ಕ್ರೀಡೆ

ದೊಡ್ಡ ಮೊತ್ತದತ್ತ ಇತರೆ ಭಾರತ

-ಇರಾನಿ ಕಪ್: ಮೊದಲ ದಿನವೇ ಮುಂಬೈ ಮೇಲೆ ಹಿಡಿತ
ಮುಂಬೈ:  ಬುಧವಾರ ಆರಂಭಗೊಂಡ ಮುಂಬೈ ವಿರುದ್ಧದ ಐದು ದಿನಗಳ ಇರಾನಿ ಕಪ್‌ನಲ್ಲಿ ಹರ್ಭಜನ್ ಸಿಂಗ್ ನಾಯಕತ್ವದ ಇತರೆ ಭಾರತ ತಂಡ ಮೊದಲ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 330 ರನ್ ಗಳಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ತಮ್ಮ ಉತ್ತಮ ಪ್ರದರ್ಶನದಿಂದ ಮುಂಬೈ ತಂಡಕ್ಕೆ ಆಸರೆಯಾದ ವಿಜಯ್, 206 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 116 ರನ್ ಗಳಿಸಿದರು. ಅವರ ಈ ಆಟಕ್ಕೆ ಕೈ ಜೋಡಿಸಿದ ಮತ್ತೊಬ್ಬ ಆರಂಭಿಕ ಶಿಖರ್ ಧವನ್ ಹಾಗೂ ಮಧ್ಯಮ ಕ್ರಮಾಂಕದ ಅಂಬಟಿ ರಾಯುಡು ಶತಕಾರ್ಧ ಗಳಿಸಿ, ಆತಿಥೇಯರ ವಿರುದ್ಧ ಮೊದಲ ದಿನ ಮೇಲುಗೈ ಸಾಧಿಸಲು ಸಾಧ್ಯವಾಯಿತು.
ವಿಜಯ್ ಎರಡನೇ ಶತಕ: ಕಳೆದ ವರ್ಷದ ರಣಜಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದ ರಾಜಸ್ಥಾನ ತಂಡ ವಿರುದ್ಧ ನಡೆದಿದ್ದ ಇರಾನಿ ಕಪ್ ಪಂದ್ಯದಲ್ಲೂ ಇತರೆ ಭಾರತ ತಂಡದ ವಿರುದ್ಧ ವಿಜಯ್ ಅವರು ದ್ವಿಶತಕ ಗಳಿಸಿದ್ದರು.
ಬುಧವಾರ ಮುಂಬೈ  ವಿರುದ್ಧದ ಪಂದ್ಯದಲ್ಲೂ ಶತಕ ಗಳಿಸಿರುವ ಅವರು ಸತತ ಎರಡು ಬಾರಿ ಇರಾನಿ ಕಪ್ ಪಂದ್ಯಾವಳಿಯಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಉತ್ತಮ ಆರಂಭ: ಟಾಸ್ ಗೆದ್ದಿದ್ದ ಮುಂಬೈ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ, ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಇತರೆ ಭಾರತ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ ಒಟ್ಟು 144 ರನ್ ಜೊತೆಯಾಟವಾಡಿತು.
ನಾಯಕ ಹಾಗೂ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ಅನುಪಸ್ಥಿತಿಯಲ್ಲಿ ದುಗುಡದೊಂದಿಗೇ ಕ್ರೀಸ್‌ಗೆ ಇಳಿದಿದ್ದ ಇತರೆ ಭಾರತ ತಂಡದ ಇನಿಂಗ್ಸ್‌ಗೆ ಭದ್ರ ಅಡಿಪಾಯ ದೊರಕಿತು. 39ನೇ ಓವರ್‌ನಲ್ಲಿ ಧವನ್ ಔಟಾದರೂ, ನಂತರ ಬಂದ ಮನೋಜ್ ತಿವಾರಿ ಹಾಗೂ ಕ್ರೀಸ್‌ನಲ್ಲಿದ್ದ ವಿಜಯ್, 2ನೇ ವಿಕೆಟ್‌ಗೆ 78 ರನ್ ಸೇರಿಸಿತು. ವೈಯಕ್ತಿಕ 37 ರನ್ ಗಳಿಸಿದ್ದ ತಿವಾರಿ, ಇನಿಂಗ್ಸ್‌ನ 59ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಆಗ, ವಿಜಯ್‌ಗೆ ಜೋಡಿಯಾಗಿದ್ದು ಆಂಬಟಿ ರಾಯುಡು.
ರಾಯುಡು ಜೊತೆಗೂಡಿದ ನಂತರ ವಿಜಯ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ರಾಯುಡು ಜೊತೆ ತಂಡದ ಮೊತ್ತಕ್ಕೆ ಕೇವಲ 9 ರನ್ ಸೇರಿಸುವಷ್ಟರಲ್ಲಿ ವಿಜಯ್ ಅವರು ನಿರ್ಗಮಿಸಿದರು. ಆಗ, ರಾಯುಡುಗೆ ಜೊತೆಯಾಗಿದ್ದು ಸುರೇಶ್ ರೈನಾ.
ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 291 ರನ್ ಆಗಿದ್ದಾಗ, ವೈಯಕ್ತಿಕವಾಗಿ 36 ರನ್ ಗಳಿಸಿದ್ದ ರಾಯುಡು, ರೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ಸ್ಲಿಪ್‌ನತ್ತ ಕ್ಯಾಚ್ ನೀಡಿದ್ದರು. ಆದರೆ, ಕೀಪರ್ ಆದಿತ್ಯ ತಾರೆ ಹಾಗೂ ಸ್ಲಿಪ್‌ನಲ್ಲಿದ್ದ ಜಾಫರ್ ಅವರ ನಡುವಿನ ಗೊಂದಲದಿಂದಾಗಿ ಕ್ಯಾಚ್ ಕೈ ಚೆಲ್ಲಿತು.
ಇದಾದ ನಂತರ, ಮುಂಬೈ ಬೌಲರ್‌ಗಳನ್ನು ಕೆಲ ಹೊತ್ತು ಕಾಡಿದ ಈ ಜೋಡಿ, 4ನೇ ವಿಕೆಟ್‌ಗೆ 78 ರನ್ ಸೇರಿಸುವಷ್ಟರಲ್ಲಿ ಬೇರ್ಪಟ್ಟಿತು. 84ನೇ ಓವರ್‌ನಲ್ಲಿ ರಾಯುಡು ವಿಕೆಟ್ ಒಪ್ಪಿಸಿ ಹೊರನಡೆದರು. ಆಗ, ತಂಡದ ಮೊತ್ತ 309 ರನ್. ರಾಯುಡು ನಂತರ ಬಂದ ವೃದ್ಧಿಮಾನ್ ಸಾಹಾ ಅವರು ಕೇವಲ 17 ರನ್ ಗಳಿಸಿ, ಪೆವಿಲಿಯನ್‌ಗೆ ಹಿಂದಿರುಗಿದರು.
ದಿನಾಂತ್ಯಕ್ಕೆ 36 ರನ್ ಗಳಿಸಿದ ಸುರೇಶ್ ರೈನಾ, ಖಾತೆ ತೆರೆಯದ ಹರ್ಭಜನ್ ಸಿಂಗ್ ಕ್ರೀಸ್‌ನಲ್ಲಿದ್ದರು.
ಅಚ್ಚರಿಯ ನಿರ್ಧಾರ: ಬೆಳಗ್ಗೆ ಟಾಸ್ ಗೆದ್ದ ಕೂಡಲೇ ಮುಂಬೈ ತಂಡದ ನಾಯಕ ಫೀಲ್ಡಿಂಗ್ ಆಯ್ದುಕೊಂಡಿದ್ದು, ಎಲ್ಲರ ಹುಬ್ಬೇರಿಸಿತ್ತು.
ಸೌರಾಷ್ಟ್ರ ವಿರುದ್ಧದ ರಣಜಿ ಫೈನಲ್ ಪಂದ್ಯದಲ್ಲೂ ಹೀಗೇ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಪ್ರವಾಸಿಗರನ್ನು ಕಟ್ಟಿ ಹಾಕಿದ್ದ ಮುಂಬೈ, ಈಗಲೂ ಅದೇ ತಂತ್ರವನ್ನು ಮುಂಬೈ ತಂಡದ ನಾಯಕ ಅಭಿಷೇಕ್ ನಾಯರ್ ಅನುಸರಿಸಿದ್ದಾರೆ ಎಂಬ ಅನಿಸಿಕೆಯನ್ನು ಭಾರತ ಇತರ ತಂಡ, ನಂತರ ಹುಸಿಯಾಗಿಸಿತು.

