ಫೆಸೆಂಟ್ ದ್ವೀಪ 
ವಿಶೇಷ

6 ತಿಂಗಳು ಫ್ರಾನ್ಸ್, 6 ತಿಂಗಳು ಸ್ಪೇನ್; ವರ್ಷಕ್ಕೆ ಎರಡು ಬಾರಿ ದೇಶ ಬದಲಿಸುವ ದ್ವೀಪ ಇದು! ಈ ಪ್ರದೇಶದ ರಹಸ್ಯವೇನು ಗೊತ್ತಾ?

ಜಗತ್ತಿನಲ್ಲಿ ಹಲವು ವಿಚಿತ್ರ ದ್ವೀಪಗಳಿವೆ, ಆದರೆ ಈ ದ್ವೀಪ ಮಾತ್ರ ಎಲ್ಲಕ್ಕಿಂತ ವಿಭಿನ್ನ. ಏಕೆಂದರೆ ಈ ದ್ವೀಪ ವರ್ಷಕ್ಕೆ ಎರಡು ಬಾರಿ ತನ್ನ ದೇಶವನ್ನು ಬದಲಾಯಿಸುತ್ತದೆ. ಆರು ತಿಂಗಳು ಫ್ರಾನ್ಸ್ ದೇಶದ ಆಡಳಿತದಲ್ಲಿದ್ದರೆ, ಇನ್ನೂ ಆರು ತಿಂಗಳು ಸ್ಪೇನ್ ದೇಶದ ಆಡಳಿತಕ್ಕೆ ಹೋಗುತ್ತದೆ.

ಪ್ರಸ್ತುತ 100 ಕ್ಕೂ ಅಧಿಕ ರಾಷ್ಟ್ರಗಳು ಇಡೀ ವಿಶ್ವದಲ್ಲಿ ಗಡಿ ಸಮಸ್ಯೆಗಳನ್ನು ಹೊಂದಿವೆ, ಈಗಲೂ ಅದೆಷ್ಟೋ ದೇಶಗಳು ತಮ್ಮ ಗಡಿ ಬದಲಿಸಿ ಕೊಳ್ಳಲು ಹಾಗೂ ತಮ್ಮ ವಿಸ್ತರಣೆಯನ್ನು ದೊಡ್ಡದಾಗಿಸಲು ರಣಕಣದಲ್ಲಿ ಕಸರತ್ತು ನಡೆಸುತಿವೆ. ಆದರೆ, ಹೀಗೆ ಯುದ್ದ ಮಾಡದೇ ಕೇವಲ ಆರು ತಿಂಗಳು ನಾನು ಅದರ ಮಾಲೀಕ, ಇನ್ನಾರು ತಿಂಗಳು ನೀನು ಮಾಲೀಕ ಎಂದು ಒಪ್ಪಂದ ಮಾಡಿಕೊಂಡು ಮಾದರಿ ಆಡಳಿತ ನಡೆಸುತ್ತಿದೆ. ಹೌದು, ಜಗತ್ತಿನಲ್ಲಿ ಹಲವು ವಿಚಿತ್ರ ಪ್ರದೇಶಗಳ ಬಗ್ಗೆ ಕೇಳಿರುತ್ತೀರಿ! ಆದರೆ, ಈ ಪ್ರದೇಶ ಮಾತ್ರ ಎಲ್ಲಕ್ಕಿಂತ ವಿಭಿನ್ನ. ಯಾಕೆಂದರೆ ಈ ಪ್ರದೇಶ  ವರ್ಷಕ್ಕೆ ಎರಡು ಬಾರಿ ತನ್ನ ದೇಶವನ್ನು ಬದಲಾಯಿಸುತ್ತದೆ. ಆರು ತಿಂಗಳು ಫ್ರಾನ್ಸ್ ದೇಶದ ಆಡಳಿತದಲ್ಲಿದ್ದರೆ, ಇನ್ನೂ ಆರು ತಿಂಗಳು ಸ್ಪೇನ್ ದೇಶದ ಆಡಳಿತಕ್ಕೆ ಹೋಗುತ್ತದೆ. ಆ ಪ್ರದೇಶದ ಬಗ್ಗೆ ಇಲ್ಲಿದೆ ಮಾಹಿತಿ:

ಯಾವ ದ್ವೀಪ ಅದು?

