತೇವೆ; ಆದ್ರೆ, ನಿಮಗೆ ಗೊತ್ತಾ, ಆ ನೋಟುಗಳ ಹಿಂಭಾಗದಲ್ಲಿ ಭಾರತದ ಭವ್ಯ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಮತ್ತು ಕಲಾತ್ಮಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಸಿದ್ಧ ಸ್ಮಾರಕಗಳ ಚಿತ್ರಗಳನ್ನು ಮುದ್ರಿಸಲಾಗಿದೆ ಎಂದು? ಹೌದು, ಪ್ರತಿ ನೋಟಿನ ಹಿಂಭಾಗವು ಶ್ರೇಷ್ಠ ಇತಿಹಾಸ ಸಾರುವ ಸ್ಮಾರಕವಿದೆ. ಆ ಕುರಿತ ಮಾಹಿತಿ ಇಲ್ಲಿದೆ:

₹10 ನೋಟು – ಕೋನಾರ್ಕ್ ಸೂರ್ಯ ದೇವಾಲಯ (ಪುರಿ, ಒಡಿಶಾ)

₹10 ನೋಟು – ಕೋನಾರ್ಕ್ ಸೂರ್ಯ ದೇವಾಲಯ (ಪುರಿ, ಒಡಿಶಾ)

10 ರೂಪಾಯಿ ನೋಟಿನ ಮೇಲೆ ಒಡಿಶಾದ ಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಾಲಯದ ರಥದ ಚಕ್ರದ (ಕೋನಾರ್ಕ್ ಚಕ್ರ) ಚಿತ್ರವಿದೆ. 13ನೇ ಶತಮಾನದ ಈ ಅದ್ಭುತ ದೇವಾಲಯವನ್ನು ಕಲಿಂಗ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇಡೀ ದೇವಾಲಯವನ್ನು 24 ಚಕ್ರಗಳು ಮತ್ತು 7 ಕುದುರೆಗಳಿರುವ ಬೃಹತ್ ಸೂರ್ಯನ ರಥದ ಆಕಾರದಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಇದು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ.

₹20 ನೋಟು – ಎಲ್ಲೋರಾ ಗುಹೆಗಳು (ಮಹಾರಾಷ್ಟ್ರ)

₹20 ನೋಟು – ಎಲ್ಲೋರಾ ಗುಹೆಗಳು (ಮಹಾರಾಷ್ಟ್ರ)

10 ರೂಪಾಯಿ ನೋಟಿನ ಮೇಲೆ ಮಹಾರಾಷ್ಟ್ರದ ಔರಂಗಾಬಾದ್ (ಛತ್ರಪತಿ ಸಂಭಾಜಿನಗರ) ಜಿಲ್ಲೆಯಲ್ಲಿರುವ ಪ್ರಸಿದ್ಧ ಎಲ್ಲೋರಾ ಗುಹೆಗಳ ಚಿತ್ರವಿದೆ. ಇದು ಪ್ರಾಚೀನ ಭಾರತದ ಕಲ್ಲಿನಲ್ಲಿ ಕೆತ್ತಿದ ಅತ್ಯಂತ ದೊಡ್ಡ ಗುಹಾ ದೇವಾಲಯಗಳ ಸಂಕೀರ್ಣವಾಗಿದ್ದು, ಇಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳಿಗೆ ಸೇರಿದ 34 ಗುಹೆಗಳಿದ್ದು, ಇಲ್ಲಿನ ಏಕಶಿಲೆಯಲ್ಲಿ ಕೆತ್ತಲಾದ ಕೈಲಾಸನಾಥ ದೇವಾಲಯ ಜಗತ್ಪ್ರಸಿದ್ಧವಾಗಿದೆ.

₹50 ನೋಟು – ಹಂಪಿ ರಥ (ಕರ್ನಾಟಕ )

₹50 ನೋಟು – ಹಂಪಿ ರಥ (ಕರ್ನಾಟಕ )

50 ರೂಪಾಯಿ ನೋಟಿನಲ್ಲಿ ಕರ್ನಾಟಕದ ಹೆಮ್ಮೆಯ ಹಂಪಿಯ ವಿಜಯ ವಿಠಲ ದೇವಾಲಯದ ಕಲ್ಲಿನ ರಥವನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಜಗತ್ತಿಗೆ ಸಾರುವ ಈ ರಥವು ದ್ರಾವಿಡ ವಾಸ್ತುಶಿಲ್ಪದ ಅತ್ಯುನ್ನತ ಕಲಾಕೃತಿಗೆ ಸಾಕ್ಷಿಯಾಗಿದೆ. ಜೊತೆಗೆ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ.