ಸ್ಕೋರ್ ಬೋರ್ಡ್
ಇತರೆ ಭಾರತ: 330/5 (90 ಓ.)
(ಬುಧವಾರ ದಿನಾಂತ್ಯಕ್ಕೆ)
ಶಿಖರ್ ಧವನ್ ಬೌಲ್ಡ್ ಬಿ ಠಾಕೂರ್ 63, ಮುರಳಿ ವಿಜಯ್ ಬೌಲ್ಡ್ ಬಿ ನಾಯರ್ 116, ಮನೋಜ್ ತಿವಾರಿ ಎಲ್‌ಬಿಡಬ್ಲ್ಯೂ ಬಿ ನಾಯರ್ 37, ಆಂಬಟಿ ರಾಯುಡು ಸಿ ಜಾಫರ್ ಬಿ ಶರ್ಮಾ 51, ಸುರೇಶ್ ರೈನಾ ಅಜೇಯ 36, ವೃದ್ಧಿಮಾನ್ ಸಾಹಾ ಎಲ್‌ಬಿಡಬ್ಲ್ಯೂ ಬಿ ಕುಲಕರ್ಣಿ 17, ಹರ್ಭಜನ್ ಸಿಂಗ್ (ಖಾತೆ ತೆರೆದಿಲ್ಲ)
ವಿಕೆಟ್ ಪತನ: 1-144, 2-222, 3-231, 4-309, 5-330.
ಬೌಲಿಂಗ್: ಖಾನ್ 14-4-41-0, ಕುಲಕರ್ಣಿ 17-3-64-1, ಶಾರ್ದೂಲ್ ಠಾಕೂರ್ 12-1-55-1, ದಾಭೋಲ್ಕರ್ 18-2-64-0, ನಾಯರ್ 19-9-49-2, ಚವಾಣ್ 5-0-33-0, ರೋಹಿತ್ ಶರ್ಮಾ 5-2-20-1.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!