ಫ್ರಾನ್ಸ್ ಮತ್ತು ಸ್ಪೇನ್ ದೇಶಗಳ ಗಡಿಭಾಗದಲ್ಲಿ ಹರಿಯುವ ಬಿಡಾಸೋವಾ ನದಿಯ ಮಧ್ಯಭಾಗದಲ್ಲಿ  ಫೆಸೆಂಟ್ ದ್ವೀಪ ನೆಲೆಸಿದೆ. ಕೇವಲ ಇನ್ನೂರು ಮೀಟರ್ ಉದ್ದವಿರುವ ಈ ಸಣ್ಣ ಭೂಭಾಗವನ್ನು ಸ್ಪ್ಯಾನಿಷ್ ಭಾಷೆಯಲ್ಲಿ ಇಸ್ಲಾ ಡಿ ಲಾಸ್ ಫೈಸಾನೆಸ್ ಹಾಗೂ ಫ್ರೆಂಚ್ ಭಾಷೆಯಲ್ಲಿ ಇಲ್ ಡೆಸ್ ಫೈಸಾನ್ಸ್ ಎಂದು ಕರೆಯಲಾಗುತ್ತದೆ. ಎರಡು ಪ್ರಬಲ ದೇಶಗಳು ಯಾವುದೇ ಯುದ್ಧವಿಲ್ಲದೆ, ಅತ್ಯಂತ ಶಾಂತಿಯುತವಾಗಿ ಈ ಪುಟ್ಟ ದ್ವೀಪದ ಆಡಳಿತವನ್ನು ವರ್ಷಕ್ಕೆ ಎರಡು ಬಾರಿ ಪರಸ್ಪರ ಬದಲಾಯಿಸಿಕೊಳ್ಳುತ್ತವೆ.

ಫೆಸೆಂಟ್ ದ್ವೀಪ

ಕಳೆದ 350 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವಿರುವ ಈ ನಿಯಮದ ಪ್ರಕಾರ ಆಡಳಿತವು, ಫೆಬ್ರವರಿ 1 ರಿಂದ ಜುಲೈ 31ವರೆಗಿನ ಆರು ತಿಂಗಳು ಸ್ಪೇನ್ ದೇಶದ ಆಡಳಿತಕ್ಕೆ ಒಳಪಟ್ಟಿರುತ್ತದೆ. ಆದರೆ, ಆಗಸ್ಟ್ 1 ರಿಂದ ಜನವರಿ 31ವರೆಗಿನ ಮುಂದಿನ ಆರು ತಿಂಗಳು ಫ್ರಾನ್ಸ್ ದೇಶದ ಆಡಳಿತಕ್ಕೆ ಒಳಪಡುತ್ತದೆ. ಹೀಗೆ, ಪ್ರತಿ ವರ್ಷ ಫೆಬ್ರವರಿ 1 ಮತ್ತು ಆಗಸ್ಟ್ 1 ರಂದು ಉಭಯ ದೇಶಗಳ ನೌಕಾಪಡೆಯ ಅಧಿಕಾರಿಗಳು ದ್ವೀಪದಲ್ಲಿ ಭೇಟಿಯಾಗಿ ಅಧಿಕೃತವಾಗಿ ಧ್ವಜ ಮತ್ತು ದಾಖಲೆಗಳನ್ನು ಹಸ್ತಾಂತರಿಸುವ ಸಣ್ಣ ಸಮಾರಂಭವನ್ನು ನಡೆಸುತ್ತಾರೆ.

ಈ ವಿಚಿತ್ರ ನಿಯಮಕ್ಕೆ ಕಾರಣವೇನು?

  • ಶಾಂತಿ ಒಪ್ಪಂದ (1659): 1659 ರಲ್ಲಿ ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ದೀರ್ಘಕಾಲದ ಯುದ್ಧವನ್ನು ಕೊನೆಗೊಳಿಸಲು ಈ ದ್ವೀಪವನ್ನು ತಟಸ್ಥ ಪ್ರದೇಶವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಲ್ಲಿ ಎರಡೂ ದೇಶಗಳು ಸೇರಿ 'ಪೈರೆನೀಸ್ ಒಪ್ಪಂದ'ಕ್ಕೆ ಸಹಿ ಹಾಕಿದವು.

  • ಜಂಟಿ ಮಾಲೀಕತ್ವ: ಒಪ್ಪಂದದ ನೆನಪಿಗಾಗಿ ಮತ್ತು ಉಭಯ ದೇಶಗಳ ಸಮಾನತೆಯನ್ನು ಸಾರಲು ಈ ದ್ವೀಪವನ್ನು ಯಾರೊಬ್ಬರಿಗೂ ಪೂರ್ಣವಾಗಿ ನೀಡದೆ, ಆರು ತಿಂಗಳ ಅವಧಿಗೆ ಹಂಚಿಕೊಳ್ಳುವ ನಿಯಮವನ್ನು ಮಾಡಲಾಯಿತು. ಅಂತರರಾಷ್ಟ್ರೀಯ ಕಾನೂನಿನಲ್ಲಿ ಇಂತಹ ಜಂಟಿ ಮಾಲೀಕತ್ವದ ಪ್ರದೇಶವನ್ನು ಕೊಂಡೊಮಿನಿಯಮ್ ಎಂದು ಕರೆಯಲಾಗುತ್ತದೆ.

ಏತನ್ಮಧ್ಯೆ, ಪ್ರಸ್ತುತ ಈ ದ್ವೀಪಕ್ಕೆ ಸಾರ್ವಜನಿಕರು ಅಥವಾ ಪ್ರವಾಸಿಗರು ಭೇಟಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇವಲ ನದಿಯ ದಂಡೆಯ ಮೇಲಿಂದ ಮಾತ್ರ ಜನರು ಇದನ್ನು ವೀಕ್ಷಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ವಿಧಾನ ಪರಿಷತ್ತಿನಲ್ಲಿ ಎರಡು ವಿಧೇಯಕಗಳು ಪಾಸ್

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೋ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