₹100 ನೋಟು – ರಾಣಿ ಕಿ ವಾವ್ (ಗುಜರಾತ್)

₹100 ನೋಟು – ರಾಣಿ ಕಿ ವಾವ್ (ಗುಜರಾತ್)

ಗುಜರಾತ್‌ನ ಪಟಾನ್‌ನಲ್ಲಿರುವ 'ರಾಣಿ ಕಿ ವಾವ್' (ರಾಣಿಯ ಬಾವಿ) ಎಂಬ ಅದ್ಭುತ ಮೆಟ್ಟಿಲು ಬಾವಿಯ ಚಿತ್ರವನ್ನು ಈ ನೋಟಿನ ಮೇಲೆ ಮುದ್ರಿಸಲಾಗಿದೆ. ಇದನ್ನು 11 ನೇ ಶತಮಾನದಲ್ಲಿ ಸೋಲಂಕಿ ವಂಶದ ರಾಣಿ ಉದಯಮತಿ ತನ್ನ ಪತಿಯ ನೆನಪಿಗಾಗಿ ನಿರ್ಮಿಸಿದಳು. ಇನ್ನು ಇದರ ಗೋಡೆಗಳ ಮೇಲೆ ಭಗವಾನ್ ವಿಷ್ಣುವಿನ ದಶಾವತಾರಗಳ ಅದ್ಭುತ ಕೆತ್ತನೆಗಳಿವೆ.

₹200 ನೋಟು – ಸಾಂಚಿ ಸ್ತೂಪ (ಮಧ್ಯಪ್ರದೇಶ)

₹200 ನೋಟು – ಸಾಂಚಿ ಸ್ತೂಪ (ಮಧ್ಯಪ್ರದೇಶ)

ಮಧ್ಯಪ್ರದೇಶದ ರೇಸನ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಬೌದ್ಧ ಸ್ಮಾರಕವಾದ ಸಾಂಚಿ ಸ್ತೂಪದ ಚಿತ್ರ ಈ ನೋಟಿನಲ್ಲಿದೆ. ಇದನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದು, ಭಾರತದ ಅತ್ಯಂತ ಹಳೆಯ ಕಲ್ಲಿನ ನಿರ್ಮಿತಿಗಳಲ್ಲಿ ಒಂದಾಗಿದೆ.

₹500 ನೋಟು – ಕೆಂಪು ಕೋಟೆ (ದೆಹಲಿ)

₹500 ನೋಟು – ಕೆಂಪು ಕೋಟೆ (ದೆಹಲಿ)

ದೇಶದ ರಾಜಧಾನಿ ದೆಹಲಿಯಲ್ಲಿರುವ ಐತಿಹಾಸಿಕ ಕೆಂಪು ಕೋಟೆಯ (ರೆಡ್ ಫೋರ್ಟ್) ಚಿತ್ರವನ್ನು ಈ ನೋಟಿನ ಹಿಂಭಾಗದಲ್ಲಿ ನೀಡಲಾಗಿದೆ. ಮೊಘಲ್ ಚಕ್ರವರ್ತಿ ಷಾ ಜಹಾನ್ ಕೆಂಪು ಮರಳುಗಲ್ಲಿನಿಂದ ನಿರ್ಮಿಸಿದ ಈ ಕೋಟೆಯು ಭಾರತದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಪ್ರತೀಕವಾಗಿದೆ. ಇನ್ನು ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿಯವರು ಇಲ್ಲಿಂದಲೇ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಹಿರಿಯ ಶಾಸಕ HK ಪಾಟೀಲ್‌ಗೆ ತಪ್ಪಿದ ಸಚಿವ ಸ್ಥಾನ: 21 ಕಾಂಗ್ರೆಸ್ ಕೌನ್ಸಿಲರ್‌ಗಳ ಸಾಮೂಹಿಕ ರಾಜೀನಾಮೆ!

'ಬಿಜೆಪಿಯ ದುರಹಂಕಾರದ ವಿರುದ್ಧ ಜನಾದೇಶ': ತಮ್ಮ ಐತಿಹಾಸಿಕ ಗೆಲುವಿಗೆ ಮೂರು ಕಾರಣ ನೀಡಿದ ಪ್ರಶಾಂತ್ ಕಿಶೋರ್!

ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕೀಯದ ದರ್ಬಾರು: ಡಿಕೆಶಿ ಸಂಪುಟದಲ್ಲಿಯೂ 2ನೇ ತಲೆಮಾರಿನ ನಾಯಕರ ಕಾರುಬಾರು; ಸಾಮರ್ಥ್ಯಕ್ಕಿಂತ ಸಂಪರ್ಕ ಮುಖ್ಯವೇ?

ನಟಿ ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ನಾನು ಅವರ ಹೆಸರನ್ನೂ ಉಲ್ಲೇಖಿಸಿದ್ದೇನೆಯೇ? ಬಂಧನದ ಬಳಿಕ ಉದಯನಿಧಿ ಸ್ಟಾಲಿನ್